ಬಹುದಿನದ ಬೇಡಿಕೆಯಾದ ಮಹದಾಯಿ ನದಿಯ ಉಪ ನದಿಗಳಾದ ಕಳಸ ಮತ್ತು ಬಂಡೂರಿಯ ನೀರನ್ನು ತೀರುಗಿಸಿ, ಮಲಪ್ರಭಾ ನದಿಗೆ ಸೇರಿಸಲು ರೂಪಿಸಿದ ಯೋಜನೆಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ದೇಶದ ಒಕ್ಕೂಟ ಸೇರಬೇಕಾದರೆ, ರಾಜ್ಯದ ಬೇಕು ಬೇಡಿಕೆಗಳನ್ನು ಯಾವುದೇ ಷರತ್ತುಗಳು ಇಲ್ಲದೇ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಅಂತಾರಾಜ್ಯ ಜಲ ವಿವಾದಗಳನ್ನು ಕೇಂದ್ರ ಸರ್ಕಾರ ಮಧ್ಯಸ್ಥ ವಹಿಸಿ ಬಗೆಹರಿಸುವುದು ಆದ್ಯ ಕರ್ತವ್ಯವಾಗಿದೆ. ನ್ಯಾಯಾಧೀಕರಣ ತೀರ್ಪಿನಂತೆ 13.42 ಟಿಎಂಸಿ ನೀರು ಹಂಚಿಕೆಯಾಗಿದೆ. ಆದರೆ ನ್ಯಾಯಾಲಯದ ಎರಡು ಷರತ್ತುಗಳು ವಿಧಿಸಿದೆ ಆ ಷರತ್ತುಗಳು ಏನೆಂದರೆ ರಾಜ್ಯದ ಕಳಸಾ ನಾಲೆಗೆ ನದಿಯ ಸಂಪರ್ಕ ಕಲ್ಪಿಸುವ ತಾಣದಲ್ಲಿ ನಿರ್ಮಿಸಿರುವ ತಡೆಗೋಡೆಯನ್ನು ತೆಗೆಯಲು ‘ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಅಗತ್ಯ ಇನ್ನೊಂದು ಹಲ್ಸರಾ ಮತ್ತು ಬಂಡೂರಿ ಬಳಿ ಹೊಸದಾಗಿ ಅಣೆಕಟ್ಟುಗಳನ್ನೂ ಕಟ್ಟಬೇಕು.
ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ಹೊಸದಾಗಿ ಪ್ರಸ್ತಾವ ಸಲ್ಲಿಸಿ ಅನುಮತಿ ಪಡೆಯಬೇಕಾಗುವುದು ಅವಶ್ಯಕವಾಗಿದೆ. ಅನುಮತಿ ನೀಡಬೇಕಾಗಿರುವುದು ಕೇಂದ್ರ ಸರ್ಕಾರವೇ ಅನುಮತಿ ನೀಡದೇ ಸಣ್ಣ ರಾಜ್ಯದ ಬೆದರಿಕೆಗೆ ಬಾಯಿ ಮುಚ್ಚಿಕೊಂಡು ಕುಳಿತಿರುವುದು ವಿಪರ್ಯಾಸ ಸರಿ. ಕೇಂದ್ರ ಸರ್ಕಾರದ ನಮ್ಮ ಬೇಡಿಕೆಗೆ ಬಗ್ಗದೆ ಹೋದರೆ ಗೋವಾ ರಾಜ್ಯದ ಸಂಪರ್ಕ ಕಡಿತಗೊಳಿಸಿ ಬಿಸಿ ಮುಟ್ಟಿಸಬೇಕು. ನಮ್ಮ ರಾಜ್ಯದಿಂದ ಗೋವಾ ರಾಜ್ಯಕ್ಕೆ ಯಾವುದೇ ತರ ಉಪಯೋಗಗಳು ಇದ್ದರೆ ತಕ್ಷಣ ನಿಲ್ಲಿಸುವ ಮೂಲಕ ಎಚ್ಚರಿಕೆ ನೀಡುವುದು ಅಗತ್ಯವಾಗಿದೆ.
ಕಳಸಾ ಬಂಡೂರಿ ಸಂಕ್ಷಿಪ್ತ ವಿವರ
ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಮತ್ತು ಗದಗ ಜಿಲ್ಲೆಯ ಕುಡಿಯುವ ನೀರಿನ ಅಗತ್ಯಗಳನ್ನು ಒದಗಿಸಲು, ಮಹಾದಾಯಿಯ ನದಿಯ ಉಪನದಿಗಳಾದ ಕಳಸ ಮತ್ತು ಬಂಡೂರಿಯ 7.56 ಟಿಎಂಸಿ ಯಷ್ಟನ್ನು ತಿರುಗಿಸಿ, ಮಲಪ್ರಭಾ ನದಿಗೆ ಸೇರಿಸಲು ಕಳಸ ಮತ್ತು ಬಂಡೂರಿಗೆ ಅಡ್ಡಲಾಗಿ ಕಟ್ಟೆ ಕಟ್ಟುವ ಯೋಜನೆ ಇದ್ದಾಗಿದೆ. ಕೇಂದ್ರ ಜಲ ಆಯೋಗದ ಪ್ರಕಾರವೇ 42 ಟಿಎಂಸಿ ಅಡಿ ನೀರು ನೀಡಬೇಕಿತ್ತು. ಈಗ ಕೇವಲ 13.42 ಟಿಎಂಸಿ ಅಡಿ ನೀರನ್ನು ತೀರ್ಪಿನಲ್ಲಿ ನೀಡಿದೆ. ಈ ತೀರ್ಪಿನಿಂದ ರಾಜ್ಯಕ್ಕೆ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. ಕುಡಿಯುವ ಉದ್ದೇಶದಿಂದ 5.40 ಟಿಎಂಸಿ ಅಡಿ ಹಾಗೂ ಜಲ ವಿದ್ಯುತ್ ಉತ್ಪಾದನೆಗೆ 8.02 ಟಿಎಂಸಿ ಅಡಿ ಸೇರಿ ನ್ಯಾಯಮಂಡಳಿಯು ರಾಜ್ಯಕ್ಕೆ 13.42 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.
ಆದರೆ ಮಹದಾಯಿ ನದಿಯಿಂದ ಮಲಪ್ರಭಾಕ್ಕೆ (ಕಳಸಾ ಬಂಡೂರಿ ಯೋಜನೆ) ನೀರು ಹರಿಸುವ ಕೋರಿಕೆಯಂತೆ ಮಹದಾಯಿ ನ್ಯಾಯಮಂಡಳಿ ತೀರ್ಪಿನಲ್ಲಿ ರಾಜ್ಯದ ಕಳಸಾ ನಾಲೆಗೆ ನದಿಯ ಸಂಪರ್ಕ ಕಲ್ಪಿಸುವ ತಾಣದಲ್ಲಿ ನಿರ್ಮಿಸಿರುವ ತಡೆಗೋಡೆಯನ್ನು ತೆಗೆಯಲು ‘ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಅಗತ್ಯ’ ಎಂಬ ಷರತ್ತು ಇರುವುದರಿಂದ ಕುಡಿಯುವ ನೀರು ತಕ್ಷಣ ಲಭ್ಯತೆ ಇಲ್ಲ. ಬಂಡೂರಿ ನಾಲೆಯಿಂದ 2.18 ಟಿಎಂಸಿ ಅಡಿಯಷ್ಟು ನೀರನ್ನು ರಾಜ್ಯದ ಬಳಕೆಗೆ ಕೊಟ್ಟರೂ, ಬಳಸುವ ನಾಲೆಗೆ ಅರಣ್ಯದ ಒಳಗಿಂದಲೇ ನೀರನ್ನು ತರಬೇಕಾಗುವುದು,
ಮತ್ತೆ ಹಲ್ಸರಾ ಮತ್ತು ಬಂಡೂರಿ ಬಳಿ ಹೊಸದಾಗಿ ಅಣೆಕಟ್ಟುಗಳನ್ನೂ ಕಟ್ಟಬೇಕು. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ಹೊಸದಾಗಿ ಪ್ರಸ್ತಾವ ಸಲ್ಲಿಸಿ ಅನುಮತಿ ಪಡೆಯಬೇಕಾಗುವುದು. ಆದ್ದರಿಂದ ಬಂಡೂರಿ ನಾಲೆಯಿಂದ ಕುಡಿಯುವ ನೀರನ್ನು ಅಗತ್ಯ ಪ್ರದೇಶಗಳಿಗೆ ಒದಗಿಸಲು ಕೆಲವು ವರ್ಷಗಳೇ ತಡವಾಗಹುದು, ಎಂಬುದು ಜಲಸಂಪನ್ಮೂಲ ಇಲಾಖೆಯ ಅಭಿಪ್ರಾಯವಾಗಿದೆ.
Related Tags:- ಮಹದಾಯಿ ನದಿ, ಮಹದಾಯಿ ವಿವಾದ, ಮಹದಾಯಿ ಕರ್ನಾಟಕ, Mahadayi River Dispute, Karnataka Water Crisis, Central Government Negligence, Karnataka vs Goa, Water Sharing Issues, Kannada Politics, Kannada Blog