ಬೆಂಗಳೂರಿಗೆ ಹೋದಾಗ ಮೊದಲು ನೋಡಿ ಬಾರೋದು ವಿಧಾನಸೌಧವೇ. ಅದು 3 ಗಂಟೆ ನಂತರವಷ್ಟೇ, ಕರ್ನಾಟಕ ಒನ್ ಆಫ್ ನಲ್ಲಿ ವಿಧಾನಸೌಧ ಆಪ್ಷನ್ ಆಯ್ದುಕೊಂಡು ವಿಧಾನಸೌಧ ಅಥವಾ ಪಕ್ಕದಲ್ಲಿರುವ ವಿಕಾಸಸೌಧದ ಕಟ್ಟಡದಲ್ಲಿರುವ ಯಾವುದಾದರೂ ಇಲಾಖೆ ಆಯ್ದುಕೊಂಡು ಬಾರ್ ಕೊಡ್ ಆಧಾರಿತ ಪಾಸ್ ಪಡೆದು ವಿಧಾನಸೌಧದ ಒಳಗೆ 3 ಗಂಟೆ ನಂತರ ಹೋಗಬಹುದು. ಈ ಸಮಯ ಬದಲಾವಣೆ ತರಲು ಸಾಧ್ಯವಿದೆಯಾ? ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೂ ವಿಧಾನಸೌಧ ನೋಡುವ ಮತ್ತು ಸಮಸ್ಯೆ ಹೇಳಿಕೊಳ್ಳುವ ವ್ಯವಸ್ಥೆ ಮಾಡಬೇಕು. ದೂರದ ಸ್ಥಳೀಯಗಳಾದ ಅಥವಾ ಪ್ರಾದೇಶಿಕ ವಿಭಾಗದ ವ್ಯಾಪ್ತಿಯ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮೈಸೂರು ಸುತ್ತಮುತ್ತಲಿನ ಜಿಲ್ಲೆಯ ಜನರು ಮದ್ಯಾಹ್ನ 3 ಗಂಟೆವರೆಗೂ ಕಾಯಬೇಕು. ಹಾಗಾಗಿ ವಿಧಾನಸೌಧದ ಒಳಾಂಗಣ ನೋಡಲು ಮತ್ತು ಸಮಸ್ಯೆ ಹೇಳಿಕೊಳ್ಳಲು ಎರಡು ತಾಸು ಸಾಕು ಅದು ಮದ್ಯಾಹ್ನ 12 ರಿಂದ 2 ಗಂಟೆ ವರೆಗೆ ನೀಡಿದರೆ ಸಾರ್ವಜನಿಕರಿಗೆ ತುಂಬಾ ಅನುಕೂಲಕರವಾಗಲಿದೆ.
ವಿಧಾನಸೌಧ ಕಳೆಗಟ್ಟಿದೆ ಕರ್ನಾಟಕ ಸರ್ಕಾರದ ಕಾರುಗಳು
ಒಂದರಮೇಲೊಂದು ಕರ್ನಾಟಕ ಸರ್ಕಾರ ಎಂಬ ನಾಮಫಲಕದ ಕಾರುಗಳು ನೋಡುಗರ ಕಣ್ಣುಗಳಿಗೆ ಕಳೆ ಗಟ್ಟಿದೆ. ಕರ್ನಾಟಕ ಸರ್ಕಾರ ಎಂಬ ನಾಮ ಅಂಕಿತ ಕಾರು ನೋಡಿದಾಗ ಮನಸ್ಸಿಗೆ ಅನ್ನಿಸಿದ್ದು ನಮ್ದೇ ನಡಿತೈತಿ ಹವಾ ನಿಮ್ಮದೇನು ಹೋಗು ಅನ್ನುವ ರೀತಿಯಲ್ಲಿ ಭಾವನೆ ಉತ್ತರ ಕರ್ನಾಟಕ ಭಾಷೆಯಲ್ಲಿ ಮೂಡಿತು. ವಿಧಾನಸೌಧದ ಕಳೆ ತಂದಿದ್ದು ಕರ್ನಾಟಕ ಸರ್ಕಾರ ನಾಮ ಅಂಕಿತ ಕಾರುಗಳು ನೋಡುಗರ ಕಣ್ಣುಗಳಿಗೆ ಮತ್ತು ಮನಸ್ಸಿಗೆ ಹಿತ ನೀಡಿವೆ. ವಿಧಾನಸೌಧ ಕರ್ನಾಟಕ ಸರ್ಕಾರ ಎಂಬ ನಾಮ ಅಂಕಿತ ಕಾರುಗಳ ತಾಣವಾಗಿ ವಿಧಾನಸೌಧ ಕಳೆ ಗಟ್ಟಿದ್ದು ವಿಶೇಷ.