ಕೃಷಿ ಮತ್ತು ಸಹಕಾರ ವರ್ಗದ ಮೇಲೆ ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರದ ಪ್ರಭಾವದ ಒಂದು ಅಧ್ಯಯನ (Part-01)

By











"ಕೃಷಿ ಮತ್ತು ಸಹಕಾರ ವರ್ಗದ ಮೇಲೆ ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರದ ಪ್ರಭಾವದ ಒಂದು ಅಧ್ಯಯನ

ಪರಿವಿಡಿ

ಅಧ್ಯಾಯ I: ಪ್ರಸ್ತಾವನೆ
 
1.1 ಆಕಾಶವಾಣಿಯ ಹುಟ್ಟು ಹಾಗೂ ಬೆಳವಣಿಗೆ
1.2 ಆಕಾಶವಾಣಿಯ ಧೈಯಗಳು, ಕಾರ್ಯಗಳು ಹಾಗೂ ಪ್ರಭಾವಗಳು
1.3 ಆಕಾಶವಾಣಿ ಹಾಗೂ ಸ್ವಾಯತ್ತತೆ
1.4 ಆಕಾಶವಾಣಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಪ್ರಕಾರಗಳು, ಸಾಧನೆಗಳು
1.5 ಸಹಕಾರ ಬಾನುಲಿ ಕೇಂದ್ರ ಪ್ರಾರಂಭ
1.6 ಸಹಕಾರ ಬಾನುಲಿ ಕೇಂದ್ರ ಹುಲಕೋಟಿ-ಗದಗ ಸ್ಥಾಪನೆ
1.7 ಸಹಕಾರ ಬಾನುಲಿ ಕೇಂದ್ರಕ್ಕೆ ಒಳಪಡುವ ಗ್ರಾಮಗಳು
1.8 ಸಹಕಾರಿ ಬಾನುಲಿ ಕೇಂದ್ರದ ಕಾರ್ಯಕ್ರಮಗಳ ವಿವಿರ
1.9 ಸಂದರ್ಶಿಸಿದ ವಿಷಯ ಕೃಷಿ ಮತ್ತು ಸಹಕಾರ
 
ಅಧ್ಯಾಯ II: ಸಾಹಿತ್ಯದ ವಿಮರ್ಶೆ
 
ಅಧ್ಯಾಯ III: ವಿಧಾನಶಾಸ್ತ್ರ (ಸಂಶೋಧನಾ ವಿನ್ಯಾಸ ಮತ್ತು ವಿಧಾನಗಳು)
 
3.1 ಉದ್ದೇಶ
3.2 ಪರಿಕಲ್ಪನೆ
3.3 ವ್ಯಾಪ್ತಿ
3.4 ವಿಧಾನ
3.5 ಪ್ರಶ್ನಾವಳಿ
 
ಅಧ್ಯಾಯ IV ಸಂಶೋಧನೆಯ ಪ್ರಸ್ತುತಿ (ಫಲಿತಾಂಶಗಳು)
 
4.1 ಸಹಕಾರ ಬಾನುಲಿ ಕೇಂದ್ರ ಸಂದರ್ಶನ
4.2 ಮಾಹಿತಿ ವಿಶ್ಲೇಷಣೆ ಹಾಗೂ ವಿವರಣೆ
 
ಅಧ್ಯಾಯ V: ಸಾರಾಂಶ, ಪರಿಣಾಮಗಳು, ತೀರ್ಮಾನಗಳು (ಚರ್ಚೆ)
 
5.1 ಸಮಾರೋಪ
5.2 ಸಹಕಾರ ಬಾನುಲಿ ಕೇಂದ್ರದ ಕಿರು ಚಿತ್ರ ಹಾಗೂ ಬಾನುಲಿ ಕೇಂದ್ರದ ಸಹೋದ್ಯೋಗಿಗಳು
5.3 ಗ್ರಂಥ ಋಣ

ಅಧ್ಯಾಯ I: ಪ್ರಸ್ತಾವನೆ/ಪರಿಚಯ

    ಕೆಲವೇ ವರ್ಷಗಳಲ್ಲಿ ಬಾನುಲಿಗೆ ಶತಮಾನೋತ್ಸವ ಸಂಭ್ರಮ. 1924 ರಿಂದ ಇಲ್ಲಿಯವರೆಗೆ ಬಾನುಲಿ ನಡೆದು ಬಂದ ದಾರಿ ತುಂಬಾ ಅರ್ಥಪೂರ್ಣ, ರೋಮಾಂಚಕ, ಒಂದು ರೇಡಿಯೋ ಸೆಟ್ ಸುತ್ತ ಹತ್ತಾರು ಜನ ಕುಳಿತು ಕೇಳುವ ಕಾಲದಿಂದ ಇಂದಿನ ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್,

ಡಿಜಿಟಲ್ ಮಾಧ್ಯಮಗಳ ಮೂಲಕ ರೇಡಿಯೋ ಕೇಳಿ ಆನಂದಿಸುವವರೆಗಿನ ಕಥೆ ರೋಚಕ, ಹಲವು ಭೂಮಿಕೆಗಳಲ್ಲಿ ಲಭ್ಯವಿರುವ ಬಾನುಲಿ ಈಗ ಸರ್ವವ್ಯಾಪಿ. ಹೀಗಾಗಿ ಈಗಿನ ರೇಡಿಯೋ ಶೋತೃಗಳ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟಾಗಿದೆ. ರೇಡಿಯೋ ಸೆಟ್ ಅಲ್ಲದೇ ಡಿಟಿಎಚ್. ಕಾರ್ ರೇಡಿಯೋ ಸೆಟ್, ಮೊಬೈಲ್, ಆಪ್, ಅಂತರ್ಜಾಲಗಳ ಮೂಲಕ ಸರ್ವವ್ಯಾಪಿಯಾಗಿದೆ. ಸ್ವರೂಪದಲ್ಲಿ ವಾಮನನಾದರೂ ಪರಿಣಾಮದಲ್ಲಿ ತ್ರಿವಿಕ್ರಮ ಎನಿಸಿದೆ. ಪ್ರಸಾರ ಭಾರತಿ ಈ ಎಲ್ಲ ಮಾಧ್ಯಮಗಳನ್ನು ಕ್ರೋಢೀಕರಿಸಿ, ಸಮನ್ವಯಗೊಳಿಸಿ ಅಭಿವೃದ್ಧಿ-ಮಾಹಿತಿ-ಮನರಂಜನೆ-ವಾಣಿಜ್ಯೋದ್ದೇಶಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಹೊಸ ವರ್ಷದ ಕೊಡುಗೆಯಾಗಿ ಆಕಾಶವಾಣಿ 'ರಾಗಂ' ಎಂಬ 24 ಗಂಟೆಯ ಸಂಗೀತ ವಾಹಿನಿಯನ್ನು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಿತು. ದೇಶದ ಉದ್ದಗಲಕ್ಕೂ ಹರಡಿರುವ ಹಲವು ಹತ್ತು ಆಕಾಶವಾಣಿ ನಿಲಯಗಳ ಧ್ವನಿ ಭಂಡಾರದಿAದ ಆಯ್ದ ಉತ್ಕೃಷ್ಟ ಕಾರ್ಯಕ್ರಮಗಳು ಹಾಗೂ ನೇರ ಪ್ರಸಾರಗಳನ್ನು ಡಿಟಿಎಚ್, ಅಂತರ್ಜಾಲ ಹಾಗೂ ಆಪ್ ಮೂಲಕ ಲಭ್ಯಗೊಳಿಸಿ, ಕಾಲದೇಶಗಳ ಮಿತಿಯನ್ನು ಮೀರಿ ಶ್ರೀಸಾಮಾನ್ಯನಿಗೆ ತಲುಪಿಸುವ ಸ್ತುತ್ಯ ಪ್ರಯತ್ನವೊಂದನ್ನು ಆಕಾಶವಾಣಿ ಇತ್ತೀಚೆಗೆ ನಡೆಸಿತು. ಪ್ರಸಾರ ಭಾರತೀಯ ಅಂಗಗಳಾದ ರೇಡಿಯೋ ಹಾಗೂ ದೂರದರ್ಶನದ ಸಹಭಾಗಿತ್ವ ಇನ್ನೂ ಔಪಚಾರಿಕ ಸ್ಥಿತಿಯಲ್ಲಿದೆ.

ಈ ಉದ್ಯಮ ಚುರುಕುಗೊಳ್ಳಲು ವೃತ್ತಿಪರ ರೀತಿಯಲ್ಲಿ ಹೊಂದಾಣಿಕೆ ಹಾಗೂ ಪರಸ್ಪರ ಕಾರ್ಯಕ್ರಮಗಳ ನಿರಂತರ ಪ್ರಚಾರದಿಂದ ಪ್ರಸಾರ ಭಾರತಿಗೆ ಮತ್ತಷ್ಟು ಲಾಭವಾಗುವ ಸಾಧ್ಯತೆಯಿದೆ. ರೇಡಿಯೋ ಹಾಗೂ ದೂರದರ್ಶನಗಳು ಸಾಮಾಜಿಕ ಜಾಲತಾಣಗಳ ಸಂಪೂರ್ಣ ಲಾಭ ಇನ್ನೂ ಪಡೆದುಕೊಳ್ಳಬೇಕಿದೆ. ಫೇಸ್ ಬುಕ್ ಒಂದರ ಹಿಂಬಾಲಕರೇ 2030ರ ವೇಳೆಗೆ 5 ಬಿಲಿಯನ್ ಆಗುವ ನಿರೀಕ್ಷೆಯಿದೆ. ಅಲ್ಲದೆ ಟ್ವಿಟರ್, ಇನ್ಸಾಗ್ರಾಮ್ ನಂತಹ ಶಕ್ತಿದಾಯಕ ಸಾಮಾಜಿಕ ಜಾಲತಾಣಗಳನ್ನು ಆಕಾಶವಾಣಿ, ದೂರದರ್ಶನ ತಮ್ಮ ಬ್ರಾಂಡ್ ಬೆಳೆಸಿಕೊಳ್ಳಲು ಸಮರೋಪಾದಿಯಲ್ಲಿ ಬಳಸಬಹುದು. ಪ್ರತಿ ರೇಡಿಯೋ ಕೇಂದ್ರವೂ ತನ್ನದೇ ಆದ ವೆಬ್‌ಸೈಟ್ ಹೊಂದಿ ದಿನನಿತ್ಯದ ಬೆಳವಣಿಗೆಯನ್ನು ದಾಖಲಿಸಿಕೊಂಡು ಶೋತೃಗಳೊಡನೆ ನೇರ ಚಾಟಿಂಗ್ ನಡೆಸುವ ವ್ಯವಸ್ಥೆ ರೂಢಿಸಿಕೊಳ್ಳಬೇಕು.

ರೇಡಿಯೋ ಒಂದು ಕಾಸ್ಟ್ ಎಫೆಕ್ಟಿವ್ ಮಾಧ್ಯಮ, ಹೆಚ್ಚಿನ ವರಮಾನ ಜಾಹಿರಾತಿನಿಂದಲೇ ಬರಬೇಕು. ಟೆಲಿವಿಷನ್‌ನಲ್ಲಿ ಈ ಚಿತ್ರ ಬೇರೆಯೇ ಆಗಿದೆ. ಶೇ 60ಕ್ಕೂ ಹೆಚ್ಚು ವರಮಾನ ಖಾಸಗೀ ದೂರದರ್ಶನ ವಾಹಿನಿಗಳ ಚಂದಾ ಹಣದಿಂದ ಬರುತ್ತದೆ. ಕೇವಲ ಶೇ 20 ರಿಂದ 30 ರಷ್ಟು ಆದಾಯ ಖಾಸಗೀ ದೂರದರ್ಶನಗಳಿಗೆ ಜಾಹಿರಾತಿನಿಂದ ಬರುತ್ತದೆ. ಬಿಬಿಸಿಯಂತಹ ಸಂಸ್ಥೆಯನ್ನು ನಡೆಸಲು ಅದರ ಖರ್ಚಿನ ಬಹುಪಾಲು ಲೈಸೆನ್ಸ್ ಶುಲ್ಕದಿಂದ ಬರುತ್ತದೆ. ಫಿಕಿ, ಕೆಪಿಎಮ್‌ಜಿ ವರದಿಯಂತೆ ಭಾರತದ ಮಾಧ್ಯಮ ಹಾಗೂ ಮನರಂಜನಾ ಉದ್ಯಮ 161 ದಶಲಕ್ಷ ಟಿವಿ ಮನೆಗಳನ್ನು, 64067 ವಾರ್ತಾ ಪತ್ರಿಕೆಗಳು, 2 ಸಾವಿರ ಮಲ್ಟಿಪ್ಲೆಕ್ಸ್ಗಳು, 214 ದಶಲಕ್ಷ ಅಂತರ್ಜಾಲ ಬಳಕೆದಾರರನ್ನು ಹಲವಾರು ಭೂಮಿಕೆಗಳ ಮೂಲಕ ಪ್ರಸ್ತುತಗೊಂಡಿರುವ ಬಾನುಲಿಯ ಅಸಂಖ್ಯ

ಕೇಳುಗರನ್ನು ತಲುಪುತ್ತದೆ. ಮಾಹಿತಿ, ಮನರಂಜನೆ ಉದ್ಯಮದಿಂದ ಬರುವ ಒಟ್ಟು ಜಾಹಿರಾತಿನ ವರಮಾನ 2004 ರಲ್ಲಿ 41400 ಕೋಟಿ ರೂಪಾಯಿಗಳಷ್ಟಿದ್ದು 2019 ಕ್ಕೆ 81600 ಕೋಟಿ ರೂಪಾಯಿ ತಲುಪುವ ನಿರೀಕ್ಷೆಯಿದೆ. ಇದರ ಶೇ. 4 ರಷ್ಟು ಮಾತ್ರ ಅಂದರೆ 2004 ರಲ್ಲಿ ರೇಡಿಯೋ ಜಾಹಿರಾತಿನ ಪಾಲು 172 ಬಿಲಿಯನ್ ರೂಪಾಯಿಗಳು. 2014 ರ ಮಾಧ್ಯಮಗಳ ಜಾಹಿರಾತಿನ ವರಮಾನದಲ್ಲಿ ಸರ್ಕಾರ ನೀಡಿರುವ ಪಾಲು 998,34 ಕೋಟಿ ರೂಗಳು. ದ ಮ್ಯಾಡಿಸನ್ ಅಡ್ವಟೈಸಿಂಗ್ ರಿಪೋರ್ಟ 2016 ರ ಪ್ರಕಾರ ಭಾರತದ ಜಾಹಿರಾತು ಉದ್ಯಮ 2015 ರಲ್ಲಿ 17.60% ಬೆಳವಣಿಗೆಯನ್ನು ಕಂಡರೆ 2016 ರಲ್ಲಿ ಅದು 168% ಬೆಳವಣಿಗೆಯನ್ನು ಕಾಣುವ ನಿರೀಕ್ಷೆ ಇದೆ. 2015 ರಲ್ಲಿ 6586 ಕೋಟಿ ಹಣವನ್ನು ಅದು ಮಾರುಕಟ್ಟೆಗೆ ಸೇರಿಸಿದೆ.

ಮುದ್ರಣ ಮಾಧ್ಯಮವನ್ನು ಹಿಂದಿಕ್ಕಿ ಟಿವಿ ಉದ್ಯಮ 39% ಭಾಗದ ಜಾಹೀರಾತನ್ನು ತನ್ನದಾಗಿಸಿಕೊಂಡಿದೆ. 2015 ರಲ್ಲಿ ಈ ಉದ್ಯಮದಲ್ಲಿ ಜಾಹೀರಾತು ವೆಚ್ಚ 17261 ಕೋಟಿ, ಮುದ್ರಣ ಮಾಧ್ಯಮ ಎರಡನೇ ದೊಡ್ಡ ಉದ್ಯಮವಾಗಿ ಹೊರಹೊಮ್ಮಿದ್ದು ಒಟ್ಟಾರೆ ಜಾಹೀರಾತಿನಲ್ಲಿ 38% ಭಾಗವನ್ನು ತನ್ನದಾಗಿಸಿಕೊಂಡು 16935 ಕೋಟಿ ಗಳಿಕೆಯನ್ನು ಮಾಡಿದೆ. ಡಿಜಿಟಲ್ ಮಾಧ್ಯಮ 29% ಭಾಗವನ್ನು ಹೊಂದಿ ಮೂರನೇ ಸ್ಥಾನದಲ್ಲಿದ್ದು ಒಟ್ಟಾರೆ ಜಾಹೀರಾತಿನಲ್ಲಿ 12%, ಅಂದರೆ 5000 ಕೋಟಿ ಗಳಿಕೆಯನ್ನು 2015ರಲ್ಲಿ ದಾಖಲಿಸಿದೆ. ತರಂಗಾAತರಗಳ ಕುರಿತಾದ ಸರ್ವೋಚ್ಛ ನ್ಯಾಯಾಲಯದ ಮಹತ್ವದ ತೀರ್ಪಿನ ನಂತರ ರೇಡಿಯೋ ಹಾಗೂ ದೂರದರ್ಶನದ ಖಾಸಗೀಕರಣ ಪ್ರಾರಂಭವಾಗಿ ಇಂದು 830 ಕ್ಕೂ ಹೆಚ್ಚು ಖಾಸಗಿ ದೂರದರ್ಶನದ ವಾಹಿನಿಗಳು

ಪ್ರಸಾರೋದ್ಯಮದಲ್ಲಿ ತೊಡಗಿವೆ. ಇದರಲ್ಲಿ 400 ಕ್ಕೂ ಹೆಚ್ಚು ವಾರ್ತಾ ವಾಹಿನಿಗಳು. 400 ಕ್ಕೂ ಹೆಚ್ಚು ಮನರಂಜನೆ ಮತ್ತು ಇತರ ವಾಹಿನಿಗಳು. ಆಕಾಶವಾಣಿಯ 423 ಪ್ರಸಾರಕೇಂದ್ರಗಳಲ್ಲದೇ 240 ಕ್ಕೂ ಹೆಚ್ಚು ಖಾಸಗಿ ರೇಡಿಯೋ ಕೇಂದ್ರಗಳು ಇವೆ. 243 ಖಾಸಗಿ ರೇಡಿಯೋ ಕೇಂದ್ರಗಳು 86 ನಗರಗಳಲ್ಲಿ ಪ್ರಸಾರ ಮಾಡುತ್ತಿವೆ. 1999-2000 ದ ಮೊದಲ ಹಂತದ ಮತ್ತು 2005-2006 ರ ಎರಡನೇ ಹಂತದ ರೇಡಿಯೋ ತರಂಗಾAತರಗಳ ಹರಾಜಿನ ನಂತರ, ಮೊದಲ ಹಂತದಲ್ಲಿ 21 ಖಾಸಗಿ ರೇಡಿಯೋ ವಾಹಿನಿಗಳು ಹಾಗೂ 2 ನೇ ಹಂತದಲ್ಲಿ 220 ಖಾಸಗಿ ರೇಡಿಯೋ ವಾಹಿನಿಗಳು ಕಾರ್ಯಾರಂಭ ಮಾಡಿದವು. 3 ನೇ ಹಂತದ ತರಂಗಾAತರದ ಹರಾಜಿನಲ್ಲಿ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ನಗರಗಳಿಗೆ ಈ ಪ್ರಸಾರ ಲಾಭ ದೊರೆಯಲಿದೆ.

ಜಮ್ಮು-ಕಾಶ್ಮೀರ ಹಾಗೂ ಪೂರ್ವೋತ್ತರ ರಾಜ್ಯಗಳ 1 ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಇರುವ 11 ಪಟ್ಟಣಗಳಲ್ಲೂ ಪ್ರಸಾರ ವ್ಯವಸ್ಥೆ ಪ್ರಾರಂಭವಾಗಲಿದೆ. ಮುಂದಿನ 5 ವರ್ಷಗಳಲ್ಲಿ ರೇಡಿಯೋದಿಂದ ಬರುವ ಜಾಹಿರಾತಿನ ವರಮಾನ ದ್ವಿಗುಣಗೊಂಡು 3900 ಕೋಟಿ ತಲುಪುವ ಸಾಧ್ಯತೆ ಇದೆ ಎಂದು ಕ್ರಿಸಿಲ್ ಸಂಸ್ಥೆ ಅಭಿಪ್ರಾಯ ಪಟ್ಟಿದೆ, ರೇಡಿಯೋ ಪ್ರಸಾರಣ ವ್ಯಾಪ್ತಿ ಪ್ರದೇಶದ ವಿಸ್ತರಣೆ, ಸ್ಥಳೀಯ ಜಾಹಿರಾತುಗಳು, ಲವು ಭೂಮಿಕೆಗಳ ಮುಖೇನ ಲಭ್ಯವಿರುವ ರೇಡಿಯೋ ಕಾಠ್ಯಕ್ರಮಗಳು, ಚಲನೆಯಲ್ಲೂ ಲಭ್ಯವಿರುವ ಪ್ರಸರಣ ಸಂಕೇತಗಳು, ರೇಡಿಯೋ ಉದ್ಯಮವನ್ನು ಮುಂದಿನ ವರ್ಷಗಳಲ್ಲಿ ಹೆಚ್ಚು ಲಾಭದತ್ತ ಕೊಂಡೊಯ್ಯಲಿವೆ. ನಾಲ್ಕು ಮಹಾನಗರಗಳಲ್ಲಿ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ ವಾರವೊಂದರಲ್ಲಿ ರೇಡಿಯೋಗಾಗಿ ಮೀಸಲಿಟ್ಟ ಸಮಯ:

ದೆಹಲಿ-614 ನಿಮಿಷ, ಮುಂಬಯಿ- 567 ನಿಮಿಷ, ಬೆಂಗಳೂರು-653 ನಿಮಿಷ, ಕೊಲ್ಕತ್ತ-624 ನಿಮಿಷ. ರೇಡಿಯೋ ತರಂಗಾAತರಗಳ 3ನೇ ಹಂತದ ಹರಾಜಿನಲ್ಲಿ ಸುಮಾರು 284 ಪಟ್ಟಣಗಳು ಅದರ ವ್ಯಾಪ್ತಿಗೆ ಬಂದು 535 ಹೊಸ ರೇಡಿಯೋ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಖಾಸಗೀ ರೇಡಿಯೋ ಉದ್ಯಮಿಗಳ ಕೋರಿಕೆಯಾದ 15 ವರ್ಷಗಳ ಪರವಾನಗಿ, ಒಂದು ನಗರ ಅಥವಾ ಪಟ್ಟಣದಲ್ಲಿ ಹಲವು ತರಂಗಾAತರಗಳಲ್ಲಿ ಪ್ರಸಾರ ಮಾಡುವ ಒಡೆತನ ಹೊಂದಿರಲು ಅನುಮತಿ, ಇವನ್ನು ಸರ್ಕಾರ ಈಡೇರಿಸಿದರೆ ರೇಡಿಯೋ ಮತ್ತಷ್ಟು ಪ್ರಬಲವಾಗಿ ಬೇರೂರುತ್ತದೆ ಎಂಬುದು ಖಾಸಗಿ ಉದ್ಯಮಿಗಳ ಅಭಿಪ್ರಾಯ. ಇಷ್ಟಾದರೂ ರೇಡಿಯೋಗೆ ತನ್ನದೇ ಆದ ಕೆಲವು ಸವಾಲುಗಳಿವೆ.

ಏರುತ್ತಿರುವ ದರಗಳು, ಶೋತೃ ಮಾಪನಾ ವಿಧಾನ (ರಾಮ್) ಗೌರವಧನ ಹಾಗೂ ಡಿಜಿಟಲ್ ಮಾಧ್ಯಮದಿಂದಾಗಿ ದಿನನಿತ್ಯ ಎದುರಿಸಬೇಕಾಗಿ ಬಂದಿರುವ ಸವಾಲುಗಳು ಇನ್ನೂ ಬಾಧಿಸುತ್ತಲೇ ಇವೆ. ಭಾರತದ ಮಾಧ್ಯಮ ಹಾಗೂ ಮನರಂಜನೆ ಕ್ಷೇತ್ರದ ಬೆಳವಣಿಗೆ ಆಶಾದಾಯಕವಾಗಿದೆ. ಕೇಬಲ್ ದೂರದರ್ಶನದ ಡಿಜಿಟಲೀಕರಣ ಎಫ್. ಎಮ್. ರೇಡಿಯೋ ತರಂಗಾAತರಗಳ ಹರಾಜಿನ 3ನೇ ಹಂತ, ವಿದೇಶಿ ಬಂಡವಾಳ ಹೂಡಿಕೆ ಮಿತಿಯಲ್ಲಿ ಹೆಚ್ಚಳ, ಮಾಧ್ಯಮ ಹಾಗೂ ಮನರಂಜನೆ ಉದ್ಯಮದ ಸಬಲೀಕರಣಕ್ಕೆ ಮತ್ತಷ್ಟು ಇಂಬು ಕೊಡಲಿದೆ.

Centenary Of Radio, Ubiquitous Presence Of Radio, Prasar Bharati's Media Consolidation, Development-Information-Entertainment Role, 24-Hour Music Channel 'Raagam', All India Radio, Doordarshan, Social Media Integration, Professional Alignment Between Radio And Doordarshan, Direct Audience Interaction,