ಕಳೆದ ಕರ್ನಾಟಕ ವಿಧಾನಸಭೆಯಲ್ಲಿ ಸೋತ ಮುಖಭಂಗ ಅನುಭವಿಸಿದ ಘಟಾನುಘಟಿಗಳು ಲೋಕಸಭಾ ಚುನಾವಣೆಗೆ ನಿಲ್ಲುವುದು ಖಚಿತವಾಗಿದೆ. ಈ ದೃಷ್ಟಿಯಿಂದ ಲೋಕಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತುವಂತಹ, ರಾಜ್ಯದ ತೆರಿಗೆ ಪಾಲು ಕೇಳುವಂತಹ, ಲೋಕಸಭೆಯಲ್ಲಿ ಯಾವುದೇ ವಿಷಯದಲ್ಲಿ ಚರ್ಚೆ, ಭಾಷಣ ಮಾಡುವಂತಹ ಕೆಲಸ ಮಾಡದೇ ಲೋಕಸಭೆಯಲ್ಲಿ ಖಾಲಿ ಕುಳಿತು ಎದ್ದು ಬಂದ ಸಂಸದರಿಂದ ಏನು ಪ್ರಯೋಜನವಿಲ್ಲ. ಕನ್ನಡ ಸೇರಿದಂತೆ ಭಾಷೆಯಲ್ಲಿ ಪ್ರವೀಣವಿರುವ ಹೊಸ ಹೊಸ ಮುಖಗಳ ಆಭ್ಯರ್ಥಿಗಳನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸುವುದು ಅವಶ್ಯಕವಾಗಿದೆ. ಹಾಲಿ ಶಾಸಕ, ಸಚಿವರು ಚುನಾವಣೆಯಲ್ಲಿ ಗೆದ್ದು ಒಂದು ವರ್ಷವಾಗಿಲ್ಲ ಹೀಗಿರುವಾಗ ಶಾಸಕ,
ಸಚಿವರಿಗೆ ಮತ್ತೇ ಚುನಾವಣೆಗೆ ಬೇಕೆ? ಎಂಬ ಪ್ರಶ್ನೆ ಸಾರ್ವಜನಿಕರು ಕೇಳುವಂತಾಗಿದೆ? ಲೋಕಸಭಾ ಗೆಲ್ಲಲೇಬೇಕು ಎನ್ನುವುದಾದರೆ ಸಾಮಾನ್ಯ ಕಾರ್ಯಕರ್ತನು ಗೆಲ್ಲಬಹುದು ಆದ್ದರಿಂದ ಹೊಸ ಹೊಸ ಮುಖಗಳ ಆಭ್ಯರ್ಥಿಗಳನ್ನು ಲೋಕಸಭೆ ಚುನಾವಣೆ ಕಣಕ್ಕೆ ಇಳಿಸುವ ಬಗ್ಗೆ ಪಕ್ಷದ ಸಭೆಯಲ್ಲಿ ಚರ್ಚಿಸಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಹತ್ತು ವರ್ಷ ಆಡಳಿತ ಜನರಿಗೆ ಬೇಸರವೇ?
ಕೇಂದ್ರ ಸರ್ಕಾರದ ಆಡಳಿತ ನಡೆಸುವವರು ಹತ್ತು ವರ್ಷಗಳಿಂದ ಸತತ ಕೆಲಸದ ಒತ್ತಡದಿಂದ ಬೇಸರದಲ್ಲಿ ಒಲ್ಲದ ಮನಸ್ಸಿನಿಂದ ಚುನಾವಣೆ ಎದುರಿಸುವಂತಾಗಿದೆಯಾ? ಎಂಬ ಸಂಶಯ ಜನರಲ್ಲಿ ಮೂಡಿದೆ. ಯಾರಿಗೆ ಹೊಸ ಮೊಬೈಲ್ ಫೋನ್ ಕೊಂಡಿಕೊಂಡಾಗ ಖುಷಿಯಾಗುವುದೋ ಅದು ಹಳೆದೂ ಅದಮೇಲೆ ಬೇಸರವಾಗುವ ಹಾಗೇ ಆಡಳಿತ ನಡೆಸುವವರಿಗೆ ಮತ್ತು ಜನರಿಗೂ ಬೇಸರವಾಗಿದೆಯಾ ಎಂಬ ಪ್ರಶ್ನೆ ಸಾರ್ವಜನಿಕರಿಗೆ ಮೂಡಿದೆ. ಚುನಾವಣೆ ಸಂದರ್ಭ ಎಂದರೇ ಹುಮ್ಮಸ್ಸು ಖುಷಿ ಇರಬೇಕು. ಹುಮ್ಮಸ್ ಖುಷಿ ಮಯವಾಗಿದೆ ಎಂದರೇ ಜನರ ಭಾವನೆಗಳು ಸಮಾನ ಮನಸ್ಕರ ಯೋಜನೆಯತ್ತ ವಾಲಿದೆ ಎಂದರ್ಥ. ಈ ಬಾರಿ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆ ಗ್ಯಾರಂಟಿ ಘೋಷಣೆ ಮಾಡುವ ಸಾಧ್ಯತೆ ಇರುವುದರಿಂದ ಎಲ್ಲ ಚಿತ್ತ ಕಾಂಗ್ರೆಸ್ ಗ್ಯಾರಂಟಿಯತ್ತ ಎನ್ನುವಂತಾಗಿದೆ.
Lok Sabha Elections 2019, Vote For Change, Desh Ka Mahatyohar, India Votes, Elections With Google, Mera Vote Mera Voice, Polling Day, Largest Democracy, Election Fever, Indian Politics, Battle Of The Ballots, Phir Ek Baar Modi Sarkar, Congress Ka Hath, Mahagathbandhan, Nayi Soch Nayi Ummeed, Election Mania, Jai Hind,