ದೇಶದ ಯಾವುದೇ ರಾಜ್ಯ ನೋಡಿಕೊಂಡು ಬನ್ನಿ ಕರ್ನಾಟಕ ರಾಜ್ಯದಲ್ಲಿರುವ ಉತ್ತಮ ಬಸ್ ವ್ಯವಸ್ಥೆ ಬೇರೆ ಎಲ್ಲಿಯೂ ಇಲ್ಲ. ಆದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 30 ಕಿ.ಮಿ ಮೇಲ್ಪಟ್ಟ ಗ್ರಾಮದ ಬಸ್ ಗಳನ್ನು ನಿಯಮಿತ ನಿಲುಗಡೆಯ ವೇಗದೂತ ಸಾರಿಗೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಆದರೆ 60-70 ಕಿ.ಮಿ ದೂರವಾದರೂ ಸಾಮಾನ್ಯ ಬಸ್ ಗಳನ್ನಾಗಿ ಓಡಿಸುತ್ತಿದ್ದಾರೆ. ಇದರಿಂದ ಸಾರಿಗೆ ಸಂಸ್ಥೆಗೆ ನಷ್ಟವಾಗುವುದಲ್ಲದೇ, ಸರ್ಕಾರಕ್ಕೆ ಹೊರೆಯಾಗಲಿದೆ. ಒಂದು ಬಸ್, ಒಂದು ಲಿಟರ್ ಡೀಸೆಲ್‌ಗೆ ಕೇವಲ 4 ಕಿ.ಮೀ ಮೈಲೇಜ್ ಕೊಡುವುದು. ಆದ್ದರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 30 ಕಿ.ಮಿ ಮೇಲ್ಪಟ್ಟ ಗ್ರಾಮದ ಬಸ್ ಗಳ ಅನುಸೂಚಿಯನ್ನು ನಿಯಮಿತ ನಿಲುಗಡೆಯ ವೇಗದೂತ ಸಾರಿಗೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಗ್ರಾ.ಪಂ, ಪ.ಪಂ, ಪುರಸಭೆ, ನಗರಸಭೆ ಮಹಾನಗರ ಪಾಲಿಕೆಯನ್ನು ಮೇಲ್ದರ್ಜೆಗೇರಿಸುವ ಸರ್ಕಾರ ಸಾರಿಗೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದೆ. 30 ಕಿ.ಮೀ ಮೇಲ್ಪಟ್ಟ ಸಾಮಾನ್ಯ ಸಾರಿಗೆಯನ್ನು ನಿಯಮಿತ ನಿಲುಗಡೆಯ ವೇಗದೂತ ಸಾರಿಗೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಜರುಗಿಸಬೇಕು. ಸಾರಿಗೆ ಸಂಸ್ಥೆ ಉಳಿಸಿ, ಬೆಳೆಸುವುದಲ್ಲದೇ ಸಾರಿಗೆ ನೌಕರರ ಸಂಬಳ ಸರಿಯಾಗಿ ಪಾವತಿಸುವ ವ್ಯವಸ್ಥೆ ಮಾಡಿ.
ಎತ್ತ ಸಾಗುತ್ತಿದೆ ಸಮಾಜ
ಹಳೆ ಕಾಲದ ಮುದುಕರ ಮಾತು ಊರು ನಮ್ಮದಲ್ಲ, ನಮ್ಮಪ್ಪದಲ್ಲ ಊರೊಂದು ಸಾರ್ವಜನಿಕ ಆಸ್ತಿ ಅಂದ್ರೆ ಸರ್ಕಾರದ ಆಸ್ತಿ. ಊರಿನ ಮೇಲೆ ಅಭಿಮಾನ ಇರಬೇಕು ವಿನಃ ಅಂಧಾಭಿಮಾನ ಇರಬಾರದು. ಒಂದು ಗಾದೆ ಮಾತು ನೆನಪು ಆಗುತ್ತದೆ. ಊರ ಚಿಂತಿ ಮಾಡಿ ಮುಲ್ಲಾ ಸೊರಗಿದನಂತೆ. ವ್ಯಕ್ತಿ ತಪ್ಪು ಮಾಡಿದಾಗ ಕಾನೂನು ರೀತ್ಯಾ ಕ್ರಮ ಅನುಸರಿಸಬೇಕು ಹೊರತಾಗಿ ಕಾನೂನು ಮೀರಿ ಹೋಗಬಾರದು. ಬಲಿಷ್ಠ ರಾಜ್ಯ ಮಟ್ಟದ ತನಿಖಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅವರಿಗೆ ಸಹಕಾರ ನೀಡುವ ಮುಖಾಂತರ ಎಲ್ಲರೂ ತಾಳ್ಮೆವಹಿಸಬೇಕು ಅಷ್ಟೇ.
Public Transport, Karnataka, Bus System, Infrastructure Development, Village Buses, Express Transport, Fuel Efficiency, Government Initiatives, Local Economy, Rural Development, Sustainable Development, Environmental Impact, Mobility, Road Safety, Employment, Socioeconomic Growth, Rural Connectivity, Government Policy, Efficiency, Modernization, Vehicle Upgradation,