ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಕಂಡು ಬರುತ್ತಿರುವ ಗುಂಡಿ ರಸ್ತೆಗಳಿಗೆ ಹೊಣೆ ಯಾರು ಅಂತ ಕೇಳಿದರೆ ಸ್ಥಳೀಯ ಆಡಳಿತ ಅಂತ ಹೇಳಬಹುದು. ಲೋಕೋಪಯೋಗಿ ಇಲಾಖೆ ರಸ್ತೆ ಹೊರತುಪಡಿಸಿ ಇನ್ನುಳಿದ ರಸ್ತೆಗಳು ಸ್ಥಳೀಯ ಆಡಳಿತ ಎನಿಸಿಕೊಂಡಿರುವ ಗ್ರೇಟರ್ ಬೆಂಗಳೂರು ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯಿತಿಗೆ ಸಂಬಂಧಿಸಿರುತ್ತದೆ. ಅಷ್ಟೇ ಅಲ್ಲ ಲೋಕೋಪಯೋಗಿ ಇಲಾಖೆ ರಸ್ತೆ ಹೊರತುಪಡಿಸಿ ನಗರದ ಗುಂಡಿ ರಸ್ತೆಗಳು, ಬೀದಿ ದೀಪಗಳು, ಕಸ ವಿಲೇವಾರಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಇತ್ಯಾದಿ ಮೂಲಭೂತ ಸೌಕರ್ಯ ಸಮಸ್ಯೆಗಳು ಸ್ಥಳೀಯ ಆಡಳಿತವೇ ಸರಿಪಡಿಸಬೇಕು. ಈ ಸ್ಥಳೀಯ ಆಡಳಿತದ ಸಮಸ್ಯೆಗಳಿಗೆ ಎಲ್ಲದಕ್ಕೂ ಶಾಸಕ, ಸಚಿವರ ಭಾಗಿ ಅವಶ್ಯಕತೆ ಇದೆಯಾ? ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ತೆರಿಗೆ ಪಾವತಿ ಮಾಡುವುದು ಸ್ಥಳೀಯ ಆಡಳಿತಕ್ಕೆ ಅಂದಮೇಲೆ ಸ್ಥಳೀಯ ಆಡಳಿತವೇ ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಬಗೆಹರಿಸಬೇಕು. ಎಲ್ಲದಕ್ಕೂ ಶಾಸಕರು, ಸಚಿವರು ಸರ್ಕಾರವೇ ಮಧ್ಯಪ್ರವೇಶ ಮಾಡಲಿ ಎಂದರೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಆರಾಮದಾಯಕವಾಗಿರಬೇಕೆ.
ಗುಂಡಿ ರಸ್ತೆಗಳಿಗೆ ಬೃಹತ್ ಗಾತ್ರದ ವಾಹನಗಳೇ ಕಾರಣ
ಬೃಹತ್ ಗಾತ್ರದ ವಾಹನಗಳು ಏಳು-ಎಂಟು ಟನ್ ಸರಕುಗಳನ್ನು ಲೋಡ್ ಮಾಡಿಕೊಂಡು ಸಂಚಾರ ಮಾಡಿದರೆ. ಹೊಸ ರಸ್ತೆಗಳು ಕೇವಲ ಒಂದು ತಿಂಗಳಲ್ಲಿ ಹಾಳಾಗುತ್ತದೆ. ಸಾಮಾನ್ಯ ಡಾಂಬರು ರಸ್ತೆ ಅರ್ಧ ಇಂಚು ಇರುತ್ತದೆ. ಬೃಹತ್ ಗಾತ್ರದ ವಾಹನಗಳಿಗೆ ರಸ್ತೆಗಳು ತಡೆಯುವುದಿಲ್ಲ. 2-3 ಇಂಚು ಡಾಂಬರ್ ಹಾಕಿ ನೋಡಿ ಬೃಹತ್ ಗಾತ್ರದ ವಾಹನಗಳು ಓಡಾಡಿದ್ರು ರಸ್ತೆಗಳು ಹಾಳಾಗಿವುದಿಲ್ಲ. ರಸ್ತೆಗಳ ದುರಸ್ತಿ ಮಾಡುವ ಸಮಯ ಮಳೆಗಾಲ ನಿಂತು ಮೇಲೆ ಅದಕ್ಕೆ ರಸ್ತೆ ಗಟ್ಟಿಯಾಗಬೇಕಾದರೆ ನವೆಂಬರ್ ಡಿಸೆಂಬರ್ ನಿಂದ ಆರಂಭವಾಗಿ ಜೂನ್ ವರೆಗೆ ನಡೆದರೆ ಒಳ್ಳೆಯದು.
ವೀರೇಶ ಧೂಪದಮಠ