2019 ರಲ್ಲಿ ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಓದುಬೇಕಾದರೇ, ಎರಡು ವರ್ಷ ನನಗೆ ತಿಳಿದ ಮಟ್ಟಿಗೆ, ಅನುಭವದ ಮಟ್ಟಿಗೆ ಎಲ್ಲಾ ವಿಭಾಗಗಳಲ್ಲಿ ಪ್ರಾದ್ಯಾಪಕರ ನಡುವೆ ಸಮನ್ವಯ ಕೊರತೆ ಇದೆ. ಕಾರಣ ವಿಭಾಗದ ಮುಖ್ಯಸ್ಥ ಎಂಬ ಹುದ್ದೆ.
ಈ ಹುದ್ದೆಗೆ ಇರುವಷ್ಟು ಪೈಪೋಟಿ ಯಾವ ಹುದ್ದೆಗೂ ಇಲ್ಲ. ನಮ್ಮ ಪತ್ರಿಕೋದ್ಯಮ ವಿಭಾಗದಲ್ಲಿ ಜೆ.ಎಂ ಚಂದುನವರ ಮುಖ್ಯಸ್ಥರಾಗಿದ್ದರು, ಇಬ್ಬರು ಹಿರಿಯ ಪ್ರಾಧ್ಯಾಪಕರು ನಾಗರಾಜ್ ಹಳ್ಳಿಯವರ, ಸಂಜಯ ಮಾಲಗತ್ತಿ ಗುರುಗಳು ನಡುವೆ ಹೊಂದಾಣಿಕೆ ಇರ್ಲಿಲ್ಲ. ಕಾರಣ ವಿಭಾಗದ ಮುಖ್ಯಸ್ಥ ಎಂಬ ಹುದ್ದೆ. ಈ ಹುದ್ದೆಯಿಂದಾಗಿ ಮೂವರು ನಡುವೆ ಸರಿಯಾಗಿ ಮಾತು ಇಲ್ಲ,
ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತಾಡುತ್ತಿರಲಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಎಲ್ಲದರಲ್ಲೂ ವಿರೋಧ ಭಾವನೆ. ನನಗೂ ನೋಡಿ, ನೋಡಿ ಸಾಕಾಗಿ ಆಗಿನ ಮುಖ್ಯಮಂತ್ರಿಗಳಿಗೆ, ಉನ್ನತ ಶಿಕ್ಷಣ ಸಚಿವರಿಗೂ ಪತ್ರ ಬರೆದು ಒಂದುಗೂಡಿಸುವಂತೆ ಕೇಳಿಕೊಂಡಿದ್ದು ಸುಳ್ಳಲ್ಲ. ಈ ಪತ್ರ ಕುಲಸಚಿವರಿಗೆ ತಲುಪಿರಬೇಕು ಅನ್ಸುತ್ತೆ, ಆಗ ಸಂವಹನ ಕೂಟ ಕಾರ್ಯಕ್ರಮದಲ್ಲಿ ಮೂವರು ಒಟ್ಟುಗೂಡಿ ಪೋಟೋ ತೆಗೆಯಿಸಿ ಕೊಂಡಿದ್ದು,
ನೋಡಿ ಎಲ್ಲಾ ವಿದ್ಯಾರ್ಥಿಗಳು ಫುಲ್ ಖುಷಿ ಆಗಿಬಿಡುತ್ತಾರೆ. ಜೆ.ಎಂ ಚಂದುನವರ ಸರ್-ಗೆ ನಾನು ಅಂತ್ರು ಅಚ್ಚು ಮೆಚ್ಚಿನ ವಿಧ್ಯಾರ್ಥಿಯಾಗಿದ್ದೆ. ಈಗ ಸಂಜಯ ಮಾಲಗತ್ತಿ ವಿಭಾಗದ ಮುಖ್ಯಸ್ಥರಾಗಿದ್ದಾರೆ. ನಾಗರಾಜ ಹಳ್ಳಿಯವರ ನಿವೃತ್ತಿ ಆಗಿದ್ದಾರೆ. ನಾನು ಯಾವಾಗಲೂ ತಮಾಷೆ ಮಾಡುತ್ತಿದ್ದ ಜೆ.ಎಂ. ಚಂದುನವರ ಸರ್-ಗೆ ಮಾತ್ರ ನನ್ನ ನೆನಪು ಮಾಡಿಕೊಳ್ಳದಷ್ಟು ವಯಸ್ಸು ಆಗಿ, ಮರೆವು ಜಾಸ್ತಿ ಆಗಿದೆ.
ಪ್ರಾಧ್ಯಾಪಕ ಹುದ್ದೆಯಲ್ಲಿ ಮುಂದುವರಿದು ಮಾಜಿ ಎಚ್.ಓ.ಡಿ ಆಗಿದ್ದಾರೆ. ಅಂದರೆ ನನ್ನ ಅನುಭವದ ಮಟ್ಟಿಗೆ ಕೇವಲ ಒಂದೇ ವಿಭಾಗ ಅಲ್ಲ ಕರ್ನಾಟಕ ವಿಶ್ವವಿದ್ಯಾಲಯದ 48 ವಿಭಾಗದಲ್ಲಿ ಪ್ರಾಧ್ಯಾಪಕರ ನಡುವೆ ಸಮನ್ವಯತೆ ಇಲ್ಲ. ಕಾರಣ ವಿಭಾಗದ ಮುಖ್ಯಸ್ಥ ಹುದ್ದೆ. ಇದರಿಂದ ಹಿರಿಯ ಶ್ರೇಣಿ ಆಧಾರದ ಮೇಲೆ ವಿಭಾಗದ ಮುಖ್ಯಸ್ಥ, ಉಪ ಕುಲಪತಿ ನೇಮಕವಾಗಬೇಕು ಎಂಬ ವಾದವೂ ಸಮಸ್ಯೆಯಾಗುತ್ತದೆ. ಹುದ್ದೆ ಅನ್ನುವುದು ಶಾಶ್ವತ ಅಲ್ಲ, ವಿದ್ಯಾರ್ಥಿಗಳಿಗೆ ಕಲಿಸುವಂತಹ ಶಿಕ್ಷಣದ ಪಾತ್ರ ಮುಖ್ಯವಾಗಿರುತ್ತದೆ. ಎಲ್ಲ ವಿಭಾಗಗಳಲ್ಲೂ ಸುಧಾರಣೆ ಕಂಡರೆ ಸಾಕು, ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಲಿ.
Related Tags:- ಕವಿವಿ, ಕನ್ನಡ ವಿಶ್ವವಿದ್ಯಾಲಯ, ಪ್ರಾಧ್ಯಾಪಕರ ಸಮನ್ವಯ, Kannada University Hampi, Academic Conflict, Teacher Coordination Issues, Karnataka Education, Kannada Blog, University Issues, Education Quality