ಶಾಸಕಾಂಗದ ಕರ್ತವ್ಯವೆಂದರೆ ಕಾನೂನುಗಳು, ನೀತಿಗಳು ಮತ್ತು ನಿಯಮಗಳನ್ನು ರೂಪಿಸುವುದು ಮತ್ತು ರದ್ದುಗೊಳಿಸುವುದು, ಅಂದರೆ ಕರಡು ಮಸೂದೆಯನ್ನು ಪರಿಚಯಿಸುವುದು ಅಥವಾ ಹಿಂತೆಗೆದುಕೊಳ್ಳುವುದು. ಮೇಲ್ಮನೆ ಮತ್ತು ಕೆಳಮನೆ ಎಂದು ಕರೆಯಲ್ಪಡುವ ರಾಜ್ಯಸಭೆ, ಲೋಕಸಭೆ ಅಥವಾ ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಕಾನೂನನ್ನು ಜಾರಿಗೆ ತರಬೇಕಾದರೆ, ಮೊದಲ ಕರಡನ್ನು ತಯಾರಿಸಲು ಒಂದು ಸಮಿತಿಯನ್ನು ರಚಿಸಲಾಗುತ್ತದೆ ಮತ್ತು ಕರಡನ್ನು ಸಚಿವ ಸಂಪುಟ ಸಭೆಯಲ್ಲಿ ಪರಿಶೀಲಿಸಬೇಕು ಮತ್ತು ಮೇಲ್ಮನೆ ಮತ್ತು ಕೆಳಮನೆ ಸದಸ್ಯರ ಬೆಂಬಲದೊಂದಿಗೆ ಕಾಯ್ದೆ ಜಾರಿಗೆ ತರಬೇಕು. ಶಾಸಕಾಂಗವು ತಂದ ಕಾಯ್ದೆ ಕಾನೂನನ್ನು ಕಾರ್ಯಾಂಗವು ಕಾರ್ಯಗತಗೊಳಿಸುತ್ತದೆ. ಬಿಕ್ಕಟ್ಟುಗಳು ಮತ್ತು ವಿವಾದಗಳನ್ನು ಬಗೆಹರಿಸಲು ನ್ಯಾಯವನ್ನು ಒದಗಿಸಲು ನ್ಯಾಯಾಂಗವು ಕೆಲಸ ಮಾಡುತ್ತದೆ. ಆದರೆ ಶಾಸಕಾಂಗವು ತಂದ ಕಾಯ್ದೆ ಕಾನೂನುಗಳು ಮಾನವೀಯ ಮೌಲ್ಯಗಳನ್ನು ಗೌರವಿಸುವಂತಾಗಿರಬೇಕು. ಏಕೆಂದರೆ ಒಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯ ಎಷ್ಟಿದೆ ಅಷ್ಟು ಮಾತ್ರ ಕೆಲಸ ಮಾಡಬಹುದು. ವೃದ್ಧ ವ್ಯಕ್ತಿ ಮತ್ತು ಯುವಕನಾಗಿರುವ ವ್ಯಕ್ತಿಯ ನಡುವೆ ಭಾರಿ ವ್ಯತ್ಯಾಸವಿದೆ. ಕೆಲವು ಜನರ ಆರೋಗ್ಯ ಸ್ಥಿತಿ ಚೆನ್ನಾಗಿರುವುದಿಲ್ಲ. ಅಂತಹ ಜನರಿಗೆ ಅವರು ಸಮಾನವಾಗಿ ಕೆಲಸ ಮಾಡಬೇಕು ಎಂದರೆ ಸರಿಯಲ್ಲ. 75% ಸರ್ಕಾರಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ಗೊಳಿಸಿದ್ದಾರೆ. ಅದರಲ್ಲಿ 0.1 ಕಡಿಮೆ ಇದ್ದರೂ, ವಿದ್ಯಾರ್ಥಿಗಳ ಭವಿಷ್ಯವು ಒಂದು ವರ್ಷದವರೆಗೆ ಹಾಳಾಗುತ್ತದೆ. ಇದರಿಂದಾಗಿ, ವಿದ್ಯಾರ್ಥಿಗಳ ಶಿಕ್ಷಣ ಮೊಟಕುಗೊಳ್ಳುತ್ತದೆ. ಅಲ್ಲದೆ, ಅಧ್ಯಯನ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅನಕ್ಷರತೆ ಪ್ರಮಾಣ ಹೆಚ್ಚಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದೆಲ್ಲವೂ ಮಾನವೀಯತೆ ಮೌಲ್ಯಗಳಿಗೆ ಅವಮಾನ. ಮಾನವೀಯತೆ ಮೌಲ್ಯಗಳಿಗೆ ಬೆಲೆ ಕೊಡದ ಕಾನೂನುಗಳು ಈಗಾಗಲೇ ಸಾಕಷ್ಟಿವೆ. ಕೆಲವು ಕಾಯ್ದೆಗಳು ದುರುಪಯೋಗವಾಗಿ ವ್ಯಕ್ತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಾಕಾಷ್ಟು ಶಾಸಕಾಂಗದ ಕಾಯ್ದೆಗಳಿವೆ ಜನಸಾಮಾನ್ಯರಿಗೆ ಆ ಕಾಯ್ದೆಗಳ ಬಗ್ಗೆ ಮಾಹಿತಿ ಇಲ್ಲ, ನೀತಿ ನಿಯಮಗಳು ಗೊತ್ತಿಲ್ಲ. ಇನ್ನು ಶಾಸಕರು ಮತ್ತು ಸಂಸದರು ತಮ್ಮ ಸಂಬಳ ಹೆಚ್ಚಿಸಲು ಬಯಸಿದರೆ, ಕಲಾಪಗಳಲ್ಲಿ ಗದ್ದಲ, ಗಲಾಟೆ ಇರುವುದಿಲ್ಲ. ಬೇರೊಂದು ಕಾನೂನು ಕಲಾಪಗಳಲ್ಲಿ ಜಾರಿಗೆ ತರಬೇಕು ಎಂದರೆ ಗದ್ದಲ, ಗಲಾಟೆ ಇರುತ್ತದೆ. ಇಷ್ಟೇ ವ್ಯತ್ಯಾಸ ರಾಜಕಾರಣಿಗಳು ಜಾತಿ ಮತ್ತು ಧರ್ಮದ ಬಗ್ಗೆ ಮಾತನಾಡದಂತೆ ಒಂದು ಕಾನೂನು ತನ್ನಿ ನೋಡೋಣ. ರಾಜಕಾರಣಿ ಮಾತನಾಡಿದರೆ, ರಾಜಕಾರಣಿಗಳು ನೇರವಾಗಿ 3 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು, ಆಗಲಾದರೂ ಕನಿಷ್ಠ ಪಕ್ಷ ರಾಜಕಾರಣಿಗಳು ಜಾತಿ ಮತ್ತು ಧರ್ಮದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬಹುದು ಮತ್ತು ಸಾಮಾಜಿಕ ಸುಧಾರಣೆಯನ್ನು ಕಾಣಬಹುದು. ಒಟ್ಟಾರೆಯಾಗಿ, ಕಾನೂನನ್ನು ಮಾನವೀಯತೆ ಮೌಲ್ಯಗಳ ಬೆಳಕಿನಲ್ಲಿ ಜಾರಿಗೆ ತರಬೇಕು. ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರ ಬದಲಾಗುತ್ತದೆ. ಒಂದು ಒಂದು ಸರ್ಕಾರ ಒಂದು ಒಂದು ಕಾನೂನನ್ನು ಮಾಡುತ್ತದೆ. ವಿಪರ್ಯಾಸವೆಂದರೆ ಹೆಚ್ಚಿನ ಅಧಿಕಾರಿಗಳು ಸರ್ಕಾರ ರೂಪಿಸಿದ ನೀತಿಗಳು ಮತ್ತು ನಿಯಮಗಳನ್ನು ಪಾಲಿಸುವುದಿಲ್ಲ. ಅನೇಕ ಅಧಿಕಾರಿಗಳು ಸಾರ್ವಜನಿಕ ಅರ್ಜಿಗಳನ್ನು ವಿಲೇವಾರಿ ಮಾಡದೆ ಕಸದ ಬುಟ್ಟಿಗೆ ಎಸೆದಿದ್ದಾರೆ. ಎಲ್ಲಾ ನೀತಿ ಮತ್ತು ನಿಯಮಗಳನ್ನು ತಿಳಿದಿರುವ ಅಧಿಕಾರಿಗಳು ಮತ್ತು ರಾಜಕಾರಣಿಗಳು ನಿಯಮಗಳನ್ನು ಪಾಲಿಸುವುದು ಅಪರೂಪ. ಸಾಮಾನ್ಯ ಜನರು ಕೆಲವು ನೀತಿ ಮತ್ತು ನಿಯಮಗಳನ್ನು ತಿಳಿಯದಿರುವುದಿಲ್ಲ, ದಂಡ ಪಾವತಿಸಲು ಒತ್ತಾಯಿಸಲ್ಪಡುತ್ತಾರೆ. ಆದ್ದರಿಂದ ಕಾನೂನುಗಳು ಮಾನವೀಯ ಮೌಲ್ಯಗಳನ್ನು ಆಧರಿಸಿರಬೇಕು.