ತಾತ್ವಿಕ ಒಪ್ಪಂದ ಮೇರೆಗೆ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿದೆ. ಒಂದು ವೇಳೆ ಸರಕಾರ ನಡೆಸುವ ಪಕ್ಷ ಬದಲಾದರೆ, ಗ್ಯಾರಂಟಿ ಯೋಜನೆಗಳನ್ನು ರದ್ದು ಪಡಿಸಬಹುದು. ಕೆಲವು ವರ್ಷಗಳ ಕಾಲ ಜನರ ಆರ್ಥಿಕ ಸ್ಥಿತಿ ಬಲಗೊಳಿಸುವ ನಿಟ್ಟಿನಲ್ಲಿ ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸುವುದು ಸರ್ಕಾರದ ಮೂಲ ಉದ್ದೇಶ. ಜನರ ಆರ್ಥಿಕ ಸ್ಥಿತಿ ಬಲಗೊಂಡ ನಂತರ ನಿಲ್ಲಿಸಬಹುದು. ಹಿಂದಿನ ಸರ್ಕಾರಗಳು ಘೋಷಿಸಿದ್ದ ಕಲ್ಯಾಣ ಕಾರ್ಯಕ್ರಮಗಳು ಗೊತ್ತು ಗುರಿ ಇಲ್ಲದೆ ರದ್ದು ಆಗಿರುವ ಉದಾಹರಣೆಗಳು ಸಾಕಷ್ಟಿವೆ. ತಾತ್ವಿಕ ಒಪ್ಪಂದ ಮೇರೆಗೆ ಜಾರಿಗೆ ಬಂದ ಯೋಜನೆಗಳು ರಾಜ್ಯ ಸರ್ಕಾರ ಯಾವುದೇ ಸಂದರ್ಭದಲ್ಲಿ ರದ್ದು ಪಡಿಸಬಹುದಾಗಿದೆ. ಜನರಿಗೂ ತಿಳಿಸದೇ ರದ್ದು ಮಾಡಬಹುದು ಅದು ಸರ್ಕಾರಕ್ಕೆ ಬಿಟ್ಟ ವಿಚಾರ. ರಾಜಕಾರಣಿಗಳಿಗೆ ಮನವರಿಕೆ ಆಗಬೇಕಾಗಿರುವುದು ಅಧಿಕಾರ ಅನ್ನುವುದು ಶಾಶ್ವತ ಅಲ್ಲ, ಇದ್ದಷ್ಟು ದಿನ ಅಧಿಕಾರದಲ್ಲಿ ಇದ್ದು ರಾಜಕಾರಣಿಗಳು ಜನರಿಗೆ ಉತ್ತಮ ಸೇವೆ ನೀಡಬೇಕು. ಜನರಿಗೆ ಆಡಳಿತ ಉತ್ತಮವಾಗಿದ್ದಾರೆ. ಜನರು ಸರ್ಕಾರವನ್ನು ಮರು ಆಯ್ಕೆ ಮಾಡುತ್ತಾರೆ. ಸರ್ಕಾರ ಎಂದಮೇಲೆ ರಾಜ್ಯದಲ್ಲಿ ಮಂತ್ರಿಗಳು ಫುಲ್ ಆಕ್ಟಿವ್ ಆಗಿರಬೇಕು. ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ಯಾವುದೇ ಕ್ಷಣದಲ್ಲಾದರೂ ಎಂತಹ ಸಂದರ್ಭದಲ್ಲಾದರೂ ಸಂಕಷ್ಟ ನಿರ್ವಹಣೆ ಸಿದ್ಧರಾದರೆ ಉತ್ತಮ. ಇನ್ನು ಕ್ಷೇತ್ರದ ಶಾಸಕರು ಹೊರತಾಗಿಲ್ಲ ಅವರ ಸಹ ತಮ್ಮ ಕ್ಷೇತ್ರದ ಜನರ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು.
ಒಂಟಿ ಕಾಲಿನ ಕುಂಟೆ ಬಿಲ್ಲೆ ಆಡುವ ಸರ್ಕಾರಗಳಿಂದ, ಜನ ವಿರೋಧಿ ನೀತಿ ಬೇಡ
ದೇಶದ ಕೆಲವು ರಾಜ್ಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಹುಮತವಿಲ್ಲ. ಮಿತ್ರ ಪಕ್ಷಗಳ ಬೆಂಬಲದಿಂದ ಅಧಿಕಾರ ನಡೆಸುತ್ತಿದ್ದಾರೆ. ಅಷ್ಟೇ ಏಕೆ ಕೇಂದ್ರ ಸರ್ಕಾರ ಸಹ ಒಂಟಿ ಕಾಲಿನಲ್ಲಿ ಅಧಿಕಾರ ನಡೆಸುತ್ತಿದೆ. ಯಾವಾಗ ಬಿಹಾರ, ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಮೂಡ್ ಬದಲಾಗುತ್ತದೆ ಅಂತ ಹೇಳೋಕೆ ಸಾಧ್ಯವಿಲ್ಲ. ಜನ ವಿರೋಧಿ ನೀತಿ ಏನಾದ್ರೂ ಒಂಟಿ ಕಾಲಿನ ಕುಂಟೆ ಬಿಲ್ಲೆ ಆಡುವ ಸರಕಾರಗಳು ತೆಗೆದುಕೊಂಡರೆ ಜನರು ಮನೆಯ ಹಾದಿ ತೋರಿಸುತ್ತಾರೆ. ಬೈಕ್ ಗಳಿಗೆ ಟೋಲ್ ಸಂಗ್ರಹ ಸುದ್ದಿ ಸುಳ್ಳಾಗಿದ್ದು, ಒಂದು ವೇಳೆ ನಿಜವಾದರೆ. ಕೇಂದ್ರ ಸರ್ಕಾರ ಬದಲಾಯಿಸು ನಿರ್ಧಾರಕ್ಕೆ ಜನ ಬರುತ್ತಾರೆ. ದೇವರು ಉಚಿತವಾಗಿ ನೀಡಿದ ಗಾಳಿ, ನೀರು, ಸೂರ್ಯನ ಬೆಳಕಿಗೂ ಹಣ ಪಾವತಿಸುವ ಕಾಲ ಬರುತ್ತದೆ ಅಂದರೆ ವಿಪರ್ಯಾಸ ಸರಿ.