ಕೃಷಿ ಮತ್ತು ಸಹಕಾರ ವರ್ಗದ ಮೇಲೆ ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರದ ಪ್ರಭಾವದ ಒಂದು ಅಧ್ಯಯನ (Part-3)

By
Click to Learn More 


1.2 ಆಕಾಶವಾಣಿಯ ಧೈಯಗಳು, ಕಾರ್ಯಗಳು ಹಾಗೂ ಪ್ರಭಾವಗಳು

ಸಂವಹನ ಒಂದು ಸಾಮಾಜಿಕ ಪ್ರಕ್ರಿಯೆ, ಇದರಲ್ಲಿ ವ್ಯಕ್ತಿ-ವ್ಯಕ್ತಿಗಳ ನಡುವೆ, ವ್ಯಕ್ತಿ-ಸಮುದಾಯದ ನಡುವೆ ನಿರಂತರ ಮಾಹಿತಿಯ ವಿನಿಮಯ ನಡೆಯುತ್ತದೆ. ಆದರೆ ಇದರ ವ್ಯಾಪ್ತಿ ಸೀಮಿತವಾಗಿರುತ್ತದೆ. ನೀಡುವ ಮಾಹಿತಿಯ ಪ್ರಭಾವವೂ ಅನೇಕ ಬಾರಿ ಸೀಮಿತವಾಗಿರಬಹುದು.

ಆದರೆ ಸಮೂಹ ಸಂವಹನ ವಿಶಾಲ ಕ್ಷೇತ್ರಕ್ಕೆ ಅನ್ವಯವಾಗುವಂತೆ, ವಿವಿಧ ಭಾಷೆ, ಜಾತಿ, ಜನಾಂಗದ ಗುಂಪುಗಳ ನಡುವೆ, ಬೇರೆ ಬೇರೆ ಆಸಕ್ತಿ-ಆಶೋತ್ತರಗಳ ಗುಂಪುಗಳ ನಡುವೆ ನಡೆಯುತ್ತದೆ. ಆದ್ದರಿಂದ ಇದರ ಪ್ರಭಾವವೂ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಗಾಢವಾಗಿರುತ್ತದೆ. ಈ ಸಮೂಹ ಮಾಧ್ಯಮಗಳ ಪ್ರಭಾವದಿಂದ ವಿವಿಧ ಬಗೆಯ ಅಭಿಪ್ರಾಯಗಳನ್ನು ರೂಪಿಸುವ ಗುಂಪುಗಳು ಶಹರಗಳಲ್ಲಿ ಹೆಚ್ಚಿದಂತೆ ಸಣ್ಣ ಪಟ್ಟಣಗಳಲ್ಲಿ ಹಾಗೂ ಹಳ್ಳಿಗಳಲ್ಲೂ ಹೆಚ್ಚಾಗ ತೊಡಗಿದವು. ಆಗ ಮಾಧ್ಯಮಗಳು ತಮ್ಮ ವ್ಯಾಪ್ತಿಯನ್ನು ಆ ಪ್ರದೇಶಗಳಿಗೂ ವಿಸ್ತರಿಸಲು ಪ್ರಾರಂಭಿಸಿದವು. ನಗರೀಕರಣ ಹಾಗೂ ಕೈಗಾರಿಕಾಕರಣದಿಂದ 19ನೇ ಶತಮಾನದಲ್ಲಿ ಪಟ್ಟಣಗಳ ಸಾಮಾಜಿಕ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾದವು.

ಪತ್ರಿಕೆಗಳು ಮಾಹಿತಿಯ ಮಹಾಪೂರವನ್ನೇ ಹರಿಸಿದವು. 20ನೇ ಶತಮಾನದಲ್ಲಿ ಪತ್ರಿಕೆಗಳ ತಾಂತ್ರಿಕ ಅಭಿವೃದ್ಧಿಯಿಂದ ಅವು ಹೆಚ್ಚು ಜನರನ್ನು ತಲುಪಲು ಸಾಧ್ಯವಾಯಿತು. ಇದರೊಂದಿಗೆ ರೇಡಿಯೋ, ದೂರದರ್ಶನ, ಸಿನೆಮಾ ಮುಂತಾದ ಹೊಸ ಸಮೂಹ ಮಾಧ್ಯಮಗಳೂ ಬಹು ವೇಗವಾಗಿ ಬೆಳೆದವು. ಈ ಎಲ್ಲ ಮಾಧ್ಯಮಗಳೂ ತಮ್ಮ ಓದುಗರಿಗೆ, ಕೇಳುಗರಿಗೆ, ನೋಡುಗರಿಗೆ ಮಾಹಿತಿಯ ಭಂಡಾರವನ್ನೇ ತೆರೆದವು. ಜನರೆದುರು ಹೆಚ್ಚು ಆಯ್ಕೆಗಳು ತೆರೆದುಕೊಂಡವು. ಇವುಗಳೊಂದಿಗೆ ಆಧುನಿಕ ಮಾಧ್ಯಮಗಳೂ ಬೆಳೆದವು. ಇದರಿಂದ ಈ ಶತಮಾನವನ್ನು ಮಾ ಯುಗ' ಎಂದು ಕರೆಯಲಾಯಿತು. ಈ ಎಲ್ಲ ಮಾಧ್ಯಮಗಳ ಉದ್ದೇಶಗಳು, ಏಕತೆರನಾಗಿದ್ದು, ಅವುಗಳೆಂದರೆ ಮಾಹಿತಿ, ಮನರಂಜನೆ ಹಾಗೂ ಶಿಕ್ಷಣ,

ಆಕಾಶವಾಣಿ ಭಾರತದಲ್ಲಿ ನೆಲೆಯೂರುವ ಬಹಳ ಮೊದಲೇ ಪತ್ರಿಕೆಗಳು, ಇಲ್ಲಿ ಬೇರೂರಿದ್ದವು. ಸ್ವಾತಂತ್ರ‍್ಯಪೂರ್ವ ಹಾಗೂ ಸ್ವಾತಂತ್ರಾನAತರ ಶಾನಭ ನಾಲ್ಕನೇ ಅಂಗ'ವಾಗಿ ಪತ್ರಿಕೆಗಳು ಹೆಸರು ಹಾಗೂ ಜನಮನ್ನಣೆ ಗಳಿಸಿರು ಆಗ ಬಂದ ರೇಡಿಯೊ ಮಾಧ್ಯಮವಾಗಿ ನೆಲೆಯೂರುವ ಮೊದಲು ಎಲ್ಲಾ ಕುತೂಹಲಕ್ಕೆ ಕಾರಣವಾಗಿತ್ತು. ಕೆಲವೇ ಕೆಲವು ಉಳ್ಳವರ ಪಡಸಾಲೆಯ ಹೆಮ್ಮೆಯಾಗಿತ್ತು. ರೇಡಿಯೋದಲ್ಲಿ ಧ್ವನಿ ಹೇಗೆ ಮೂಡಿಬರುತ್ತದೆ? ಅದರ ಒಳಗೆ ಮಾತನಾಡುವವರು ಯಾರಿದ್ದಾರೆ? ಎಲ್ಲಿ ಕುಳಿತು ಮಾತನಾಡುತ್ತಾರೆ? ಅನ್ನು ಹತ್ತಿರದಿಂದ ಮಾತನಾಡಿದರೂ ಅವರೇಕೆ ಕಾಣುವುದಿಲ್ಲ ಇತ್ಯಾದಿ ಪ್ರಶ್ನೆಗಳು ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸಾಮಾನ್ಯವಾಗಿದ್ದವು.

ಬರುಬರುತ್ತ ಈ ಕುತೂಹಲಭರಿತ ಪ್ರಶ್ನೆಗಳಿಗೆ ತಾಂತ್ರಿಕ ಜ್ಞಾನದಿಂದ ಉತ್ತರ ಕಂಡುಕೊAಡವರು ಅದನ್ನು ಒಂದು ಬೆಲೆಬಾಳುವ ಆಸ್ತಿಯಂತೆ ಕಾಪಾಡಿಕೊಂಡರು. ಆಕಾಶವಾಣಿಯ ವಿಸ್ತರಣೆ ಹಾಗೂ ತಾಂತ್ರಿಕ ಅಭಿವೃದ್ಧಿಯ ಕಾರಣ ಅದು ಕಡಿಮೆ ಬೆಲೆಗೆ ಎಲ್ಲರಿಗೂ ಎಟುಕುವಂತಾದಾಗ ಅದರ ಮಹತ್ವ ಹೆಚ್ಚಿತು. ಈ ಮಾಧ್ಯಮ ತನ್ನದೇ ಆದ ವಿಶಿಷ್ಟ ಗುಣಗಳನ್ನು ಹೊಂದಿದ್ದರಿAದ ಬಹುಬೇಗ ಅದು ಜನಮನ್ನಣೆಗೆ ಪಾತ್ರವಾಯಿತು.

ಮಾಧ್ಯಮವಾಗಿ ರೇಡಿಯೋದ ವಿಶೇಷ ಗುಣಗಳು

ರೇಡಿಯೋ ಮಾಧ್ಯಮಕ್ಕೆ ತನ್ನದೇ ಆದ ಕೆಲವು ವಿಶಿಷ್ಟ ಲಕ್ಷಣಗಳಿವೆ. ಇತರ ಮಾಧ್ಯಮಗಳಿಗೆ ಹೋಲಿಸಿದಾಗ ರೇಡಿಯೋದ ಈ ವೈಶಿಷ್ಟ್ಯಗಳು ಶೋತೃಗಳಿಗೆ ಅನುಕೂಲವಾಗಿ ಪರಿಣಮಿಸುತ್ತವೆ. ಅವೆಂದರೆ ರೇಡಿಯೋದ ವೇಗ ಮತ್ತು ವ್ಯಾಪ್ತಿ, ಒಂದು ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ರೇಡಿಯೋ | ಅದರ ವಿವರಗಳನ್ನು ಬಿತ್ತರಿಸುವ ಸಾಧ್ಯತೆ ಇದೆ. ಆದರೆ ಪತ್ರಿಕೆಗಳಲ್ಲಿ ಇದೇ ಸುದ್ದಿಯನ್ನು ಪಡೆದುಕೊಳ್ಳಲು ನಾಳೆಯವರೆಗೂ ಕಾಯಬೇಕಾಗುತ್ತದೆ. ರೇಡಿಯೋಗ | ವ್ಯಾಪ್ತಿ ಕೂಡಾ ವಿಸ್ತಾರವಾದದ್ದು. ರೇಡಿಯೋ ತರಂಗಗಳು ಎಲ್ಲೆಲ್ಲಿ ತಲುಪಲು | ಸಾಧ್ಯವೋ ಅಲ್ಲಿಗೆ ರೇಡಿಯೋ ಪ್ರಸಾರ ತಲುಪುತ್ತದೆ. ಪತ್ರಿಕೆಗಳು ತಲುಪಲಾರದ ಜಾಗಕ್ಕೂ ರೇಡಿಯೊ ಅಲೆಗಳು ತಲುಪುತ್ತವೆ, ರೇಡಿಯೋ ತರಂಗಗಳಿಗೆ ತಂತಿ | ಅಥವಾ ರಸ್ತೆಯ ಅಗತ್ಯವಿಲ್ಲ!

ಪತ್ರಿಕೆಗಳು ಓದು-ಬರಹ ಬಲ್ಲವರಿಗೆ ಮಾತ್ರ ಅನುಕೂಲವಾಗುವಂಥವು. ಆದರೆ ರೇಡಿಯೋ ಕೇಳುವ ಮಾಧ್ಯಮವಾದ್ದರಿಂದ ಈ ನ್ಯೂನ್ಯತೆಯನ್ನು ಮೀರಿರುವಂಥದ್ದು, ಕಣ್ಣು ಕಾಣದವರಿಗೂ ಇದು ಮಾಹಿತಿ, ಮನರಂಜನೆಯನ್ನು ನೀಡಬಲ್ಲದು. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಜನರನ್ನು ತಲುಪಲು ಪತ್ರಿಕೆಗಳಿಗೆ ಇರುವ ಮಿತಿಯನ್ನು ರೇಡಿಯೋ ಸಲ್ಲುತ್ತದೆ. ಡಿಯೋ ಪ್ರಸಾರದ ಆಲಿಸುವಿಕೆಗೆ ಪತ್ರಿಕೆಯಂಡ ದಿನವೂ ಹನಿಗವ ಅವಶ್ಯಕತೆಯಿಲ್ಲ. ಈಗ ಲೈಸೆನ್ಸ್ ಹುಲ್ಕವೂ ಇಲ್ಲದಿರುವುದರಿಂದ ದೃಶ್ಯ ಮಾಧ್ಯಮಗಳಂತೆ (ಮುಖ್ಯವಾಗಿ ಖಾಸಗಿ ತಿಂಗಳ ವಂತಿಗೆಯನ್ನೂ ನೀಡುವ ಅವಶ್ಯಕತೆ ಇದಕ್ಕಿಲ್ಲ. ಇವ ಕೆಲಸಗಳನ್ನು ಮಾಡುತ್ತಲೇ ಆಲಿಸಲು ಸಾಧ್ಯವಾಗುವದು ರೇಡಿಯೋದ ಮಹಾತ್ಮಕ ಅಂಶ.

ಸ್ವಂತ ಕೆಲಸಗಳಿಗೆ ಇದರಿಂದ ಯಾವುದೇ ಬಾಧೆಯಿರು ಒಳಾಗಿ ವಡಸಾಲೆಯನ್ನು ದಾಟಿ ಅಡುಗೆಮನೆಗೂ ಇದು ಲಗ್ಗೆ ಇಟ್ಟು ಈಗ ರೇಡಿಯೊದಲ್ಲಿ ಎಫ್ ಎಮ್. ತಂತ್ರಜ್ಞಾನದ ಅಭಿವೃದ್ಧಿಯ ನಂತರ, ಅವರಲ್ಲೂ ವಾಹನಗಳಲ್ಲಿಯೂ ಎಫ್.ಎಮ್, ಸೆಟ್‌ಗಳ ಅಳವಡಿಕೆ ಸಾಧ್ಯವಾದದ್ದರಿಂದ ರೇಡಿಯೋದ ಜನಪ್ರಿಯತೆ ಹೆಚ್ಚಿತು. ಇತ್ತೀಚೆಗೆ ಮೊಬೈಲುಗಳಲ್ಲಿ ಎನ್.ಎಮ್.ಕೇಳುವ ತಂತ್ರಜ್ಞಾ ಸೇರಿಕೊಂಡ ನಂತರವAತೂ ಜನತೆಗೆ ರೇಡಿಯೊ ಹಿಂದೆAದಿಗಿAತಲೂ ಹತ್ತಿರವಾಗಿದೆ ; ಅವರಲ್ಲೂ ಮುಖ್ಯವಾಗಿ ಯುವಜನತೆ ಎಲ್ಲೆಂದರಲ್ಲಿ ಎತ್ತೊಯ್ಯಬಹುವಾದ ಗುಣದಿಂದ ಅದು ಎಲ್ಲರ ಮೆಚ್ಚುಗೆ ಬೇರೆ ಮಾಧ್ಯಮಗಳಿಗಿಂತ ರೇಡಿಯೋ ಹೆಚ್ಚು ಆತ್ಮೀಯವಾದುದು. ಇದರಲ್ಲಿ ಶೋತೃಗಳಿಗೂ ರೇಡಿಯೋಕ್ಕೂ ವ್ಯಕ್ತಿಗತ ಸಂಬAಧವಿರುತ್ತದೆ.

ಹಲವರಿಗೆ ರೇಡಿಯೋ ಸ್ನೇಹಿತ ಕೊಡ, ಇನ್ನು ಆಕಾಶವಾಣಿಯ ವಿಷಯಕ್ಕೆ ಬಂದರೆ ಉಳಿದ ಸಮೂಹ ಮಾಧ್ಯಮಗಳಂತೆ ಅದು "ಯಶಸ್ಸಿನ ಫಾರ್ಮುಲಾ' ವನ್ನು ಅಪ್ಪಿಕೊಂಡಿಲ್ಲ. ಕೆಲವು ಸಮೂಹ ಮಾಧ್ಯಮಗಳು ಮಾಡುವ 'ಬ್ರೇನ್ ವಾಶಿಂಗ್' ಇಲ್ಲಿ ಇಲ್ಲ. ಜನರಿಗೆ ಹೆಚ್ಚು ರುಚಿಸುವ, ಜನಪ್ರಿಯ ವಸ್ತುವಿಷಯವನ್ನು ಬಹುತೇಕ ಎಲ್ಲ ಮಾಧ್ಯಮಗಳೂ ನೀಡುತ್ತವೆ. ಆದರೆ ಆಕಾಶವಾಣಿ ಬೇರೆ ಬೇರೆ ವಯಸ್ಸಿನ ಶೋತೃಸಮೂಹಕ್ಕೆ ಅವರ ವಿಶಿಷ್ಟಾಸಕ್ತಿಗಳನ್ನು, ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ನೀಡುತ್ತದೆ. ಅದಲ್ಲದೇ ಭಾರತದಲ್ಲಿ ಆಕಾಶವಾಣಿ ಕೇಂದ್ರಗಳ ಜಾಲವೇ ಇರುವುದರಿಂದ ಉತ್ತಮ ಕಾರ್ಯಕ್ರಮಗಳನ್ನು ಎಲ್ಲೆಡೆ ಪ್ರಸಾರ ಮಾಡುವ ಹಾಗೂ ಜನರಿಗೆ ತಲುಪಿಸುವ ಅನುಕೂಲವಿದೆ.

ಇತರ ಸರ್ಕಾರಿ ಇಲಾಖೆಗಳಿಗಿಂತ ಆಕಾಶವಾಣಿ ಭಿನ್ನ

ಆಕಾಶವಾಣಿಯ ಇತಿಹಾಸದ ಕುರಿತು ಹೇರಳ ಮಾಹಿತಿ ಲಭ್ಯವಿದೆ, ಆದರೆ ಆಕಾಶವಾಣಿಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ದೊರೆಯುವುದು ವಿರಳ, ಇಂತಹ ಶಿಸ್ತಿನ, ಅಚ್ಚುಕಟ್ಟುತನದ ಸರ್ಕಾರಿ ಇಲಾಖೆ ಬೇರೊಂದಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು, ಅಂತರಿಕವಾಗಿ ಆಕಾಶವಾಣಿಯ ಕಾರ್ಯಗಳು, ಅದನ್ನು ನಿರ್ವಹಿಸುವ ಬೇರೆ ಬೇರೆ ವಿಭಾಗಗಳು, ಅವುಗಳ ನಡುವಿನ ಹೊಂದಾಣಿಕೆ ಮುಂತಾದ ಅನೇಕ ವಿಷಯಗಳು ಜನಸಾಮಾನ್ಯರಿಗೆ ತಿಳಿದಿರದ ಸಾಧ್ಯತೆಗಳು ಹೆಚ್ಚು ಆಕಾಶವಾಣಿ ಭಾರತ ಸರ್ಕಾರದ ಅಧೀನ ಸಂಸ್ಥೆಯಾದರೂ ಅದು ಉಳಿದ ಸರ್ಕಾರಿ ಇಲಾಖೆಗಳಂತಲ್ಲದೆ ಸಾಮಾಜಿಕ ಹೊಣೆಗಾರಿಕೆಯನ್ನು ತನ್ನ ಹೆಗಲ ಮೇಲೆ ಕಳೆದ 80-90 ವರ್ಷಗಳಿಂದ ಹೊತ್ತಿರುವ ಬೃಹತ್ ಮಾಧ್ಯಮ ವಿಭಾಗ, 

ಸ್ವಾತಂತ್ರ‍್ಯಾನAತರ ಭಾರತ ಸರ್ಕಾರದ ಅನೇಕ ಮಹತ್ತರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಆಕಾಶವಾಣಿಯ ಸಾರ್ಥಕ ಸೇವೆಯಿದೆ, ಇಂತಹ ಸಂಸ್ಥೆ ಕಾಲಕಾಲಕ್ಕೆ ಅನೇಕ ಬದಲಾವಣೆಗಳಿಗೆ ತನ್ನನ್ನ ಒಡ್ಡಿಕೊಂಡಿದೆ. 'ಬಹುಜನ ಹಿತಾಯ ಬಹುಜನ ಸುಖಾಯ' ಎಂಬ ಧೈಯ ವಾಕ್ಯವನ್ನು ಹೊಂದಿರುವ ಆಕಾಶವಾಣಿ ತನ್ನ ವ್ಯಾಪ್ತಿ ಹಾಗೂ ಜನಪ್ರಿಯತೆಯನ್ನು ಎಂದೂ ದುರ್ಬಳಕೆ ಮಾಡಿಕೊಳ್ಳಲಿಲ್ಲ. ಜನಪರವಾದ, ಜನಹಿತವಾದ, ನಾಡು-ನುಡಿಯ ಏಳೆ, ಸಂಸ್ಕೃತಿ-ಪರAಪರೆಯನ್ನು ಬಿಂಬಿಸುವAತಹ ಕಾರ್ಯಕ್ರಮಗಳನ್ನೇ ಮಾಡುತ್ತಿದೆ. ದೇಶದ ಪ್ರಮುಖ 20 ಭಾಷೆಗಳಲ್ಲಿ ಪ್ರಸಾರ ಮಾಡುತ್ತಿರುವುದರ ಜೊತೆಗೆ ಉಪಭಾಷೆ (ಡಯಲೆಕ್ಟ್) ಗಳಲ್ಲೂ ಪ್ರಸಾರ ಮಾಡುತ್ತಿದೆ.

ನಾಡಿನ ಸಾಹಿತ್ಯ, ಕಲೆ, ನಾಟಕ ಮುಂತಾದ ಕ್ಷೇತ್ರಗಳು ಆಕಾಶವಾಣಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಅವುಗಳ ಕೊಡುಗೆ ಆಕಾಶವಾಣಿಗೆ ದೊರೆತು ತನ್ಮೂಲಕ ಆ ಕ್ಷೇತ್ರಗಳ ಬೆಳವಣಿಗೆಗೆ ಅದು ಸಹಕಾರಿಯಾಗಿದೆ. ಸರ್ಕಾರದ ವಿವಿಧ ಇಲಾಖೆಗಳಾದ ಭಾಷೆ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಯುವಜನಸೇವಾ ಇಲಾಖೆಗಳೊಂದಿಗೆ, ಸಾಹಿತ್ಯ ಅಕಾಡೆಮಿಗಳು, ಜನಪದ ಅಕಾಡೆಮಿ, ನಾಟಕ ಅಕಾಡೆಮಿ, ಸಂಗೀತ ಅಕಾಡೆಮಿ ಮುಂತಾದವುಗಳೆಲ್ಲ ಸೇರಿ ಮಾಡುವ ಕೆಲಸವನ್ನು ಇದೊಂದೆ ಸಂಸ್ಥೆ ನಿರ್ವಹಿಸುವುದು ಅದರ ಕಾರ್ಯಬಾಹುಳ್ಯವನ್ನು ತೋರಿಸುತ್ತದೆ. ಭಾರತದಂತಹ ಮುಂದುವರಿಯುತ್ತಿರುವ ರಾಷ್ಟ್ರದಲ್ಲಿ ಅನಕ್ಷರತೆ, ಬಡತನ, ಸರ್ಕಾರ ತನ್ನ ಯೋಜನೆಗಳಿಂದ ಹರಸಾಹಸ ಮಾಡುತ್ತಿದೆ.

ಈ ತನ್ನದೇ ಆದ ಮಾಧ್ಯಮದ ಅವಶ್ಯಕತೆಯನ್ನು ಮನಗಂಡ ಸರ್ಕಾರ ದೇಶದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಏಳೆಗಳಿಗಾಗಿ ರೂಪಿಸಿದ ತನ್ನ ಯೋಜನೆಗಳ ಹಿನ್ನೆಲೆಯಲ್ಲಿ

ಅನುಷ್ಠಾನಕ್ಕೆ ಈ ಮಾಧ್ಯಮವನ್ನು ಕಾಲಕಾಲಕ್ಕೆ ಯಶಸ್ವಿಯಾಗಿ ಉಪಯೋಗಿಸಿಕೊಳ್ಳುತ್ತ ಬಂದಿದೆ. ಕೃಷಿ, ನೀರಾವರಿ, ಹವಾಮಾನ, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮುಂತಾದ ವಿವಿಧ ಮಂತ್ರಾಲಯಗಳು ಹಾಗೂ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಆಕಾಶವಾಣಿ ಕಾರ್ಯ ನಿರ್ವಹಿಸುತ್ತದೆ. ದೆಹಲಿಯಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಆಕಾಶವಾಣಿ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ಕೇಂದ್ರಗಳನ್ನು ಹೊಂದಿದೆ. ಉದಾಹರಣೆಗೆ ಕರ್ನಾಟಕವನ್ನು ತೆಗೆದುಕೊಂಡರೆ ರಾಜಧಾನಿ ಬೆಂಗಳೂರಲ್ಲದೆ ಮೈಸೂರು, ಧಾರವಾಡ, ಕಲ್ಲುರ್ಗಿ, ಭದ್ರಾವತಿ, ಮಂಗಳೂರು, ಹಾಸನ,

ಮಡಿಕೇರಿ, ಹೊಸಪೇಟೆ, ಬಿಜಾಪುರ, ಚಿತ್ರದುರ್ಗ, ರಾಯಚೂರು, ಕಾರವಾರಗಳಲ್ಲಿ ಆಕಾಶವಾಣಿ ಕೇಂದ್ರಗಳಿವೆ. ಸ್ಥಳೀಯರಿಗೆ ಆದ್ಯತೆ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚು ಹೆಚ್ಚು ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ರೀತಿ ಆಕಾಶವಾಣಿಯ ಕಾರ್ಯವ್ಯಾಪ್ತಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ವಿಸ್ತರಣೆಯಾಗಿದೆ. ಒಟ್ಟಿನಲ್ಲಿ ಕೇಳುಗರ ದೃಷ್ಟಿಯಿಂದ ನೋಡಿದರೆ 2005ರಿಂದ ಮತ್ತೊಮ್ಮೆ ರೇಡಿಯೋದ ಸುವರ್ಣಯುಗ ಮರುಕಳಿಸಿದೆ ಎಂದು ಹೇಳಬಹುದು.