
ಗುದ್ನೇಶ್ವರ ಜಾತ್ರೆ
ಪ್ರಿಯ ವೀಕ್ಷಕರೇ...
ಭಕ್ತರ ಆಶೋತ್ತರವನ್ನು ಇಡೇರಿಸುವ, ಭಕ್ತರ ಆರಾಧ್ಯ ದೈವ ಎಂತಲು ಪ್ರಸಿದ್ಧ ಪಡೆದಿರುವ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗುದ್ನೇಶ್ವರಮಠದ ಶ್ರೀ ಗುದ್ನೇಶ್ವರ ಸ್ವಾಮಿಯ ದೇವಸ್ಥಾನ. ಅದಲ್ಲದೆ, ಈ ದೇವಸ್ಥಾನದ ಗುದ್ನೇಶ್ವರ ಸ್ವಾಮಿಗೆ ರುದ್ರಮುನೀಶ್ವರ ಸ್ವಾಮಿ ಎಂತಲು ಭಕ್ತರು ಕರೆಯುತ್ತಾರೆ, ಆರಾಧ್ಯಿಸುತ್ತಾರೆ. ಇಲ್ಲಿ ಕಾಣುತ್ತಿರುವುದು ಗುದ್ನೇಶ್ವರ ಸ್ವಾಮಿಯ ಗದ್ದುಗೆ ಆಗಿದೆ. ಗುದ್ನೇಶ್ವರ ಎಂದರೇ ಹಾವು ಆಗಿ ಹುತ್ತದೊಳಗೆ ನೆಲೆಸಿದ ಸ್ವಾಮಿ ಎಂದರ್ಥವಾಗಿದೆ. ಗುದ್ನೇಶ್ವರ ಸ್ವಾಮಿಯ ದೇವಸ್ಥಾನದ ಒಳಗಣ ಮತ್ತು ಹೊರಗಣವನ್ನು ಸುಂದರವಾಗಿ ನಿರ್ಮಿಸಿದ್ದಾರೆ. ದೇವಸ್ಥಾನದ ಗೋಪುರ ಸೇರಿದಂತೆ ಗುದ್ನೇಶ್ವರ ಸ್ವಾಮಿಯ ದೇವಸ್ಥಾನದ ನೋಟವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಾರೆ.
ಪ್ರತಿವರ್ಷ ಹೊಸ್ತಿಲ ಹುಣ್ಣಿಮೆ ದಿನ ನಡೆಯುವ ಜಾತ್ರೆಯಲ್ಲಿ 5 ಲಕ್ಷ ಭಕ್ತರು ಪಾಲ್ಗೊಂಡು ತಮ್ಮ ಇಷ್ಟ ಸಿದ್ಧಿಗಳನ್ನು ಪೂರೈಸುತ್ತಾರೆ. ಸಾಯಂಕಾಲ 4 ಗಂಟೆಗೆ ಗುದ್ನೇಶ್ವರ ಸ್ವಾಮಿಯ ರಥೋತ್ಸವ ಜರಗುತ್ತದೆ. ಈ ರಥವೂ ಅತಿ ಎತ್ತರವಾದ ರಥ ಎಂದು ಪ್ರಸಿದ್ಧ ಪಡೆದಿದೆ. ಲಕ್ಷಾಂತರ ಭಕ್ತರ ರಥೋತ್ಸವ ದಿನ ಕಣ್ತುಂಬಿಕೊಳ್ಳುವುದಲ್ಲದೇ, ಹೊಸದಾಗಿ ಮದುವೆಯಾದ ಜೋಡಿಗಳು ಗುದ್ನೇಶ್ವರ ಸ್ವಾಮಿಯ ರಥೋತ್ಸವ ನೋಡಬೇಕು ಎಂಬ ಲೋಕ ರೂಡಿ ಇದೆ. ಲಕ್ಷಾಂತರ ಭಕ್ತರ ಮಧ್ಯೆ 100 ಕ್ಕೂ ಅಧಿಕ ದಿವಟಿಗಳು, ನಂದಿಕೋಲ, ಪಲ್ಲಕ್ಕಿ ಸೇರಿದಂತೆ ಸಹಸ್ರ ಸಂಖ್ಯೆಯಲ್ಲಿ ಗುದ್ನೇಶ್ವರ ಸ್ವಾಮಿಯ ರಥೋತ್ಸವನ್ನೂ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ ಗೆಳೆಯರೇ...
ಗುದ್ನೇಶ್ವರರ ಇತಿಹಾಸ
ಗೌಡನ ದನ ಕಾಯುವ ಅಳ ಹುಡುಗರು, ದನ ಕಾಯಬೇಕಾದರೇ, ದನ ಕಾಯುವ ಮಕ್ಕಳ ತರುತ್ತಿದ್ದ, ರೊಟ್ಟಿ, ಅನ್ನವನ್ನು ಗುದ್ನೇಶ್ವರರು ನನಗೆ ನೀಡಬೇಕು ಎಂದು ಬೇಡಿಕೆ ಇಡುತ್ತಾರೆ. ದನ ಕಾಯುವವರಿಗೆ ಬೇಡಿದನು ನೀಡಿವೆ ಎಂದು ಗುದ್ನೇಶ್ವರರು ಹೇಳ್ತಾರೆ. ಅಮೇಲೆ ದನ ಕಾಯುವ ಮಕ್ಕಳು ಬೇಡಿಕೆಗೆ ಒಪ್ಪಿ, ಗುದ್ನೇಶ್ವರರು ದನ ಕಾಯುವ ಮಕ್ಕಳಿಗೆ ಕೇಳಿದನು ನೀಡಿದ್ದರು. ಗುದ್ನೇಶ್ವರರು ದನ ಕಾಯುವ ಮಕ್ಕಳ ಜೊತೆ ಗೆಳೆತನ ಮಾಡಿಕೊಂಡು ಗುದ್ನೇಶ್ವರರು ಆಕಳು ಹಾಲು ಕುಡಿಯಲು ಪ್ರಾರಂಭಿಸಿದರು. ಇದನ್ನು ಗಮನಿಸಿದ ಗೌಡ ಗುದ್ನೇಶ್ವರರನ್ನು, ದೂರು ನೀಡಿ ಜೈಲಿಗೆ ಹಾಕಿಸುತ್ತಾನಂತೆ, ಪೋಲಿಸರು ಗುದ್ನೇಶ್ವರರನ್ನು ಕೊಠಡಿ ಒಳಗೆ ಹಾಕಿದ್ರೂ 4-5 ಸಲ ಕೊಠಡಿಯಿಂದ ವಾಪಾಸ್ ಬಂದು ಪೋಲಿಸರ ಹಿಂದೆ ಬಂದು ನಿಲ್ಲುತ್ತಿದ್ದನಂತೆ.
ನಂತರ ಗುದ್ನೇಶ್ವರರನ್ನು ಪೋಲಿಸರು ನೀನು ದೇವ ಮಾನವ ನಿನಗೆ ಏನು ಆಗಬೇಕು ಅಂತ ಕೇಳಿದಾಗ ಗುದ್ನೇಶ್ವರರು ನನಗೆ ಉಳಿದುಕೊಳ್ಳಲು ಜಾಗವಿಲ್ಲ. ಒಂದು ಅಡಿಕೆ ಬೆಟ್ಟ ಒಡೆಯುವೂಳಗೆ ಜಾಗ ತಗೊಳ್ಳತ್ತೇನೆ ಎಂದು ಗುದ್ನೇಶ್ವರರು ಪೋಲಿಸರಿಗೆ ಹೇಳ್ತಾರೇ, ಆಯಿತು ಎಂದು ಆಗ ಪೋಲಿಸರಿಗೆ ಅಡಿಕೆ ಬೆಟ್ಟ ಓಡೆಯಲು ಸಾಧ್ಯವಾಗಲಿಲ್ಲಂತೆ ಅಷ್ಟರೊಳಗೆ ಗುದ್ನೇಶ್ವರರು 500 ಕೂರಿಗಿ ಜಮೀನಿನಲ್ಲಿ ಹುಣ್ಣಿಸಿಮರ ಬಿತ್ತನೆ ಮಾಡಿದ್ದನ್ನು ನೋಡಿ ಪೋಲಿಸರು ಗುದ್ನೇಶ್ವರರಿಗೆ ಕಾಲು ಬಿದ್ದು ಬೇಡಿಕೊಂಡರಂತೆ ಇಲ್ಲಿಗೆ ಬಿತ್ತನೆ ನಿಲ್ಲಿಸಿಬಿಡಿ ಎಂದು ಗುದ್ನೇಶ್ವರರು ಸಿಟ್ಟಿನಿಂದ ನೀವು ವಚನಭ್ರಷ್ಟರಾಗಿದ್ದೀರಿ ಎಂದು ಬಿತ್ತನೆ ನಿಲ್ಲಿಸಿ ಕುಂತಳಪುರ (ಕುಕನೂರು) ಕಾಣದಂತೆ ದೊಡ್ಡದಾದ ಬದವು ಹಾಕಿ,
ಗುದ್ನೇಶ್ವರರು ಹಾವು ಆಗಿ ಹುತ್ತದೊಳಗೆ ಹೋಗುತ್ತಾರೆ. ಬಿತ್ತನೆ ಮಾಡಿದ ಎತ್ತುಗಳು ಕಲ್ಲುಗಳು ಆಗ್ತಾವೆ. ಅಕ್ಡಿ ಹಾಕಿದ ಚೆನ್ನಮ್ಮನು ಕಲ್ಲು ಆಗಿ ದೇವಸ್ಥಾನಗಳಾಗಿ ಈ ಎಲ್ಲ ದೇವಸ್ಥಾನ ಗುದ್ನೇಶ್ವರಮಠದಲ್ಲಿ ಪ್ರಸಿದ್ಧ ಪಡೆದಿರುವ ಉಲ್ಲೇಖಗಳಿವೆ. ಈಗಲೂ ಪುರಾಣದಲ್ಲಿ ಗುದ್ನೇಶ್ವರ ಇತಿಹಾಸ ನೋಡಬಹುದು ಗೆಳೆಯರೇ..
Gudneshwar Fair Special, Gudneshwar Mela 2023, Journey To Spirituality, Maha Shivratri Celebrations, Indian Folk Culture, Gujarat Tourism, Traditional Festival, Shiv Love, Festival Of Lights, Colors Of Gujarat, Garba Ras, Fair Of Unity, Foodie Paradise, Heritage Experience, Craft Village Extraordinary,