
ಬೇಡ ಜಂಗಮ/ಜಂಗಮ ಜಾತಿ ಒಂದೇ ಇರೋದು. ಬೇಡ ಜಂಗಮ/ಜಂಗಮ ಜಾತಿಗೆ 8 ಕೋಡ್ ನೀಡಲಾಗಿದೆ. ಈ ಕೆಳ ಕಾಣಿಸಿದ ಜಾತಿ ಕೋಡ್ A-0162 ಬೇಡುವ ಜಂಗಮ, A-0163 ಬೇಡುವ ಜಂಗಮ ಲಿಂಗಾಯತ್, A-0839 ಲಿಂಗಾಯತ್ ದೀಕ್ಷಾ ಜಂಗಮ, A-0846 ಲಿಂಗಾಯತ್ ಜಂಗಮ, A-0882 ಲಿಂಗಾಯತ ಮಠಪತಿ, A-1523 ವೀರಶೈವ ಜಂಗಮ/ಜಂಗಮರು, A-1525 ವೀರಶೈವ ಲಿಂಗಾಯತ ಜಂಗಮ, A-1527 ವೀರಶಿವ ಜಂಗಮ ಎಂದು ಕೋಡ್ ಮುಖಾಂತರ ನಮೂದಿಸಲಾಗಿದೆ.
ಹಳೆ ಜಾತಿ ಗಣತಿಯಲ್ಲಿ ಮೇಲ್ಕಾಣಿಸಿದ ರೀತಿ ಬರೆಸಿರಬಹುದು. ಆದರೆ ಈ ಎಲ್ಲ ಕೋಡ್ ಜಾತಿಗಳು ಬೇಡ ಜಂಗಮ/ಜಂಗಮ ಜಾತಿಯಾಗಿದ್ದು, ಒಂದೇ ಆಗಿದೆ. ಈಗಿರುವ ಸರ್ವೇ ಪೂರ್ಣಗೊಂಡ ನಂತರ ಒಂದೇ ಎಂದು ಸರಕಾರ ಪರಿಗಣಿಸಬೇಕು. ಜಾತಿ ಆಧಾರಿತವಾಗಿ ಮತ್ತು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಆಧಾರಿತವಾಗಿ ಸಕಲ ಸೇವೆ ಸೌಲಭ್ಯ ದೊರೆಯುವುದರಿಂದ ಬೇಡ ಜಂಗಮ/ಜಂಗಮ ಜಾತಿ ಸೇರಿದಂತೆ ಯಾವ ಜಾತಿಯೂ ಸಕಲ ಸೇವೆ ಸೌಲಭ್ಯಗಳಿಂದ ವಂಚಿತರಾಗಬಾರದು. ಧರ್ಮ ಹಿಂದೂ ಜಾತಿ ಬೇಡ ಜಂಗಮ/ಜಂಗಮ ಆಗಿದೆ.
ಎಲ್ಲರಿಗೂ ಸರಿಸಮಾನವಾಗಿ ಸೌಲಭ್ಯ ದೊರೆಯಲು ಸರಿಯಾದ ಅಂಕಿ ಸಂಖ್ಯೆ ಸಾರ್ವಜನಿಕರು ನೀಡುವುದು ಅವಶ್ಯಕ. ವೀರಶೈವ-ಲಿಂಗಾಯತ, ಒಕ್ಕಲಿಗರು, ಕುರುಬರು ಇತ್ಯಾದಿ ಮೊದಲಿನಿಂದಲೂ ಗುರುತಿಸಿಕೊಂಡ ಬಂದ ದೊಡ್ಡ ದೊಡ್ಡ ಪಂಥದ ಜಾತಿಗಳನ್ನು ಒಂದೇ ಕಡೆ ಸೇರಿಸುವುದು ಉತ್ತಮ. ಕೂಡಿ ಬಾಳಿದರೆ ಸ್ವರ್ಗ ಸುಖ, ನಮ್ಮ ಸಲಹೆ ಮಾತ್ರ.