ಸರ್ಕಾರ ಮಂತ್ರಿ ಮಂಡಲ ರಚಿಸುವುದು ಏಕೆ? ಸಚಿವರು ಒಂದೊಂದು ಇಲಾಖೆಯ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡಲಿ ಎಂದು ಆದರೆ ಮಂತ್ರಿಗಳಾದ ಮೇಲೆ ಜಿಲ್ಲಾ ಉಸ್ತುವಾರಿ ಮಂತ್ರಿಗಾಗಿ ಜಗಳ ನಡೆದ ಘಟನೆಗಳು ನಡೆದಿವೆ. ನನಗೆ ಅದೇ ಜಿಲ್ಲೆ ಬೇಕು. ನನಗೆ ಇದೆ ಜಿಲ್ಲೆ ಬೇಕು ಎಂದು ಮುಖ್ಯಮಂತ್ರಿಗಳ ಬೆನ್ನು ಬಿದ್ದು ಗಂಟು ಬೀಳುವುದು ನೋಡಿದ್ದಿವಿ. ಅದಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಹುದ್ದೆ ಏಕೆ ಅಂತ? ಸಚಿವರು ಇಡೀ ಕರ್ನಾಟಕ ರಾಜ್ಯಕ್ಕೆ ಮಂತ್ರಿ ಆಗಿರುತ್ತಾರೆ. ತಮ್ಮ ತಮ್ಮ ಇಲಾಖೆ ಸಂಬಂಧಿಸಿದಂತೆ ಕ್ರಮ ಕೈಗೊಂಡರೆ ಸಾಕು ಪ್ರಕರಣ ಅಂತ್ಯ ಕಾಣುತ್ತದೆ. ಈ ಜಿಲ್ಲಾ ಉಸ್ತುವಾರಿ ಮಂತ್ರಿಯಿಂದಾಗಿ, ಸಚಿವರು ರಾಜ್ಯ ಪ್ರವಾಸ ನಿಲ್ಲಿಸುತ್ತಾರೆ. ತಮ್ಮ ತಮ್ಮ ಉಸ್ತುವಾರಿ ಜಿಲ್ಲೆ ನೋಡಿಕೊಂಡರೆ ಸಾಕು ಎನ್ನುವ ಮಟ್ಟಕ್ಕೆ ಬರುತ್ತಾರೆ. ಅದಕ್ಕೆ ಈ ಜಿಲ್ಲಾ ಉಸ್ತುವಾರಿ ಮಂತ್ರಿ ಅಲ್ಲಲ್ಲ ಜಿಲ್ಲಾ ಉಸಾಬರಿ ಮಂತ್ರಿಯಿಂದ ಜನ ಬೇಸತ್ತು ಹೋಗಿದ್ದಾರೆ. ಸಚಿವರು ತಮ್ಮ ಇಲಾಖೆಯನ್ನು ಒಂದು ಜಿಲ್ಲೆಗೆ ಸೀಮಿತಗೊಳಿಸಿರುವುದು ಕೆಲವರಿಗೆ ಅಸಮಾಧಾನಕ್ಕೆ ಕಾರಣವಾಗಿದೆ. ಈ ಜಿಲ್ಲಾ ಉಸ್ತುವಾರಿ ಮಂತ್ರಿ ಅಲ್ಲಲ್ಲ ಉಸಾಬರಿ ಮಂತ್ರಿ ತೆಗೆದು ಹಾಕಿ, ಇಡೀ ಕರ್ನಾಟಕ ರಾಜ್ಯಕ್ಕೆ ಮಂತ್ರಿ ಎಂದು ಜನರಿಗೆ ಮನದಟ್ಟು ಮಾಡಬೇಕು. ಅಂದಾಗ ಸರ್ಕಾರ ಆಡಳಿತ ಯಂತ್ರ ಚುರುಕುಗೊಂಡಿದೆ ಎಂಬ ಅರ್ಥ ಜನರಿಗೆ ಬರುತ್ತದೆ.
ಶಿಷ್ಟಾಚಾರ ಉಲ್ಲಂಘನೆ ವಿಧಾನಸೌಧಕ್ಕೆ ಅನ್ವಯಿಸಲ್ಲ
ಯಾವಾಗ ಕ್ಷೇತ್ರದ ಶಾಸಕರು ಸಾರ್ವಜನಿಕ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ರೊಚ್ಚಿಗೆದ್ದ ವಿಧಾನಸೌಧದಲ್ಲಿರುವ ಸಚಿವರ ಕೊಠಡಿ ಸಂಖ್ಯೆಗೆ ಪತ್ರ ಬರೆದು, ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೋರಿ ಅರ್ಜಿ ಪತ್ರದ ಮೂಲಕ ಸಚಿವರಿಗೆ ಸಾರ್ವಜನಿಕ ತಿಳಿಸಿರುತ್ತಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸಚಿವರ ಸ್ಪಂದಿಸಿದಾಗ ಶಾಸಕರ ಶಿಷ್ಟಾಚಾರ ಉಲ್ಲಂಘನೆ ಹೇಗಾಗುತ್ತದೆ. ಮುಖ್ಯಮಂತ್ರಿಗಳು, ಮಂತ್ರಿಗಳು ಶಾಸಕರಗಿಂತ ದೊಡ್ಡವರು, ಶಿಷ್ಟಾಚಾರ ಉಲ್ಲಂಘನೆ ಅನ್ವಯಿಸುವುದಿಲ್ಲ.
Related Tags:- ಜಿಲ್ಲಾ ಉಸ್ತುವಾರಿ ಮಂತ್ರಿ
Kannada Blog