ಸರ್ಕಾರದ ನಿರ್ಧಾರ ಸರವೇಗದಲ್ಲಿ ಆಗಲಿ
ಒಂದು ಒಳ್ಳೆಯ ಕೆಲಸ ಮಾಡಬೇಕಾದರೆ, ನೂರಾರು ಕೆಟ್ಟ ಹುಳಗಳು ಅಡ್ಡಗಾಲು ಹಾಕುವುದು ಸಹಜ. ಆ ತರ ಇರುವ ಕೆಟ್ಟ ಹುಳಗಳಿಗೆ ಮನ್ನಣೆ ನೀಡಿದ್ದರೆ, ಸಾಮಾಜ ಸುಧಾರಣೆ ಮಾಡುವುದು ಕಷ್ಟವಾಗಲಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಆಲೋಚನೆಗೆ ಸರ್ಕಾರ ಹಿಂದೇಟು ಹಾಕುವುದು ಏಕೆ?. ಸರ್ಕಾರ ಮಟ್ಟದಲ್ಲಿ ಕಾನೂನು ಪ್ರಕಾರ, ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲು ಯಾವುದು ಸಾಧ್ಯತೆ ಇದೆ. ಆ ಎಲ್ಲ ಕೆಲಸ ಸರವೇಗದಲ್ಲಿ ರಾಜ್ಯ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲಿ. ಒಂದು ವೇಳೆ ಸರ್ಕಾರದ ನಿರ್ಧಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಾನೂನು ಪ್ರಕಾರವೇ ಜಾರಿಗೆ ತೆಗೆದುಕೊಂಡ ನಿರ್ಧಾರದ ಯಾವುದಕ್ಕೂ ಸಮಸ್ಯೆಯಾಗುವುದಿಲ್ಲ. ಕೆಲವರಿಗೆ ಕಾಯ್ದೆ ಕಾನೂನಿನ ಬಗ್ಗೆ ತಿಳಿವಳಿಕೆ ಕಡಿಮೆ ಇರುತ್ತದೆ. ಒಮ್ಮೆ ಹೇಳಿದ್ದರು ತಿಳಿದುಕೊಳ್ಳುವುದಿಲ್ಲ. ಕಾಯ್ದೆಗಳನ್ನು ನಿವೃತ್ತ ನ್ಯಾಯಮೂರ್ತಿಗಳಿಂದ ವರ್ಷಾನುಗಟ್ಟಲೆ ಸಂಶೋಧಿಸಿ, ರಚನೆ ಮಾಡಿದ ಕಾಯ್ದೆಗಳು ಆಗಿರುತ್ತದೆ. ಕಾಯ್ದೆ ವಿರುದ್ಧ ನಡೆಯುವವರು ಜೈಲು ಊಟ ಸವಿಯಲು ಅರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರದ ಸೂಚನೆಯಂತೆ ಡಿಸೆಂಬರ್ 31 ರೊಳಗೆ ಅಂತಿಮ ಗಡಿ ಗುರುತಿಸುವುದು, ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಎರಡು ಹೊಸ ಜಿಲ್ಲೆ ರಚನೆ, ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸುವುದು ಸೇರಿದಂತೆ ಯಾವುದು ಸರ್ಕಾರದ ಮಟ್ಟದಲ್ಲಿ ಬಾಕಿ ಇದೆ. ಅವುಗಳೆಲ್ಲವೂ ಶೀಘ್ರ ಕ್ರಮ ಕೈಗೊಳ್ಳುವ ಕೆಲಸವಾಗಲಿ.
ಲೇಖನಗಳು ಸಂಕ್ಷಿಪ್ತವಾಗರಲಿ
ಪತ್ರಿಕೆಗಳಲ್ಲಿ ಸಾರ್ವಜನಿಕರ ಸಲಹೆ ಸೂಚನೆಗಳಿಗಾಗಿ ಅಥವಾ ಲೇಖನ ಪುಟ ಇರುತ್ತದೆ. 500ಕ್ಕೂ ಅಧಿಕ ಪದ ಮೀರಿ ಬರೆದ ಲೇಖನ ಪದೇ ಪದೇ ಓದಿದಾಗ ಅರ್ಥ ಆಗಲ್ಲ. ನಿತ್ಯ ಕರ್ಮದ ಒಂದು, ಎರಡು ಬಿಟ್ಟು ಬೆಳ್ಳಗ್ಗೆಯಿಂದ ರಾತ್ರಿವರೆಗೂ ಏನೇನು ಮಾಡಿದ್ದೀವಿ ಅವುಗಳನ್ನೆಲ್ಲ ಸೇರಿಸಿ ಬರೆದ ಲೇಖನ ಸೇರಿದಂತೆ ಯಾವುದೇ ಲೇಖನ ಆಗ್ಲಿ 500ಕ್ಕೂ ಅಧಿಕ ಪದದಲ್ಲಿ ಜನರಿಗೆ ತಿಳಿಸುವ ಪ್ರಯತ್ನಕ್ಕಿಂತ ಸಂಕ್ಷಿಪ್ತವಾಗಿ 100, 150, 180 ಪದಗಳಲ್ಲಿ ಸರಿಯಾಗಿ ಬರೆದು ತಿಳಿಸಿದರು ಚಂದ. ಅತ್ಯುತ್ತಮ ಲೇಖನ ಪದಗಳಲ್ಲಿ ಗುರುತಿಸುವ ಕ್ಕಿಂತಲೂ ಸಾರ್ವಜನಿಕರ ನಾಡಿ ಮಿಡಿತದ ಲೇಖನದ ಬರಹಗಳನ್ನು ಹೆಚ್ಚು ಪ್ರಕಟಿಸಬೇಕು. ಪದೇ ಪದೇ ಓದಿದರು ಜನರಿಗೆ ಅರ್ಥ ಆಗದೇ ಇರುವ ಲೇಖನ ಒಂದು ರೀತಿ ಡಿಸೈನ್ ಆರ್ಟಿಕಲ್ ಆಗಿದೆ ಅಂತ ಅರ್ಥ.