ಕೃಷಿ ಮತ್ತು ಸಹಕಾರ ವರ್ಗದ ಮೇಲೆ ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರದ ಪ್ರಭಾವದ ಒಂದು ಅಧ್ಯಯನ (Part-02)

By
Click to Learn More 


1.1 ಆಕಾಶವಾಣಿಯ ಹುಟ್ಟು ಹಾಗೂ ಬೆಳವಣಿಗೆ

ಸಂವಹನ :

ನಿರ್ದಿಷ್ಟ ಉದ್ದೇಶದಿಂದ ಮಾತು, ಧ್ವನಿ, ಸಂಜ್ಞೆ ಮುಂತಾದವುಗಳ ಮೂಲಕ ನಡೆವ ಸಂಭಾಷಣೆಯನ್ನು ಬಹು ಸರಳವಾಗಿ ಸಂವಹನ ಎಂದು ಹೇಳಬಹುದು. ನಿರ್ದಿಷ್ಟ ಉದ್ದೇಶವೆಂದರೆ ಒಬ್ಬ ಸಂಭಾಷಣೆಕಾರ ಇನ್ನೊಬ್ಬನಿಗೆ ತಾನು ನೀಡಬೇಕಾದ ಮಾಹಿತಿಯನ್ನು ನೀಡುವುದು.

ಇಲ್ಲಿ ಬಹುಮುಖ್ಯವಾದ ಅಂಶಗಳು ಮಾಹಿತಿ ನೀಡುವವ, ಮಾಹಿತಿ ಪಡೆಯುವವ, ಮಾಹಿತಿ ಹಾಗೂ ಈ ಪ್ರಕ್ರಿಯೆ ನಡೆಯಲು ಬೇಕಾದ ಮಾಧ್ಯಮ. ಈ ಪ್ರಕ್ರಿಯೆ ಜಗತ್ತಿನಲ್ಲಿ ಜೀವ ಹುಟ್ಟಿದಂದಿನಿAದ ಇದೆ. ಪ್ರಕೃತಿಯಲ್ಲಿ ಇರುವ ಅನೇಕ ಜೀವ-ಜಂತುಗಳಲ್ಲಿ ಈ ಕ್ರಿಯೆ ಸಹಜವಾಗಿ ನಡೆಯುತ್ತದೆ. ಕಾಗೆಯೊಂದಗುಳ ಕಂಡರೆ ಕರೆವುದು ತನ್ನ ಬಳಗವ ಎಂದು ಬಸವಣ್ಣನವರು ಹೇಳಿದುದರಲ್ಲೂ ಸಂವಹನವೇ ಇದೆ. ಇಲ್ಲಿ ಒಂದು ಕಾಗೆ ತನ್ನ ಸಮೂಹಕ್ಕೆ ಮಾಹಿತಿಯನ್ನು ಕೂಗುವಿಕೆ ಅಥವಾ 'ಧ್ವನಿ' ಯ ಮೂಲಕ ತಲುಪಿಸುತ್ತದೆ. ಮಳೆ ಬರುವ ಮುನ್ನ ಗುಡುಗು, ಮಿಂಚು, ಸಿಡಿಲುಗಳು ಪ್ರಕೃತಿ ಜಗತ್ತಿಗೆ ನೀಡುವ ಮುನ್ಸೂಚನೆ. ಇಲ್ಲಿ ಸಂವಹನ ಬಹುತೇಕವಾಗಿ 'ಸಂಜ್ಞೆ ಅಥವಾ 'ಧ್ವನಿ' ಗಳ ಮೂಲಕ ನಡೆಯುತ್ತದೆ.

ಆದರೆ ಮಾತನಾಡಬಲ್ಲ ಮಾನವ ಮಾಹಿತಿಯನ್ನು ಮಾತಿನ, ಧ್ವನಿಯ ಹಾಗೂ ಸಂಜ್ಞೆಗಳ ಮೂಲಕ ಇತರರಿಗೆ ನೀಡಲು ಪ್ರಾರಂಭಿಸಿದ. ಸಮಾಜದ ವ್ಯಾಪ್ತಿ ಕಿರಿದಾಗಿದ್ದಾಗ ಈ ಮಾಹಿತಿಯ ವಿನಿಮಯ ಇಬ್ಬರು ವ್ಯಕ್ತಿಗಳ ನಡುವೆ, ವ್ಯಕ್ತಿ - ಸಮುದಾಯದ ನಡುವೆ, ಗುಂಪು ಗುಂಪುಗಳ ನಡುವೆ ನಡೆಯುತ್ತಿತ್ತು. ಹೀಗೆ ಬಾಯಿಂದ ಬಾಯಿಗೆ ಹರಿದು ಬಂದ ಮಾಹಿತಿಗೆ ವೇದ-ಉಪನಿಷತ್ತುಗಳು, ಜನಪದ ಸಂಗೀತದ ಪರಂಪರೆ ಉತ್ತಮ ಉದಾಹರಣೆಗಳು, ಹಬ್ಬ-ಹರಿದಿನಗಳ ಆಚರಣೆಗಳು ರೂಢಿ, ನೀತಿ, ಸಂಪ್ರದಾಯಗಳು ಬಾಯಿಂದ ಬಾಯಿಗೆ ಹರಿದು ಆಚರಣೆಗೆ ಬಂದ ಮಾಹಿತಿಗಳೆ, ಈ ಹಂತದಲ್ಲಿ ಜನಸಂಖ್ಯೆ ಕಡಿಮೆಯಿತ್ತು. ಪುಟ್ಟ ಪುಟ್ಟ ಹಳ್ಳಿಗಳಲ್ಲಿ ಒಂದು ಬುಡಕಟ್ಟಿಗೆ ಸೇರಿದ ಜನ ಸಣ್ಣ-ಸಣ್ಣ ಗುಂಪುಗಳಲ್ಲಿ ವಾಸಿಸುತ್ತಿದ್ದರು.

ಅವರ ಅಗತ್ಯಗಳು ತೀರ ಕಡಿಮೆಯಿದ್ದು ಅವನ್ನು ತಾವೇ ತಮ್ಮತಮ್ಮಲ್ಲೇ ಪೂರೈಸಿಕೊಳ್ಳುತ್ತಿದ್ದರು. ಸಮಾಜ ಆಗ ಬಹಳ ಸರಳವಾಗಿತ್ತು. ಆದರೆ ಜನಸಂಖ್ಯೆ ಹೆಚ್ಚಿದಂತೆ ಅಗತ್ಯಗಳೂ ದ್ವಿಗುಣವಾಗಿ ಉತ್ಪಾದನೆಯಲ್ಲಿ ಹೆಚ್ಚಳ ಅಗತ್ಯಗಳನ್ನು ಪೂರೈಸಬಲ್ಲ ಸ್ಥಳಗಳಿಗೆ ವಲಸೆ ಹೋದರು. ಇದರಿಂದ ವಸ್ತುಗಳ ಹಾಗೂ ಜನರ ಸಾಗಾಟವೂ ಹೆಚ್ಚಿತು. ಈ ಎರಡರ ವೇಗದ ಗತಿ ತೀವ್ರವಾದಾಗ ಕಾರ್ಖಾನೆಗಳು ಹುಟ್ಟಿಕೊಂಡವು. 19ನೇ ಶತಮಾನದಲ್ಲಿ ಆದ ಕೈಗಾರಿಕಾಕರಣ ಸಾಮಾಜಿಕ ಹಾಗೂ ಆರ್ಥಿಕವಾಗಿ ಮಹತ್ತರ ಬದಲಾವಣೆಗಳಿಗೆ ನಾಂದಿಯಾಯಿತು. ಬೇರೆ ಬೇರೆ ಭಾಗದ, ಆಶೋತ್ತರಗಳ, ಹಿತಾಸಕ್ತಿಗಳ, ಬೇಡಿಕೆಗಳ ಜನ ಎಲ್ಲೆಡೆಯೂ ಕಂಡುಬAದರು.

ಇವರಿಗೆ ಮೊದಲಿನಂತೆ ಬಾಯಿಂದ ಬಾಯಿಗೆ ಮಾಹಿತಿಯನ್ನು ಸಾಗಿಸುವುದು ಸಾಧ್ಯವಿರಲಿಲ್ಲ. ಸಮಾಜ ಸಂಕೀರ್ಣವಾಗ ಹತ್ತಿತು. ಮಾಹಿತಿಯನ್ನು ಪೂರೈಸುವ ಪತ್ರಿಕೆಗಳು ಅಲ್ಲಲ್ಲಿ ಇದ್ದರೂ ಸಾಗಾಟದ ತೊಂದರೆಯಿAದ ಅವು ಕೆಲವು ಭಾಗಗಳಿಗೆ ತಲುಪುವುದೂ ಸಾಧ್ಯವಿರಲಿಲ್ಲ. ಇನ್ನು ಕೆಲವು ಭಾಗಗಳಿಗೆ ತಲುಪಲು ವಾರಗಳೇ ಬೇಕಾಗುತ್ತಿದ್ದವು. ಆದ್ದರಿಂದ ಶೀಘ್ರವಾಗಿ ದೂರದವರೆಗೂ ತಲುಪಬಲ್ಲ ಮಾಧ್ಯಮದ ಅವಶ್ಯಕತೆ ಇತ್ತು. 19ನೇ ಶತಮಾನದ ಸಂಶೋಧನೆಗಳ ವರದಾನ 1844 ರಲ್ಲಿ ವಿದ್ಯುತ್ ತಂತಿಗಳ ಮೂಲಕ 'ಮೋರ್ಸ ಕೋಡ್' ಗಳನ್ನು ಬಳಸಿ ಸಂದೇಶಗಳನ್ನು ರವಾನಿಸಲು ಸಾಧ್ಯವಾಯಿತು. ಇದರಿಂದ ಟೆಲಿಗ್ರಫಿಯ ಉದಯವಾಯಿತು.

ನಂತರ 1876 ರಲ್ಲಿ ಗ್ರಹಾಂ ಬೆಲ್ ಕಂಡುಹಿಡಿದ ಟೆಲಿಫೋನ್ ಮಾದರಿಯ ಉಪಕರಣದಿಂದ ಸಂವಹನದಲ್ಲಿ ಧ್ವನಿಯನ್ನು ಕೇಳಲು ಸಹಾಯವಾಯಿತು. ಈ ಎರಡು ಅನ್ವೇಷಣೆಗಳು ಶೀಘ್ರವಾದ ಸಂವಹನಕ್ಕೆ ನೆರವಾದವು. ಆದರೆ ಈ ಎರಡೂ ಉಪಕರಣಗಳಲ್ಲಿ ವಿದ್ಯುತ್ ತಂತಿಯ ಅಗತ್ಯವಿತ್ತು. ಅದಿಲ್ಲದೇ ಸಂವಹನ ಸಾಧ್ಯವೇ ಇರದಿದ್ದುದು ಇವುಗಳ ಮುಖ್ಯ ನ್ಯೂನ್ಯತೆಯಾಗಿತ್ತು. 19ನೇ ಶತಮಾನದ ಕೊನೆಯ ದಶಕದಲ್ಲಿ ಮಾರ್ಕೋನಿ ಕಂಡು ಹಿಡಿದ ರೇಡಿಯೋ ಈ ಎರಡೂ ಉಪಕರಣಗಳ ತೊಂದರೆಯನ್ನು ನೀಗಿಸಿತ್ತು. ಅದರಲ್ಲಿ ಸಂದೇಶಗಳು ತಂತಿಯ ಸಹಾಯವಿಲ್ಲದೆ ವಿದ್ಯುತ್ ತರಂಗಗಳ ಮೂಲಕ ಬೆಳಕಿನಂತೆ ವೇಗವಾಗಿ ಚಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದವು.

1906ರ ಹೊತ್ತಿಗೆ ಇದರ ತಾಂತ್ರಿಕತೆಯನ್ನು ಅಭಿವೃದ್ಧಿಗೊಳಿಸಿ ಮಾತಿನ ಧ್ವನಿ ರೇಡಿಯೋದ ಮೂಲಕ ಕೇಳಲು ಅಥವಾ ಪ್ರಸಾರವಾಗಲು ಸಾಧ್ಯವಾಯಿತು. ಆನಂತರ ತ್ವರಿತಗತಿಯಲ್ಲಿ ರೇಡಿಯೊ ತಂತ್ರಜ್ಞಾನ ಹೆಚ್ಚಿನ ಅಭಿವೃದ್ಧಿ ಹೊಂದಿ 1922 ರ ತ ಹೊತ್ತಿಗೆ ಅಮೇರಿಕ, ಒಂದು ಬುಡಕಟ್ಟಿಗೆ ಸೇರಿದ ಜನ ಸಣ್ಣ-ಸಣ್ಣ ಗುಂಪುಗಳಲ್ಲಿ ವಾಸಿಸುತ್ತಿದ್ದರು. ಅವರ ಅಗತ್ಯಗಳು ತೀರ ಕಡಿಮೆಯಿದ್ದು ಅವನ್ನು ತಾವೇ ತಮ್ಮತಮ್ಮಲ್ಲೇ ಪೂರೈಸಿಕೊಳ್ಳುತ್ತಿದ್ದರು. ಸಮಾಜ ಆಗ ಬಹಳ ಸರಳವಾಗಿತ್ತು. ಆದರೆ ಜನಸಂಖ್ಯೆ ಹೆಚ್ಚಿದಂತೆ ಅಗತ್ಯಗಳೂ ದ್ವಿಗುಣವಾಗಿ ಉತ್ಪಾದನೆಯಲ್ಲಿ ಹೆಚ್ಚಳ ಅಗತ್ಯಗಳನ್ನು ಪೂರೈಸಬಲ್ಲ ಸ್ಥಳಗಳಿಗೆ ವಲಸೆ ಹೋದರು. ಇದರಿಂದ ವಸ್ತುಗಳ ಹಾಗೂ ಜನರ ಸಾಗಾಟವೂ ಹೆಚ್ಚಿತು.

ಈ ಎರಡರ ವೇಗದ ಗತಿ ತೀವ್ರವಾದಾಗ ಕಾರ್ಖಾನೆಗಳು ಹುಟ್ಟಿಕೊಂಡವು. 19ನೇ ಶತಮಾನದಲ್ಲಿ ಆದ ಕೈಗಾರಿಕಾಕರಣ ಸಾಮಾಜಿಕ ಹಾಗೂ ಆರ್ಥಿಕವಾಗಿ ಮಹತ್ತರ ಬದಲಾವಣೆಗಳಿಗೆ ನಾಂದಿಯಾಯಿತು. ಬೇರೆ ಬೇರೆ ಭಾಗದ, ಆಶೋತ್ತರಗಳ, ಹಿತಾಸಕ್ತಿಗಳ, ಬೇಡಿಕೆಗಳ ಜನ ಎಲ್ಲೆಡೆಯೂ ಕಂಡುಬAದರು. ಇವರಿಗೆ ಮೊದಲಿನಂತೆ ಬಾಯಿಂದ ಬಾಯಿಗೆ ಮಾಹಿತಿಯನ್ನು ಸಾಗಿಸುವುದು ಸಾಧ್ಯವಿರಲಿಲ್ಲ. ಸಮಾಜ ಸಂಕೀರ್ಣವಾಗ ಹತ್ತಿತು. ಮಾಹಿತಿಯನ್ನು ಪೂರೈಸುವ ಪತ್ರಿಕೆಗಳು ಅಲ್ಲಲ್ಲಿ ಇದ್ದರೂ ಸಾಗಾಟದ ತೊಂದರೆಯಿAದ ಅವು ಕೆಲವು ಭಾಗಗಳಿಗೆ ತಲುಪುವುದೂ ಸಾಧ್ಯವಿರಲಿಲ್ಲ. ಇನ್ನು ಕೆಲವು ಭಾಗಗಳಿಗೆ ತಲುಪಲು ವಾರಗಳೇ ಬೇಕಾಗುತ್ತಿದ್ದವು. ಆದ್ದರಿಂದ ಶೀಘ್ರವಾಗಿ ದೂರದವರೆಗೂ ತಲುಪಬಲ್ಲ ಮಾಧ್ಯಮದ ಅವಶ್ಯಕತೆ ಇತ್ತು.

ಕೊಡಬಾರದೆಂದು ವೈಸ್‌ರಾಯ್ ಸರ್ಕಾರದಲ್ಲಿ ಒಂದು ವಿಭಾಗವನ್ನು ಅದಕ್ಕಾಗಿ -ಸ್ಥಾಪಿಸಿ ಕೇಂದ್ರಗಳ ಉಸ್ತುವಾರಿಯನ್ನು ನೀಡಿದರು. ದ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಕಂಪನಿ ಕೇವಲ 15 ಲಕ್ಷಗಳಷ್ಟು ಬಂಡವಾಳದಲ್ಲಿ ಆರಂಭವಾಯಿತು. ಇದರಲ್ಲಿ 4.5 ಲಕ್ಷಗಳಷ್ಟು ಹಣ ಬಾಂಬೆ ಹಾಗೂ ಕಲ್ಕತ್ತಾ ಕೇಂದ್ರಗಳ ಸ್ಥಾಪನೆಗೆ ವೆಚ್ಚವಾಯಿತು. ನಂತರ 1936 ಜೂನ್ 8 ರಂದು ಅದು 'ಆಲ್ ಇಂಡಿಯಾ ರೇಡಿಯೋ ” ಎಂದು ಪುನರ್ನಾಮಕರಣಗೊಂಡಿತು. ಇದರ ಹಿಂದೆಯೂ ಒಂದು ಕುತೂಹಲಕಾರಿ ಕತೆ ಇದೆ.
1935 ಅಗಸ್ಟ್ನಲ್ಲಿ ಬಿಬಿಸಿ (ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್) ಲಯೊನೆಲ್ ಫೀಲ್ಡನ್ ಎಂಬ ಬ್ರಿಟಿಷ್ ಅಧಿಕಾರಿಯನ್ನು ಕಂಟ್ರೋಲರ್ ಆಫ್ ಬ್ರಾಡ್‌ಕಾಸ್ಟಿಂಗ್ ಆಗಿ ಭಾರತಕ್ಕೆ ನೇಮಿಸಿತು.

ಫೀಲ್ಡನ್‌ಗೆ 'ಇಂಡಿಯನ್ ಸ್ಟೇಟ್ ಬ್ರಾಡ್‌ಕಾಸ್ಟಿಂಗ್ ಸರ್ವಿಸ್' ಎಂಬ ಹೆಸರು ಇಷ್ಟವಿರಲಿಲ್ಲ. ಭಾರತೀಯರಿಗೆ 'ಬ್ರಾಡ್‌ಕಾಸ್ಟಿಂಗ್' ಎಂಬ ಪದವನ್ನು ಸರಿಯಾಗಿ ಉಚ್ಚರಿಸಲು ಬರುವುದಿಲ್ಲ ಎನ್ನುವುದು ಅವರ ವಾದ. ಅವರು 'ಆಲ್ ಇಂಡಿಯಾ ರೇಡಿಯೊ' ಎಂಬ ಹೆಸರನ್ನು ಸೆಕ್ರೆಟೇರಿಯಟ್‌ನ ಸದಸ್ಯರ ಮುಂದೆ ಪ್ರಸ್ತಾಪಿಸಿದಾಗ ಅವರು ಅದನ್ನು ತೀವ್ರವಾಗಿ ವಿರೋಧಿಸಿದರು. ಆಗ ಲಾರ್ಡ ಲಿನ್‌ತ್‌ಗೋ ಭಾರತದಲ್ಲಿ ಬ್ರಿಟಿಷ್ ವೈಸ್‌ರಾಯ್ ಆಗಿದ್ದರು. ಅವರು ಏರ್ಪಡಿಸಿದ್ದ ಒಂದು ಔತಣಕೂಟದಲ್ಲಿ ಮಾತಿನ ನವ ಮಾಡಿಕೊಂಡು ಫೀಲ್ಡನ್ ವೈಸ್‌ರಾಯ್ ಅವರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ 'ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಸರ್ವಿಸ್' ಎಂಬುದು ಬಹಳ 'ಕ್ಲಮಿ' ಅಲ್ಲವೇ ಎಂದು ಕೇಳುತ್ತಾ ಭಾರತೀಯರಿಗೆ ಅದರ ಉಚ್ಚಾರಣೆ ಕಷ್ಟವಾಗಿ ಅವರು ತಪ್ಪಾಗಿ ಉಚ್ಛರಿಸುವ

ಸಾಧ್ಯತೆಗಳೇ ಹೆಚ್ಚು ಎಂಬ ತರ್ಕವನ್ನು ಮುಂದಿಟ್ಟರು. ಅದು ವೈಸ್‌ರಾಯ್ ನಿಜವೆನ್ನಿಸಿತು. ಆದರೆ ಫೀಲ್ಡನ್ ಅವರಿಗೆ ತಮ್ಮ ಮನದಲ್ಲಿದ್ದ 'ಆಲ್ ಇಂಡಿಯಾ ರೇಡಿಯೋ' ಎಂಬ ಹೆಸರನ್ನು ತಾವೇ ಸೂಚಿಸಲು ಹಿಂಜರಿಕೆಯಾಗಿ ವೈಸ್‌ರಾಯ್ ಅವರ ಬಾಯಿಂದಲೇ ಅದನ್ನು ಹೊರಡಿಸುವ ಪ್ರಯತ್ನ ಮಾಡಿದರು. ಅದಕ್ಕಾಗಿ ಆ ಹೆಸರಲ್ಲಿ ರೇಡಿಯೋ ಎಂದಿದ್ದರೆ ಉಚ್ಛಾರಣೆಗೆ ಸುಲಭವಾದೀತು ಎಂತಲೂ, ಇಡಿಯ ಭಾರತಕ್ಕೆ (ಆಲ್ ಇಂಡಿಯಾ) ಅದು ಅನ್ವಯವಾಗುವಂತೆ ಇಂಡಿಯಾ ಇರಲಿ ಎಂತಲೂ ಹೇಳುತ್ತಾರೆ. ಆಗ ವೈಸ್‌ರಾಯ್ ಅವರೇ 'ಆಲ್ ಇಂಡಿಯಾ ರೇಡಿಯೋ' ಎಂಬ ಹೆಸರು ಹೇಗಿದೆ ಎಂದು ಪ್ರಶ್ನಿಸುತ್ತಾರೆ. ಫೀಲ್ಡನ್ ತಮ್ಮ ಮನದಲ್ಲಿದ್ದ ಹೆಸರು ಅವರ ಬಾಯಲ್ಲಿಯೂ ಬಂದದ್ದಕ್ಕೆ ಹುಸಿ ಆಶ್ಚರ್ಯ ವ್ಯಕ್ತಪಡಿಸುತ್ತ ಸಂತಸದಿAದ ಒಪ್ಪಿಕೊಳ್ಳುತ್ತಾರೆ.

ಸ್ವತಃ ವೈಸ್‌ರಾಯ್ ಅವರೇ ಸೂಚಿಸಿದ ಹೆಸರಾದ್ದರಿಂದ ಅದೇ ಜಾರಿಗೆ ಬರುತ್ತದೆ. ಹೀಗೆ 'ಆಲ್ ಇಂಡಿಯಾ ರೇಡಿಯೋ' ಹುಟ್ಟಿಕೊಂಡಿತು. ಇದನ್ನು ಫೀಲ್ಡನ್ ಅವರು 1960 ರಲ್ಲಿ ಪ್ರಕಟಿಸಿದ 'ದ ನ್ಯಾಚುರಲ್ ಬೆಂಟ್' ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಆಕಾಶವಾಣಿಯ ಪ್ರಕಟಣೆಯಾದ 'ದ ಇಂಡಿಯನ್ ಲಿಸ್‌ನ ತನ್ನ ಸಂಪಾದಕೀಯದಲ್ಲಿ 'ಆಲ್ ಇಂಡಿಯಾ ರೇಡಿಯೊ-ಇದರ ಮೊದಲ ಅಕ್ಷರಗಳಾದ ಎ.ಆಯ್.ಆರ್ ನಾವು ಏನಾಗ ಬಯಸಿದ್ದೇವೆ ಎಂಬುದನ್ನು ಹೇಳಿದೆ. ಭಾರತ ಆಕಾಶದಷ್ಟು (ಗಾಳಿ-ಇಂಗ್ಲೀಷಿನ ಏರ್) ವಿಸ್ತಾರವಾದ ದೇಶ ...' ಎಂದು ಈ ಹೊಸ ಹೆಸರನ್ನು ಬಣ್ಣಿಸಿತು, ಮುಂದಿನ ನಾಲ್ಕು ವರ್ಷಗಳ ಕಾಲ ಪ್ರಸಾರ ಕಾರ್ಯ ನಿರಂತರವಾಗಿ ನಡೆಯಿತು.

ಜೊತೆಗೆ ದೆಹಲಿಯಲ್ಲಿ ದೇಶದ ಮೂರನೇ ಕೇಂದ್ರ ಹುಟ್ಟಿಕೊಂಡಿತು. ರೇಡಿಯೊ ಲೈಸೆನ್ಸ್ಗಳು ಮೂರು ಪಟ್ಟು ಹೆಚ್ಚಿದವು. ಬಿಬಿಸಿಯೇ ಭಾರತದಲ್ಲಿ ಐಬಿಸಿಯನ್ನು (ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಕಂಪನಿ) ನಿಯಂತ್ರಿಸುತ್ತಿತ್ತು. ಎರಿಕ್ ಡನ್ಸನ್ ಎಂಬುವವರನ್ನು ಐಬಿಸಿಯ ಜನರಲ್ ಮ್ಯಾನೇಜರ್ ಆಗಿ ಅದು ಲಂಡನ್ನಿನಿAದ ಕಳಿಸಿತ್ತು. ಮುಂಬೈ ಹಾಗೂ ಕಲ್ಕತ್ತಾ ಆಕಾಶವಾಣಿಗಳಿಗೆ ಇನ್ನೂ ಅನೇಕರು ಲಂಡನ್ನಿನಿAದಲೇ ಬಂದಿದ್ದರು. ಹಾಗೇ ಸ್ಥಳೀಯ ಪ್ರತಿಭೆಗಳನ್ನೂ ಈ ಅಧಿಕಾರಿಗಳು ಬೆಳಕಿಗೆ ತಂದಿದ್ದರು. ಆಗ ಬಂಗಾಳದ ಹೆಸರಾಂತ ಗಾಯಕರಾಗಿದ್ದ ಪಂಕಜ ಮಲಿಕ್ ಅವರು 1927 ಸೆಪ್ಟೆಂಬರ್ 26ರಂದು ಕಲ್ಕತ್ತಾ ಆಕಾಶವಾಣಿಯಿಂದ ಮೊದಲ ಬಾರಿಗೆ ಹಾಡಿದರು.

ಅಂದು ಮುಂಬೈನಲ್ಲೂ ಶೋತೃಗಳು ಆ ಹಾಡನ್ನು ಏಕಕಾಲದಲ್ಲಿ ಕೇಳಿದ್ದು ಆ ಕಾಲದ ವಿಶೇಷವಾಗಿತ್ತು. 1935ರ ಆಯವ್ಯಯ ಪಟ್ಟಿಯಲ್ಲಿ ಭಾರತದಲ್ಲಿ ಆಕಾಶವಾಣಿಯ ಪ್ರಸಾರಕಾರ್ಯದ ಸ್ಥಾಪನೆಗೆ 40 ಲಕ್ಷ ರೂಪಾಯಿಗಳ ಸಹಾಯಧನ ದೊರೆಯಿತು. ಭಾರತ ಸರ್ಕಾರ ಬಿ.ಬಿ.ಸಿ.ಯಲ್ಲಿ ರೇಡಿಯೋ ತಂತ್ರಜ್ಞಾನದ ಬಗ್ಗೆ ಹೆಚ್ಚು ಮಾಹಿತಿ ಇರುವ ಅಧಿಕಾರಿ ಎಚ್.ಎಲ್.ಕ್ರಿಕ್ ಅವರನ್ನು ಭಾರತಕ್ಕೆ 1936 ಜನವರಿ 23ರಂದು ಕರೆಸಿ ಭಾರತದಲ್ಲಿ ವ್ಯವಸ್ಥಿತವಾಗಿ ಪ್ರಸಾರ ವ್ಯವಸ್ಥೆಯನ್ನು ನಿರ್ವಹಿಸಲು ಸಲಹೆಗಳನ್ನು ನೀಡಲು ಸೂಚಿಸಿತು. ಅವರು ಭಾರತದೆಲ್ಲೆಡೆ ಸಂಚರಿಸಿ ಪ್ರಸಾರಕಾರ್ಯ ಎಲ್ಲೆಡೆ ಕೇಳುವಂತಾಗಬೇಕಾದರೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಪ್ರಸಾರ ಕೇಂದ್ರಗಳನ್ನು ಸ್ಥಾಪಿಸಲು ಸೂಚಿಸಿ ಅವುಗಳ ಸ್ಥಾಪನೆಗೆ ಸ್ಥಳಗಳನ್ನೂ ತೋರಿಸಿದರು.

ಮತ್ತು ಆಕಾಶವಾಣಿಗೆ ಸಂಬAಧಿಸಿದ ಸಂಶೋಧನೆಗಳನ್ನು ಮಾಡುವ ಬಗ್ಗೆ ಒಂದು ಕೇಂದ್ರ ಪ್ರಯೋಗಶಾಲೆಯನ್ನು ಸ್ಥಾಪಿಸಬೇಕೆಂದೂ ಸಲಹೆ ಕೊಟ್ಟರು. ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ 40 ಲಕ್ಷ ರೂಪಾಯಿಗಳಲ್ಲಿ ಎಲ್ಲ ಕಡೆಯೂ ಪ್ರೇಷಕಗಳನ್ನು ಸ್ಥಾಪಿಸಿ ರೇಡಿಯೋ ಕೇಂದ್ರಗಳ ಸರಮಾಲೆಯನ್ನು ಸ್ಥಾಪಿಸುವುದು ಅಸಾಧ್ಯವಾಗಿತ್ತು. ಆದರೆ ಎದೆಗುಂದದ ಆಲ್ ಇಂಡಿಯಾ ರೇಡಿಯೋ, ಸಿ.ಡಬ್ಲ್ಯು,ಗಾಯ್ಕರ್ ಎಂಬ ಇನ್ನೊಬ್ಬ ಬಿಬಿಸಿ ತಜ್ಞರ ಸಲಹೆ ಕೇಳಿತು. ಅವರು ಅದೇ ಅಗಸ್ಟ್ ಹೊತ್ತಿಗೆ ಆಲ್ ಇಂಡಿಯಾ ರೇಡಿಯೋದ ಮೊದಲ ಚೀಫ್ ಎಂಜಿನೀಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ಸೂಚನೆಗಳ ಫಲವಾಗಿ 1939ರ ಕೊನೆಯಲ್ಲಿ 40 ಲಕ್ಷ ರೂಪಾಯಿಗಳ ಸಹಾಯಧನದಲ್ಲೇ ದೆಹಲಿ, ಮುಂಬೈ, ಕಲ್ಕತ್ತಾ,

ಮದಾಸ್, ಲಾಹೋರ್, ಲಖೋ, ತಿರುಚನಾಪಳ್ಳಿ, ಢಾಕಾ ಮತ್ತು ಪೆಷಾವರಗಳಲ್ಲಿ ಆಕಾಶವಾಣಿ ಜಾಲ ಆರಂಭವಾಯಿತು. ದೆಹಲಿ ಈ ಜಾಲದ ಕೇಂದ್ರ ಕಛೇರಿಯಾಗಿತ್ತು. ಎರಡನೇ ಜಾಗತಿಕ ಯುದ್ಧದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ರೇಡಿಯೊ ಅದಕ್ಕೆ ಸಿದ್ಧವಾಗಬೇಕಾಯಿತು. ದಿನದ ಸುದ್ದಿಗಳನ್ನು ಪ್ರಸಾರ ಮಾಡಲು ಹಾಗೂ ವಿವಿಧ ವಿಷಯಗಳ ಕುರಿತ ಸರ್ಕಾರದ ಅಭಿಪ್ರಾಯವನ್ನು ಜನರಿಗೆ ತಲುಪಿಸಲು ಸರ್ಕಾರ ರೇಡಿಯೋವನ್ನೆ ಹೆಚ್ಚು ಬಳಸಿತು. ಪ್ರಸಾರಾವಧಿ ಗಣನೀಯವಾಗಿ ಹೆಚ್ಚಿತು. ಇತರ ಕೇಂದ್ರಗಳಿಗೆ ಮಾಹಿತಿ ಹಾಗೂ ಸುದ್ದಿಯನ್ನು ನಿರಂತರವಾಗಿ ನೀಡಲು ಕೇಂದ್ರ ಸುದ್ದಿ ವಿಭಾಗವು ತೆರೆಯಲ್ಪಟ್ಟಿತು. ಜನರಲ್ಲಿ ಯುದ್ಧಭೀತಿಯನ್ನು ಅಳಿಸಲು ಹಾಗೂ ಯುದ್ಧಕ್ಕೆ ಅವರ ಸಹಾನುಭೂತಿ ಇರುವಂತೆ ಮಾಡಲು ಭಾಷಣಗಳು ಹಾಗೂ

ರೂಪಕಗಳನ್ನು ರೂಪಿಸಿ ಹೆಚ್ಚು ಹೆಚ್ಚು ಪ್ರಸಾರ ಮಾಡಲಾಯ್ತು. ಎರಡು ಅತಿಶಕ್ತಿ ಶಾರ್ಟವೇವ್ ಟ್ರಾನ್ಸಮಿಟರ್‌ಗಳ ಸ್ಥಾಪನೆ ಆಧುನಿಕ ಯುದ್ಧಗಳ ಸಂದರ್ಭದಲ್ಲಿ ಪ್ರಸಾರದ ಮಹತ್ವವನ್ನು ತೋರಿಸಿತು. ಇಲ್ಲಿಂದ ಪೂರ್ವ ಹಾಗೂ ಆಗ್ನೆಯ ಏಷ್ಯಾ, ಮಧ್ಯ ಪ್ರಾಚ್ಯ ಹಾಗೂ ಯುರೋಪ್ ದೇಶಗಳಿಗೆ ಆಯಾ ಭಾಷೆಗಳಲ್ಲಿ ಮಾಹಿತಿಯನ್ನು ಬಿತ್ತರಿಸಲಾಗುತ್ತಿತ್ತು. ಇದು ಆಲ್ ಇಂಡಿಯಾ ರೇಡಿಯೋದ ವಿದೇಶ ಸೇವಾ ವಿಭಾಗದ ಮೊದಲ ಹೆಜ್ಜೆ ಎನ್ನಬಹುದು. ಯುದ್ಧದಲ್ಲಿ ಬ್ರಿಟನ್ ಹಾಗೂ ಅದರ ಮಿತ್ರ ಪಕ್ಷಗಳು ಭಾಗವಹಿಸಲು ಕಾರಣಗಳು, ಯುದ್ಧದಲ್ಲಿ ಭಾರತೀಯರು ನೀಡಬಹುದಾದ ಸಹಾಯ ಹಾಗೂ ಶತ್ರುನಾಶ ಮುಂತಾದ ವಿಷಯಗಳು ರೇಡಿಯೊದಲ್ಲಿ ಪ್ರಸಾರವಾಗುತ್ತಿದ್ದವು.

ಅದರಲ್ಲೂ ಜಪಾನ್ ಯುದ್ಧದಲ್ಲಿ ಧುಮುಕಿದ ನಂತರ ಈ ಪ್ರಕ್ರಿಯೆ ತೀವ್ರವಾಯಿತು. ಶತ್ರುಗಳನ್ನು ಹಿಮ್ಮೆಟ್ಟಿಸುವುದು ಭಾರತೀಯರ ಪವಿತ್ರ ಕಾರ್ಯ ಎಂದು ಬಿಂಬಿಸಲಾಯಿತು. ರೇಡಿಯೋದಲ್ಲಿ ಕಾಲಕಾಲಕ್ಕೆ ವಾಯುದಾಳಿಯ ಮುನ್ನೆಚ್ಚರಿಕೆಯನ್ನು ಪ್ರಕಟಿಸಲಾಗುತ್ತಿತ್ತು. ವಾರದ ಕೊನೆಯಲ್ಲಿ ಇದರ ಪ್ರಸಾರಿತ ವಿವರವನ್ನು ಕೇಂದ್ರ ಕಛೇರಿಗೆ ಕಳಿಸಲಾಗುತ್ತಿತ್ತು. ಅಂದಿನ ಪ್ರಸಿದ್ಧ ಉದ್ಯೋಷಕ ಮೆಲ್ವಿಲ್ ಡಿ ಮೆಲ್ಲೊ 1944 ರ ಜೂನ್ 6ರಂದು ಮಧ್ಯಾಹ್ನದ ಹೊತ್ತಿಗೆ ಕಾರ್ಯಕ್ರಮ ಪ್ರಸಾರವೊಂದನ್ನು ಮೊಟಕುಗೊಳಿಸಿ ಯುದ್ಧದ ಆರಂಭದ ಪ್ರಕಟಣೆಯನ್ನು ಮಾಡಿದರು. ಹನ್ನೊಂದು ತಿಂಗಳುಗಳ ನಂತರ ಅವರೇ ಯುದ್ಧವಿರಾಮದ ಘೋಷಣೆಯನ್ನೂ ಮಾಡಿದರು.

(ಟ್ಯಾಂಗಲ್ಸ್ ಟೇಲ್ಸ್ -ಕೆ.ಎಸ್.ಮಲಿಕ್.1974, Zಔ 18-19) ಯುದ್ಧಾನಂತರ ರೇಡಿಯೋದ ಅಭಿವೃದ್ಧಿಯತ್ತ ದೃಷ್ಟಿ ಹರಿಸಲಾಯಿತು. ಆಗ ದಶಕದ ಹೊಸ್ತಿಲಲ್ಲಿ ನಿಂತಿದ್ದ ಆಕಾಶವಾಣಿ 9 ಕಾರ್ಯನಿರ್ವಹಿಸುತ್ತಿತ್ತು. ಮುಂದಿನ ಹೆಜ್ಜೆಯಾಗಿ ಅದರ ವಿಸ್ತರಣೆಯಾಗಬೇಕಿತ್ತು. ಆಗ ಎಸ್.ಗೋಪಾಲನ್' ಎಂಬ ತಂತ್ರಜ್ಞರ ನೇತ್ರತ್ವದ ತಂಡ ಭಾರತದ ಎಲ್ಲ ಕೇಂದ್ರಗಳ ಮೂಲಕ ಭಾಗವನ್ನೂ ತಲುಪಲು ರೇಡಿಯೋ ಪ್ರಸಾರಕ್ಕೆ ಬೇಕಾದ ನೀಲಿ ನಕ್ಷೆಯನ್ನು ಸಿದ್ಧಪಡಿಸಿತು. ಆದರೆ ಇದನ್ನು ಅಧ್ಯಯನ ಮಾಡುವಷ್ಟರಲ್ಲಿ ಭಾರತದ ರಾಜಕೀಯ ಚಿತ್ರ ತೀವ್ರಗತಿಯಲ್ಲಿ ಬದಲಾಗತೊಡಗಿತು. ಜಾಗತಿಕ ಯುದ್ಧದ ಸಂದರ್ಭದಲ್ಲಿ ಹಿನ್ನಡೆ ಕಂಡ 1942ರ ಕ್ವಿಟ್ ಇಂಡಿಯಾ ಚಳುವಳಿ ಮತ್ತೆ ಬಿರುಸಾಗಿ ಆರಂಭವಾಯಿತು.

ಸರ್ಕಾರದ ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡವು. ಸ್ವಾತಂತ್ರ‍್ಯದ ಕನಸನ್ನು ಎಲ್ಲ ಕಾಣಹತ್ತಿದ್ದರು. ಅದರ ಬೆನ್ನಲ್ಲೇ ವಿಭಜನೆಯ ಕರಾಳತೆಯೂ ಮುಸುಕಿತ್ತು, ಇದು ದೇಶದ ಅನೇಕ ಕಡೆಗಳಲ್ಲಿ ಹಿಂಸೆಯನ್ನು ಪ್ರಚೋದಿಸಿತು. ಬೆದರಿದ ಜನತೆ ಜೀವ ಹಾಗೂ ಗೌರವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡುತ್ತಿತ್ತು. ಹೀಗೆ ಬಂಧುಗಳಿAದ ದೂರವಾದವರಿಗೆ ಸಂದೇಶಗಳನ್ನು, ಮಾಹಿತಿಯನ್ನು ಆಕಾಶವಾಣಿ ವಿಶೇಷ ಪ್ರಸಾರಗಳಲ್ಲಿ ಪ್ರಸಾರ ಮಾಡಿ ಅವರ ನಡುವಿನ ಸೇತುವೆಯಾಗಿ ಕೆಲಸ ಮಾಡಿತು. ಆಗ ಮಹಾತ್ಮಾ ಗಾಂಧಿಯವರ ಭಾಷಣಗಳು ನೊಂದವರಿಗೆ ಸಾಂತ್ವನ ಹಾಗೂ ಶಕ್ತಿಯನ್ನು ನೀಡುತ್ತಿದ್ದುದರಿಂದ ಅವುಗಳನ್ನು ಆಕಾಶವಾಣಿ ಪ್ರಸಾರ ಮಾಡುತ್ತಿತ್ತು.

ಅಗಸ್ಟ್ 15, 1947 ರ ಮಧ್ಯರಾತ್ರಿ ಭಾರತಕ್ಕೆ ಅಧಿಕಾರವನ್ನು ಹಸ್ತಾಂತರ ಮಾಡಿದ ಐತಿಹಾಸಿಕ ಸಮಾರಂಭದ ಪ್ರಸಾರವನ್ನು ಆಕಾಶವಾಣಿ ಮಾಡಿತು. ಮಹಾತ್ಮಾ ಗಾಂಧಿಯವರು 1947 ನವಂಬರ್ 12ರಂದು ಕುರುಕ್ಷೇತ್ರದಲ್ಲಿ 2.5 ಲಕ್ಷ ಭಾರತೀಯ ನಿರಾಶ್ರಿತರನ್ನು ಉದ್ದೇಶಿಸಿ ಭಾಷಣ ಮಾಡುವ ಸಂದರ್ಭವಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅವರು ಕುರುಕ್ಷೇತ್ರವನ್ನು ತಲುಪಲು ಸಾಧ್ಯವಾಗದೆ ಅಲ್ಲಿ ನೆರೆದಿದ್ದ ಜನರಿಗಾಗಿ ಗಾಂಧೀಜಿಯವರ ಭಾಷಣದ ನೇರ ಪ್ರಸಾರವನ್ನು ಆಯೋಜಿಸಲಾಯಿತು. ಗಾಂಧೀಜಿಯವರು ಅಂದು ಮಧ್ಯಾನ್ಹ ಮೂರು ಗಂಟೆಗೆ ಅವರನ್ನು ಉದ್ದೇಶಿಸಿ ದೆಹಲಿ, ಆಕಾಶವಾಣಿ ಕೇಂದ್ರದಿAದ ಮಾತನಾಡಿದರು.

ಇದರ 50 ವರ್ಷದ ನೆನಪಿಗಾಗಿ 1997 ನವಂಬರ್ 12 ರಂದು ದೆಹಲಿ ಆಕಾಶವಾಣಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ನಂತರ 2001 ರಲ್ಲಿ ಆ ದಿನವನ್ನು 'ಪಬ್ಲಿಕ್ ಸರ್ವಿಸ್ ಬ್ರಾಡ್ ಕಾಸ್ಟಿಂಗ್ ಡೇ' ಎಂದು ಅಧಿಕೃತವಾಗಿ ಘೋಷಿಸಲಾಯಿತು. ಅಂದಿನಿAದ ಪ್ರತಿವರ್ಷ ನವಂಬರ್ 12 ನ್ನು 'ಪಬ್ಲಿಕ್ ಸರ್ವಿಸ್ ಬ್ರಾಡ್‌ಕಾಸ್ಟಿಂಗ್ ಡೇ' ಎಂದು ಆಚರಿಸಲಾಗುತ್ತಿದೆ. ಭಾರತ ವಿಭಜನೆಯ ನಂತರ ಲಾಹೋರ್ ಹಾಗೂ ಪೆಷಾವರ್ ಕೇಂದ್ರಗಳು ಪಾಕಿಸ್ತಾನಕ್ಕೆ ಸೇರಿದವು. ಆ ನಷ್ಟವನ್ನು ತುಂಬಲು ಅದುವರೆಗೂ ಖಾಸಗಿ ಒಡೆತನದಲ್ಲಿ ಅಂದರೆ ಅರಸೊತ್ತಿಗೆಯಲ್ಲಿದ್ದ ಮೈಸೂರು, ಬರೋಡ, ತಿರುವನಂತಪುರ, ಹೈದರಾಬಾದ್ ಹಾಗೂ ಔರಂಗಾಬಾದ್ ಈ ಐದು ಕೇಂದ್ರಗಳನ್ನು ಭಾರತ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಯಿತು.

(ಟ್ಯಾಂಗಲ್ಸ್ ಟೇಫ್ಟ್ ಕೆ.ಎಸ್.ಮಲಿಕ್ 1974, ಪುಟ-21) (ಹೊಸ ಸಂವಿಧಾನದಲ್ಲಿ ರೇಡಿಯೊ ಸರ್ಕಾರದ ಅಧೀನದಲ್ಲಿ ಬಂದದ್ದರಿAದ) ಸ್ವತಂತ್ರ ಭಾರತದಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕಾದ ತುರ್ತು ಇತ್ತು. ಆದರೆ ಹಣಕಾಸು ಹಾಗೂ ತಾಂತ್ರಿಕ ಈ ಹಿಂದಿನ ಹಂತದಲ್ಲಿ ಸೇರಿಸದಿದ್ದ ವಿಭಿನ್ನ ಬಂದು ನ ಹಾಗಎ ಯುದ್ಧತಿಯ ದುಗಳಲ್ಲಿ ಸರಣಿ ಅಲ್ಪ ಶಕ್ತಿಯ ವೇಷಕಗಳನ್ನು (ಂಖಿಖಿU) ನಿರ್ಮಿಸಲು ಯೋಜನೆಯೊಂದನ್ನು ರೂಪಿಸಲಾಯಿತು. 1941ರಲ್ಲಿ ಮಾಹಿತಿ ಹಾಗೂ ನಿಸರ ಮಾಲಯ ಹೊಸದಾಗಿ ಅಸ್ತಿತ್ವಕ್ಕೆ ಅದು ಕಾರಿಕಾ ಮಾಯದಲ್ಲಿದ್ದ ಸಸಾರ ವಿಭಾಗ ಮಾಹಿತಿ ಹಾಗೂ ಪ್ರಸಾರ, ಮಾಕ್ಕೆ ವರ್ಗಾವಣೆಯಾಯಿತು.

1935ರಲ್ಲಿ ಫೀಲ್ಡನ್ ಅಲ್ಲಿ ಕೊಂಡಾಗ ಎರಡು ಕೇಂದ್ರಗಳು ಇದ್ದು 1930 ರ ಹೊತ್ತಿಗೆ 14 ಸೆಟ್‌ಗಳಿದ್ದವು ಕೆಂದ್ರಗಳು ಕಾರ್ಯ ನಡೆಸುತ್ತಿದ್ದವು ಹಾಗೂ 85,000 ರೇಡಿಯೋ ಆಗಿನ ಜನಸಂಖ್ಯೆ 400 ದಶಲಕ್ಷವಾಗಿತ್ತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ‍್ಯ ಬಂದಾಗ 25 ಲಕ್ಷ ರೇಡಿಯೋ ಸೆಟ್‌ಗಳಿದ್ದವು. ಅಂದಿನ ಜನಸಂಖ್ಯೆಗೆ ಹೋಲಿಸಿದರೆ 12,500 ಮಂದಿಗೆ ಒಂದು ರೇಡಿಯೋ ಸೆಟ್ ಲಭ್ಯವಿತ್ತು. 1973ರ ಡಿಸೆಂಬರ್ ಹೊತ್ತಿಗೆ 14 ಲಕ್ಷ ರೇಡಿಯೋಗಳು ಪರವಾನಿಗೆಯನ್ನು ಹೊಂದಿದ್ದವು. ಮೊದಲನೇ ಪಂಚವಾರ್ಷಿಕ ಯೋಜನೆ ಆರಂಭವಾದಾಗ ದೇಶದಲ್ಲಿ 25 ರೇಡಿಯೊ ಕೇಂದ್ರಗಳಿದ್ದವು. ದೇಶದ ಒಟ್ಟೂ ಜನಸಂಖ್ಯೆಯ 20% ಭಾಗವನ್ನು ಪ್ರಸಾರ ವ್ಯವಸ್ಥೆಯ ಮೂಲಕ ಈ ಯೋಜನೆಯ ಕಾಲದಲ್ಲಿ ( 1951-56) ತಲುಪಲಾಯಿತು.

ಎರಡು ಪಂಚವಾರ್ಷಿಕ ಯೋಜನೆಗಳಲ್ಲಿ ಅಂದರೆ 10 ವರ್ಷಗಳ ಅವಧಿಗೆ 13 ಕೋಟಿ ಹಣವನ್ನು ಆಕಾಶವಾಣಿಯ ಅಭಿವೃದ್ಧಿಗೆ ನೀಡಲಾಯಿತು. ಇದರ ನರನಿವಿಂದ 1961ರ ಕೊನೆಯಲ್ಲಿ 55 * ಜನತೆಯನ್ನು ತಲುಪುವುದು ಸಾಧ್ಯವಾಯಿತು. ಪ್ರಸಾರ ವ್ಯವಸ್ಥೆಯ ವಿಸ್ತರಣೆ ಮೂರನೆ ಹಾಗೂ ನಾಲ್ಕನೇ ಪಂಚವಾರ್ಷಿಕ ಯೋಜನೆಗಳಲ್ಲೂ ಮುಂದುವರೆದು 1971 ರಲ್ಲಿ 75 ಜನತೆಯನ್ನು ತಲುಪಲಾಯಿತು. 1976 ರಲ್ಲಿ 1,74 ಕೋಟಿ ರೇಡಿಯೋಗಳು ಪರವಾನಿಗೆಯನ್ನು ಹೊಂದಿದ್ದು ಈ ಪರವಾನಿಗೆಯಿಂದ 23.51 ಕೋಟಿ ರೂಪಾಯಿಗಳ ವರಮಾನ ಸರ್ಕಾರಕ್ಕೆ ಬಂದಿತ್ತು. 1977 ಜುಲೈ 23 ರಂದು ಆಕಾಶವಾಣಿಯ ಮೊದಲ ಎಫ್.ಎಮ್ ಪ್ರಾರಂಭವಾಯಿತು.

1993ರ ಹೊತ್ತಿಗೆ ಎಫ್.ಎಮ್. ಪ್ರಾಮುಖ್ಯತೆಯನ್ನು ಪಡೆದು 1997-98ರ ಹೊತ್ತಿಗೆ ಮನೆಗಳಲ್ಲಿ, ಮಹನಗಳಲ್ಲಿ ಅದು ಸ್ಥಾನ ಪಡೆದುಕೊಂಡಿತು. ಇಸವಿ 2000ದ ಮಾರ್ಚ ತಿಂಗಳಲ್ಲಿ ಸರ್ಕಾರ ಎಫ್.ಎಮ್. ಕೇಂದ್ರದ 108 ಪರವಾನಿಗೆಗಳ ಮುಕ್ತ ಹರಾಜಿಗೆ ಆಹ್ವಾನ ನೀಡಿತು. 1935ರ ಸಪ್ಟೆಂಬರ್ 10ರಂದು ಕರ್ನಾಟಕದ ಮೈಸೂರಿನಲ್ಲಿ ಡಾ.ಎಮ್.ವಿ.ಗೋಪಾಲಸ್ವಾಮಿಯವರ ನಿರ್ದೇಶನದಲ್ಲಿ ಅವರ ಮನೆಯಲ್ಲಿ ಅಲ್ಪಶಕ್ತಿಯ ಪ್ರಸಾರ ಯಂತ್ರದಿAದ ಮೊದಲ ಕಾರ್ಯಕ್ರಮ ಬಿತ್ತರಗೊಂಡಿತು. ಗೋಪಾಲಸ್ವಾಮಿಯವರು ತಮ್ಮ ಮಿತ್ರ ರೇಡಿಯೋ ತಂತ್ರಜ್ಞ ಎ, ಜಗದೀಶ ಅವರೊಡನೆ ಸೇರಿ ರೇಡಿಯೋ ಪಟ್ಟಿಗೆ ಧ್ವನಿಪ್ರಸಾರ ಮಾಡುವ ಬಗ್ಗೆ ಅನೇಕ ಪ್ರಯೋಗಗಳನ್ನು ಮಾಡಿದರು.

ಈ ಸಂದರ್ಭದಲ್ಲಿ ವರ್ತಮಾನ ಪತ್ರಿಕೆಯಲ್ಲಿ ಜಾಹೀರಾತೊಂದು ಪ್ರಕಟಗೊಂಡು ಹಾಲೆಂಡಿನ ಆಂಗ್ಲ ಪ್ರಜೆಯೊಬ್ಬ 5 ಕಿ.ವ್ಯಾ. ಪ್ರಕಟಿಸಿದ್ದ. ಶಕ್ತಿಯ ರೇಡಿಯೋ ಪ್ರೇಷಕವನ್ನು ಮಾರಾಟ ಮಾಡುವುದಾಗಿ ಅದರಲ್ಲಿ ಗೋಪಾಲಸ್ವಾಮಿಯವರು ಅದನ್ನು ಕೊಂಡು ಮೈಸೂರಿಗೆ ತರಿಸಿ ತಮ್ಮ ಪ್ರಯೋಗವನ್ನು ಮುಂದುವರಿಸಿದರು. ಅದರ ಫಲಿತಾಂಶಗಳು ಉತ್ತಮವಾಗಿದ್ದುದರಿಂದ ಅವರು 30 ಕಿ.ವ್ಯಾ. ಶಕ್ತಿಯ ಹೊಸ ಟ್ರಾನ್ಸಮೀಟರನ್ನು ಧೈರ್ಯದಿಂದ ಕೊಂಡುಕೊAಡರು. ಇದನ್ನೆಲ್ಲ ಗೋಪಾಲಸ್ವಾಮಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿ ತಮ್ಮ ಮನೆಯ ಮಹಡಿಯ ಮೇಲೆ ಅದನ್ನು ಸ್ಥಾಪಿಸಿದರು. ಆಗ ಕಾರ್ಯಕ್ರಮಗಳು ಸಾಯಂಕಾಲ 6 ರಿಂದ 7.30 ರವರೆಗೆ ಹಾಗೂ ಕೆಲದಿನ 8.30 ರವರೆಗೆ ಪ್ರಸಾರವಾಗುತ್ತಿದ್ದವು,

ಮನೆಯ ಮುಂದೆ ಧ್ವನಿವರ್ಧಕ ಹಾಕಿ ಎಲ್ಲರಿಗೆ ಕೇಳುವ ವ್ಯವಸ್ಥೆ ಮಾಡಲಾಗಿತ್ತು. ನಂತರ ಎರಡನೇ ಮಹಾಯುದ್ಧದ ಕಾಲ, ಜನ ಯುದ್ಧದ ಸುದ್ದಿಗಳನ್ನು ತಿಳಿಯಲು ಆಸಕ್ತಿ ತೋರಿದ್ದರಿಂದ ಮೈಸೂರು ಪುರಸಭೆ ಹಾಗೂ ಮೈಸೂರು ಸಂಸ್ಥಾನ ಸರ್ಕಾರ ಕೊಂಚ ಹಣ ಸಹಾಯ ಮಾಡಿತು. ಅದನ್ನು ಪಡೆದು 1941 ರವರೆಗೂ ಈ ಕೇಂದ್ರವನ್ನು ಖಾಸಗಿಯಾಗಿಯೇ ನಡೆಸಿಕೊಂಡು ಬರಲಾಯಿತು. 1942ರಲ್ಲಿ ಮೈಸೂರು ಸಂಸ್ಥಾನ ಈ ಕೇಂದ್ರದ ಆಡಳಿತವನ್ನು ವಹಿಸಿಕೊಂಡಿತು. ಮುಂದೆ 1950 ಏಪ್ರಿಲ್ 1 ರಂದು ಅದು ಸರ್ಕಾರದೊಂದಿಗೆ ವಿಲೀನವಾಗಿ ಆಕಾಶವಾಣಿ ಜಾಲದ ಭಾಗವಾಯಿತು. ಮೈಸೂರು ಕೇಂದ್ರ ದೇಶೀಯ ಸಂಸ್ಥಾನಗಳ ಮೊದಲ ಕೇಂದ್ರ ಅಲ್ಲೇ ಮೊಟ್ಟಮೊದಲ ಬಾರಿಗೆ ರೇಡಿಯೋವನ್ನು “ಆಕಾಶವಾಣಿ” ಎಂದು ಕರೆಯಲಾಯಿತು.

ಮೈಸೂರಿನಲ್ಲಿ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ ನಾ. ಕಸ್ತೂರಿಯವರನ್ನು ಗೋಪಾಲಸ್ವಾಮಿಯವರು ಸಂಸ್ಥೆಗೆ ಒಳ್ಳೆಯ ಹೆಸರು ಸೂಚಿಸುವಂತೆ ಕೇಳಿದ್ದರು. ಕಸ್ತೂರಿಯವರು ಅದನ್ನು ಮಾಹಾರಾಜಾ ಕಾಲೇಜಿನ ತಮ್ಮ ಮಿತ್ರವರ್ಗದೊಂದಿಗೆ ಲೋಕಾಭಿರಾಮವಾಗಿ ಚರ್ಚಿಸಿದಾಗ ಅಲ್ಲೇ ಆಕಾಶವಾಣಿ ಅಭಿದಾನದ ಉಗಮವಾಯಿತು ಹಾಗೂ ನಾ. ಕಸ್ತೂರಿಯವರೇ ಅದನ್ನು ಮೊದಲಿಗೆ ಸೂಚಿಸಿ ಇತರರು ಅದನ್ನು ಸ್ವಾಗತಿಸಿದರು. ಮುಂದೆ ಆ ಹೆಸರೇ ಶಾಶ್ವತವಾಗಿ ಉಳಿಯಿತು. ರವೀಂದ್ರನಾಥ ಟಾಗೋರರು ಆಕಾಶವಾಣಿ ಎಂಬ ಪದವನ್ನು ಮೊದಲು ಬಳಸಿದ್ದರು ಎಂಬ ಇನ್ನೊಂದು ಅಭಿಪ್ರಾಯವೂ ಇದೆ. ಏನೇ ಇದ್ದರೂ ಅಂದಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮೈಸೂರು ಆಕಾಶವಾಣಿಗೆ ಮಹತ್ವದ ಸ್ಥಾನವಿತ್ತು.

ಆಗ ರೇಡಿಯೋ ರಿಸೀವರೆ 300-400 ರೂಪಾಯಿಗಳಷ್ಟು ಬೆಲೆಯಿದ್ದು ಅದು ಸಿರಿವಂತರಿಗೆ ಮಾತ್ರ ಎಟಕುವ ಸಾಧನವಾಗಿತ್ತು. ಆಕಾಶವಾಣಿಯ 'ಸಿಗ್ರೇಚರ್ ಟ್ಯೂನ್' ಬಗ್ಗೆ ಒಂದು ಮಾತನ್ನು ಇಲ್ಲಿ ಹೇಳಲೇಬೇಕು. ಇದನ್ನು ಜ್ಯೂ(ಯಹೂದಿ) ಸಂಗೀತಗಾರ, ವಾಲ್ಟರ್ ಕಾಫ್‌ಮನ್ ರಚಿಸಿದ್ದಾನೆ. ಇವನು ಜರ್ಮನಿಯ ರೆಮ್ಯೂಜಿಯಾಗಿದ್ದ. ಇದಕ್ಕೆ ಸಂಗೀತವನ್ನು ಪ್ರಸಿದ್ಧ ಸಂಗೀತಗಾರ ಜುಬಿನ್ ಮೆಹ್ರಾ ಅವರ ತಂದೆ ಸಂಯೋಜಿಸಿದ್ದಾರೆ. ಸಂಕೇತವಾಗಿಯೂ ಇರುವ ಈ ಆರಂಭ ಸಂಗೀತದಿAದಲೇ ಇಂದಿಗೂ ಆಕಾಶವಾಣಿ ತನ್ನ ಪ್ರಸಾರ ಕಾರ್ಯವನ್ನು ಆರಂಭಿಸುತ್ತದೆ.

ಮೈಲಿಗಲ್ಲಗಳು
ಇAಡಿಯನ್ ಬ್ರಾಡ್ ಕಾಸ್ಟಿಂಗ್ ಸರ್ವಿಸ್ ಇಂದಿನ ಆಲ್ ಇಂಡಿಯಾ ರೇಡಿಯೋ ಅಥವಾ ಆಕಾಶವಾಣಿಯಾದ ಹಿನ್ನೆಲೆಯಲ್ಲಿ ಮಹತ್ವದ ಬೆಳವಣಿಗೆಯ ಹಂತಗಳಿವೆ.

1) 1921, ಅಗಸ್ಯ. 20 ರಂದು ಮುಂಬೈನ (ಅಂದಿನ ಬಾಂಬೆ) ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ತನ್ನ ಕಟ್ಟಡದ ಮೇಲ್ಬಾವಣಿಯಿಂದ ಅಂಚೆ-ತAತಿ ಇಲಾಖೆಯ ಸಹಯೋಗದೊಂದಿಗೆ ಮೊದಲ ಪ್ರಸಾರ ಆರಂಭಿಸಿತು,
2) 1922: ಫೆಬ್ರವರಿ 23 ರಂದು ಮೊದಲ ಪ್ರಸಾರ ಪರವಾನಗಿ (ಲೈಸೆನ್ಸ್) ಕೊಡಲಾಯಿತು.
3) 1923 ಮಾರ್ಚ 7 ರಂದು ಮೊದಲ ಪ್ರಸಾರ ಸಮಾವೇಶ ನಡೆಯಿತು. 4) 1923 ನವೆಂಬರಿನಲ್ಲಿ ಕೋಲ್ಕತ್ತಾದ ರೇಡಿಯೋ ಕ್ಲಬ್ ಆರಂಭವಾಯಿತು.
5) 1924 ಮೇ 16 ರಂದು ಮದ್ರಾಸಿನ ರೇಡಿಯೊ ಕ್ಲಬ್ ಆರಂಭವಾಯಿತು.
6) 1925 ಮಾರ್ಚ 27ರಂದು ಪ್ರಸಾರ ಕೇಂದ್ರಗಳನ್ನು ಬೇರ ಬೇರೆ ಭಾಗಗಳಲ್ಲಿ
ಆರಂಭಿಸಲು ಸರ್ಕಾರ ಸೂಚನೆಯನ್ನು ಕಳಿಸಿ ಅರ್ಜಿಗಳನ್ನು ಆಹ್ವಾನಿಸಿತ್ತು.
7) 1927 ಜುಲೈ 23 ಮುಂಬೈ ಕೇಂದ್ರದ ಪ್ರಸಾರ ಆರಂಭವಾಯಿತು. 8) 1927 ಅಗಸ್ಟ 26 ಕೋಲ್ಕತ್ತಾ ಕೇಂದ್ರ ಆರಂಭವಾಯಿತು.
9) 1930 ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಮುಂಬೈ ಕೇಂದ್ರವನ್ನು ಸರ್ಕಾರಕ್ಕೆ ಹಸ್ತಾಂತರಿಸಿತು. ಅದನ್ನು ಇಂಡಿಯನ್ ಸ್ಟೇಟ್ ಬ್ರಾಡ್ ಕಾಸ್ಟಿಂಗ್ ಸರ್ವಿಸ್ (ಐಎಸ್‌ಬಿಎಸ್) ಎಂದು ಮರುನಾಮಕರಣ ಮಾಡಲಾಯಿತು.
10) 1936 ಜೂನ್ 8 ರಂದು ಐಎಸ್‌ಬಿಎಸ್ ಅನ್ನು ಆಲ್ ಇಂಡಿಯಾ ರೇಡಿಯೊ ಎಂದು ಪರ್ನನಾಮಕರಣ ಮಾಡಲಾಯಿತು.
11) 1938 ರಲ್ಲಿ ಶಾರ್ಟ್ ವೇವ್ ಪ್ರಸಾರ ಆರಂಭವಾಯಿತು.
12) 1939 ರಲ್ಲಿ ಹೊರದೇಶಗಳ ಪ್ರಸಾರ ಸೇವೆ ಸರ್ವಿಸಸ್ ಡಿವಿಶನ್) ಉದ್ಘಾಟನೆಯಾಯಿತು. ಇಎಸ್‌ಡಿ (ಎಕ್ಸ್ಟರ್‌ನಲ್
13) 1957 ಅಕ್ಟೋಬರ್ 2 ರಂದು ವಿವಿಧ ಭಾರತಿ ಸೇವೆ ಆರಂಭವಾಯಿತು.
14) 1969 ರಿಂದ ವಿವಿಧ ಭಾರತಿಯಲ್ಲಿ ಜಾಹೀರಾತುಗಳ ಪ್ರಸಾರ
15) 1977 ಜುಲೈ 23 ರಂದು ಮೊದಲ ಎಫ್ ಎಮ್ ಆರಂಭವಾಯಿತು 16) 1988 ರಲ್ಲಿ ಉಪಗ್ರಹದ ಮೂಲಕ ರಾಷ್ಟ್ರೀಯ ವಾಹಿನಿಯೊಂದರ ಪ್ರಸಾರ ಆರಂಭವಾಯಿತು.
17) 1990: ಭಾರತ ಸರ್ಕಾರ ಖಾಸಗೀಕರಣ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟಿಕೊಂಡು ಪ್ರಸಾರ ಸೇವೆಯನ್ನು ಸರ್ಕಾರಿ ಸ್ವಾಮ್ಯದಿಂದ ಮುಕ್ತಗೊಳಿಸಲು 'ಪ್ರಸಾರ ಭಾರತಿ ಮಸೂದೆ' ಯನ್ನು ಮಂಡಿಸಿತು. ನಂತ 1997 ರಲ್ಲಿ ಅದು ಜಾರಿಗೆ ಬಂದಿತು.
18) 1995: ಫೆಬ್ರವರಿಯಲ್ಲಿ ಸರ್ವೋಚ್ಛ ನ್ಯಾಯಾಲಯವು 'ಪ್ರಸಾರ ಅಲೆಗಳ ಸಾರ್ವಜನಿಕ ಆಸ್ತಿ' ಎಂಬ ಮಹತ್ತರವಾದ ತೀರ್ಪನ್ನು ನೀಡಿತು. ಸಾರ್ವಜನಿ ಹಿತಾಸಕ್ತಿಗಾಗಿ ಅವುಗಳನ್ನು ಸಾರ್ವಜನಿಕ ಪ್ರಾಧಿಕಾರವು ನಿಯಂತ್ರಿಸಬೇಕೆAದ ಹೇಳಿದ್ದು ಪ್ರಸಾರ ಭಾರತಿಗೆ ಸ್ವಾಯತ್ತತೆಯನ್ನು ಹಾಗೂ ಖಾಸಗೀಕರಣ ನಾಂದಿಯನ್ನು ಹಾಡಿತು.
19) 1996: ಪ್ರಸಾರ ಮಸೂದೆಯ ಕರಡನ್ನು ಸಿದ್ದಪಡಿಸಲಾಯಿತು. ಇದರನ್ವ ಸರ್ಕಾರಿ ಹಾಗೂ ಖಾಸಗಿ ಒಡೆತನದ ಪ್ರಸಾರ ಕೇಂದ್ರಗಳನ್ನು ನಿರ್ವಹಿಸು ಹೊಣೆ ಪ್ರಸಾರ ಪ್ರಾಧಿಕಾರಕ್ಕೆ ನೀಡಲ್ಪಟ್ಟಿತು. ಉಪಗ್ರಹ ಆಧಾರಿತ, ಟೆರಿಸ್ಟಿಯ ಹಾಗೂ ಕೇಬಲ್ ಪ್ರಸಾರಕರಿಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಿತು.
20) 1998 ಆಗಸ್ಟ್: ಕೆಳಮನೆಯಲ್ಲಿ ಪ್ರಸಾರ ಭಾರತಿ ಮಸೂ ಅಂಗೀಕಾರವಾಯಿತು. ಜೊತೆಗೆ ಪ್ರಸಾರ ಪ್ರಾಧಿಕಾರವು 32 ಸದಸ್ಯ ಪಾರ್ಲಿಮೆಂಟರಿ ಕಮಿಟಿಯಿಂದ ನಿಗಾವಹಿಸಲ್ಪಡುತ್ತದೆ ಎಂಬ ತಿದ್ದುಪಡಿಯನ ಇದಕ್ಕೆ ತರಲಾಯಿತು.
21) 2000 ದಲ್ಲಿ ದೇಶದ 108 ಎಫ್, ಎಮ್. ಕೇಂದ್ರಗಳ ಪರವಾನಿಗೆ ಮುಕ್ತ ಹರಾಜಿಗೆ ಸರ್ಕಾರ ಆಹ್ವಾನ ನೀಡಿತು.
22) 2001 ನವಂಬರ್ 12, ಗಾಂಧೀಜಿಯವರ ಆಕಾಶವಾಣಿ ಭೇಟಿಯ ನೆನಪಿಗ ಈ ದಿನವನ್ನು 'ಪಬ್ಲಿಕ್ ಸರ್ವಿಸ್ ಬ್ರಾಡ್‌ಕಾಸ್ಟಿಂಗ್ ದಿನ' ಎಂದು ಕರೆಯಲಾಯಿತ ಆಕಾಶವಾಣಿ ಹಾಗೂ ದೂರದರ್ಶನಗಳ ಸಂಗ್ರಹಾಲಯವನ ಉದ್ಘಾಟಿಸಲಾಯಿತು.
23) 2002 ಜುಲೈ -ಪ್ರಸಾರದ 75ನೇ ವರ್ಷಾಚರಣೆ
24) 2003 .ಪ್ರಸಾರ ಭಾರತಿಯ ಮಾರುಕಟ್ಟೆ ವಿಭಾಗದ ಉದ್ಘಾಟನೆ
25) .2004 .ಜನವರಿ 26 ದೆಹಲಿಯಿಂದ ಭಾಷಾ ಭಾರತಿ ವಾಹಿನಿಯ ಹಾಗೂ ಬೆಂಗಳೂರಿಲ್ಲಿ ಶಾಸ್ತ್ರೀಯ ಸಂಗೀತದ ವಾಹಿನಿಯ ಉದ್ಘಾಟನೆ
26) 2004 ಎಪ್ರಿಲ್ 1 12 ಕೇಂದ್ರಗಳಿAದ ಕಿಸಾನ್ ವಾಣಿ ಕಾರ್ಯಕ್ರಮದ
27) 2004 ಮೇ 25 - ಕುಸ್ವಾರಾದಲ್ಲಿ ಜಮ್ಮು ಹಾಗೂ ಕಾಶ್ಮೀರದ ಗಡಿಯಲ್ಲಿ ರೇಡಿಯೋ ಪ್ರಸಾರವನ್ನು ಬಲಗೊಳಿಸಲು 20 ಕಿ.ವ್ಯಾ. ಮಿಡಿಯಂ ವೇವ ಪ್ರಸಾರದ ಉದ್ಘಾಟನೆ
28) 2004 ಡಿಸೆಂಬರ 16 – ಆಕಾಶವಾಣಿ ಹಾಗೂ ದೂರದರ್ಶನಗಳ ಡಿಟಿಹೆಚ್ ಪ್ರಸಾರದ ಉದ್ಘಾಟನೆ ಪ್ರಧಾನ ಮಂತ್ರಿ ಡಾ.ಮನಮೋಹನ ಸಿಂಗ್ ಅವರಿಂದ
29) 2006 ಸಪ್ಟೆಂಬರ್ 1- ಕಾರ್ಗಿಲ್ (ಜಮ್ಮು ಹಾಗೂ ಕಾಶ್ಮೀರ) ನಲ್ಲಿ 200 ಕಿ.ವ್ಯಾ. ಸಾಮರ್ಥ್ಯದ ಪ್ರೇಷಕದ ಪ್ರಾರಂಭ
30) 2008 ಲೆಹ್ (ಜಮ್ಮು ಹಾಗೂ ಕಾಶ್ಮೀರ) ದಲ್ಲಿ ಎಫ್.ಎಮ್. ಪ್ರೇಷಕ ಆರಂಭ
31) 2010- 'ಫೋನಿನಲ್ಲಿ ವಾರ್ತೆ' ಸೇವೆ 14 ಪ್ರಮುಖ ನಗರಗಳಿಂದ ಆರಂಭ
32) 2012 ಮಾರ್ಚ 27 -ಬಾಂಗ್ಲಾದೇಶ ವಿಮುಕ್ತಿ ಯುದ್ಧದಲ್ಲಿ ಆಕಾಶವಾಣಿಯ
ಸೇವೆಯನ್ನು ಗುರುತಿಸಿ ಬಾಂಗ್ಲಾದೇಶದ ಸರ್ಕಾರದಿಂದ ಆಕಾಶವಾಣಿಗೆ ವಿಶೇಷ ಪರಸ್ಕಾರ
33) 2014 ಅಕ್ಟೋಬರ್ 3 ರಂದು ಪ್ರಧಾನಿ ನರೇಂದ್ರ ಮೋದಿ ಅವರು 'ಮನ್ ಕೀ ಬಾತ್' ಕಾರ್ಯಕ್ರಮದ ಮೂಲಕ ಜನರೊಂದಿಗೆ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳಲು ಆರಂಭಿಸಿದರು. ಇದು ಪ್ರತಿ ತಿಂಗಳ ಒಂದು ಭಾನುವಾರದಂದು ದೇಶವ್ಯಾಪಿ ಪ್ರಸಾರವಾಗುತ್ತಿದೆ.
34) ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಭಾರತ ಭೇಟಿ ಸಂದರ್ಭದಲ್ಲಿ 2015 ರ ಜನವರಿ 27 ರಂದು ಪ್ರಧಾನಿ ಮೋದಿ ಅವರು ಒಬಾಮಾ ಅವರೊಂದಿಗೆ ಜಂಟಿಯಾಗಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
35) 2016 ಜನವರಿ 26 ರಂದು ಆಕಾಶವಾಣಿಯ 24 7 ಸಂಗೀತ ವಾಹಿನಿ 'ರಾಗಂ' ದ ಹಾಗೂ ಮೊಬೈಲ್ ಆಪ್‌ಗಳ ಉದ್ಘಾಟನೆ ಬೆಂಗಳೂರಿನಲ್ಲಿ