ಕಾಂಗ್ರೆಸ್ ಗೆಲುವಿಗೆ ಗ್ಯಾರಂಟಿ ಕಾರಣವಲ್ಲ ಬಿಜೆಪಿ ಸೋಲಿಗೆ ಕಾರಣವೇನು...?

By

ಕರ್ನಾಟಕ ರಾಜ್ಯದ 16ನೇ ವಿಧಾನಸಭಾ ಚುನಾವಣೆಯ ಫಲಿತಾಂಶ ಜನರ ಮನಸ್ಸಿನಲ್ಲಿ ಹಚ್ಚು ಹಸಿರಾಗಿ ಉಳಿಯಲಿದೆ. ಏಕೆಂದರೆ ಜನರ ಮನಸ್ಸಿನಲ್ಲಿ ನಿಗೂಢವಾಗಿ ಉಳಿದುಕೊಂಡಿರುವ ಗೆಲುವು ಮತ್ತು ಸೋಲಿಗೆ ಏನು ಕಾರಣ ಇರಬಹುದೆಂಬ ಕಾಡುತ್ತಿರುವ ಪ್ರಶ್ನೆಯಾಗಿದೆ. ಸಾಕಷ್ಟು ಜನರ ಅಭಿಪ್ರಾಯ ಪ್ರಕಾರ ಗ್ಯಾರಂಟಿ ಯೋಜನೆಯಿಂದ ಕಾಂಗ್ರೆಸ್ ಗೆದ್ದಿದೆ ಅಂತ ಇನ್ನು ಕೆಲವರು ಬಿಜೆಪಿ ಆಡಳಿತ ವಿರೋಧಿ ಅಲೆ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಖುರ್ಚಿಯಿಂದ ಕೆಳಗೆ ಇಳಿಸಿದ್ದು, ಪ್ರಮುಖವಾಗಿ ಲಿಂಗಾಯತ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಟಿಕೆಟ್ ನೀಡದಿರುವ ಒಂದು ಕಾರಣ ಅಂತ. ಇತ್ತ ಕಾರಣಗಳನ್ನು ಹುಡುಕಲು ಹೋದರೆ ಒಂದು ದೊಡ್ಡದಾದ ಪಟ್ಟಿ ಸಿಗುವುದು.

ಕಾಂಗ್ರೆಸ್ ಗೆಲುವಿಗೆ ಗ್ಯಾರಂಟಿ ಕಾರಣವಲ್ಲ: ಹೌದು...! ಬಹುತೇಕ ಸಮೀಕ್ಷೆಗಳು ಚುನಾವಣೆ ನಡೆಯುವ 6-7 ತಿಂಗಳು ಮುಂಚಿತವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂಬ ಸುಳಿವು ನೀಡಿದ್ದವು ಅಲ್ಲದೇ ರಾಜ್ಯ, ಕೇಂದ್ರ ಗುಪ್ತಚರ ಇಲಾಖೆ ವರದಿಗಳು ಸಹ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಖಚಿತ ಎಂಬ ವರದಿಯನ್ನು ನೀಡಿತ್ತು. ಇದರ ಮದ್ಯ ಜನರು ಗ್ಯಾರಂಟಿ ಯೋಜನೆಗೆ ಮರಳಾಗಿ ವೋಟ್ ಹಾಕಿದ್ದಾರೆ ಎಂಬ ವಿರೋಧ ಪಕ್ಷಗಳ ವಾದ ಶುರುವಾಯಿತು. ಮೈಸೂರು-ಕೊಡಗು ಲೋಕಸಭಾ ಸಂಸದ ಪ್ರತಾಪ ಸಿಂಹ ಸಹ, ಜನ ಗ್ಯಾರಂಟಿ ನೋಡಿ ವೋಟ್ ಹಾಕಿದ್ದು, ನಿಮ್ಮನ್ನೆಲ್ಲ ನೋಡಿ ಅಲ್ಲ ಎಂದು ಕೈ ನಾಯಕರಿಗೆ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದರು.

ಆದರೆ ವಾಸ್ತವಾಂಶ ಬೇರೆ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 2-3 ಸಲ ಸಮೀಕ್ಷೆ ನಡೆಸಿ, ಗೆಲ್ಲುವ ವ್ಯಕ್ತಿಗೆ ಟಿಕೆಟ್ ನೀಡಿ ಪಕ್ಷದ ಸಂಖ್ಯೆ 135 ತರುವ ಪ್ಲಾನ್ ಸಕ್ಸೆಸ್ ಅಯಿತು. ಈ ಮದ್ಯ ಬಿಜೆಪಿಯಲ್ಲಿ ಟಫ್ ಎಂಡ್ ಪೈಟ್ ನೀಡುವ ನಾಯಕನಿಲ್ಲದ ಕಾರಣ ಕಾಂಗ್ರೆಸ್ ಗೆಲುವಿಗೆ ಪ್ಲಸ್ ಪೈಟ್ ಅಯಿತು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಗೊಂದಲ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಸೇರಿಕೊಂಡಿದ್ದು ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು. ಬಿಜೆಪಿ ಸೋಲಿಗೆ ನಾಯಕತ್ವ ಕೊರತೆ ಕಾರಣ: ಬಿಜೆಪಿ ಅಂದ್ರೆ ಯಡಿಯೂರಪ್ಪ, ಯಡಿಯೂರಪ್ಪ ಅಂದ್ರೆ ಬಿಜೆಪಿ ಎನ್ನುವ ಒಂದು ಮಾತು ಜನರ ಮನದಲ್ಲಿತ್ತು.

ಅದು ನಿಜವಾಗಿದೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಯಾವಾಗ ರಾಜೀನಾಮೆ ನೀಡಿ, 15ನೇ ವಿಧಾನಸಭೆಯಲ್ಲಿ ವಿಧಾಯದ ಭಾಷಣದ ಮೂಲಕ ರಾಜಕೀಯ ನಿವೃತ್ತಿ ಘೋಷಿಸಿದ್ರೊ ಆಗ ಜನರಿಗೆ ತಿಳಿದಿದ್ದು ಕಾಂಗ್ರೆಸ್ ಎಂಬ ಹಸ್ತದ ಚಿತ್ರ. ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕ ಜನರ ಕಣ್ಣಿಗೆ ಗೋಚರಿಸಲಿಲ್ಲ. 10-15 ಕ್ಷೇತ್ರ ಗೆಲ್ಲಿಸುವಷ್ಟು ನಾಯಕನಿಲ್ಲದಕ್ಕೆ ಸೋಲಿಗೆ ಪ್ರಮುಖ ಕಾರಣವಾಯಿತು. ಪಕ್ಷದಲ್ಲಿರುವ ಪ್ರಮುಖರು ಸ್ವತಃ ತಮ್ಮ ಕ್ಷೇತ್ರವನ್ನು ಸಲೀಸಾಗಿ ಗೆಲ್ಲಲು ಬಾರದವರು ಪಕ್ಷಕ್ಕೆ ಬಲ ನೀಡಲು ಹೇಗೆ ಸಾಧ್ಯ ಎಂಬ ಸಂಶಯ ಜನರಲ್ಲಿ ಮೂಡಿಸಿದವು. ಬಿ.ಎಲ್ ಸಂತೋಷ, ಪ್ರಲ್ಹಾದ ಜೋಶಿ ಅವರಿಗೆ ಪಕ್ಷ ಅಧಿಕಾರ ತರುವ ಜವಾಬ್ದಾರಿ ನೀಡಿದ್ದರು ಸಹ. ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಗೊಂದಲ,

ಲಿಂಗಾಯತ ವಿರೋಧಿ ಪಟ್ಟ, ಆಡಳಿತ ವಿರೋಧಿ ಅಲೆ ಸೋಲಿಗೆ ಪ್ರಮುಖ ಕಾರಣವಾಗಿ ಗೋಚರಿಸದವು. ಜನರಿಗೆ ಬೇಕು ಕಷ್ಟಕ್ಕೆ ಸ್ಪಂದಿಸುವ ಸರ್ಕಾರ: ರಾಜ್ಯದ ಮತದಾರರಲ್ಲಿ ಶೇ.20 ರಷ್ಟು ಮತದಾರರು ಸರ್ಕಾರ ಬದಲಿಸುವಂತಹ ತಾಕತ್ತು ಹೊಂದಿದ್ದಾರೆ. ಇನ್ನುಳಿದ ಶೇ. 25-30 ರಷ್ಟು ಪಕ್ಷದ ಚಿಹ್ನೆ ನೋಡಿ, ವ್ಯಕ್ತಿ ನೋಡಿ, ಜಾತಿ ನೋಡಿ ಮತ ಹಾಕುವುದುಂಟು. ಆದರೆ ಆ 20% ಮತದಾರರು ಪ್ರಬುದ್ಧ ಮತದಾರರು. ಪ್ರಜ್ಞಾವಂತ ನಾಗರಿಕರು, ಉತ್ತಮ ಆಡಳಿತ, ಜನರ ಕಷ್ಟಗಳಿಗೆ ಸ್ಪಂದಿಸುವಂತಹ ಸರ್ಕಾರ ಬರಬೇಕು ಎಂದು ಭಯಸುತ್ತಾರೆ. ಶೇ.20 ಮತದಾರರು ಸರ್ಕಾರ ಬದಲಿಸುವಷ್ಟು ತಾಕತ್ತು ಮತ್ತು ಚುನಾವಣೆ ಫಲಿತಾಂಶವನ್ನೇ ಬಿಡುಮೇಲು ಮಾಡಬಲ್ಲರು.

ಹೀಗಾಗಿ ಯಾವುದೇ ಪಕ್ಷ ಸರ್ಕಾರ ಅಧಿಕಾರಕ್ಕೆ ಬಂದರೂ ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಬಡವರು ಏಳಿಗಾಗಿ ಸರ್ಕಾರ ನಿರಂತರ ಪ್ರಯತ್ನಿಸಬೇಕು ಎಂದು ಮತದಾನ ಮಾಡಿರುತ್ತಾರೆ. ಸರ್ಕಾರ ಘೋಷಿಸಿರುವ ಪ್ರತಿಯೊಬ್ಬರಿಗೆ 10 ಕೆ.ಜಿ ಅಕ್ಕಿ, ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಪ್ರತಿ ಮನೆ ಒಡತಿಗೆ 2000 ರೂ. ಹಣ, ಪ್ರಸ್ತುತ ವರ್ಷ ಡಿಗ್ರಿ, ಡಿಪ್ಲೊಮ ಮುಗಿಸಿದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3000 & 1500 ರೂ. ಹಣ ಮತ್ತು ರಾಜ್ಯಾದ್ಯಂತ ಪ್ರಯಾಣಿಸಲು ಮಹಿಳೆಯರಿಗೆ ಉಚಿತ ಬಸ್. ಈ ಯೋಜನೆ ಬಡವರ ಪಾಲಿಗೆ ಅಮೃತ ಸಿಹಿಯಾಗಿದ್ದು ಕಾಂಗ್ರೆಸ್ ಸರ್ಕಾರ ಶೀಘ್ರವಾಗಿ ಜನರಿಗೆ ಯೋಜನೆ ಮುಟ್ಟಿಸುವಂತಾಗಬೇಕು.

ಅಕ್ಕಿ ಗೊಂದಲ: ಹಿಂದಿನ ಬಿಜೆಪಿ ಸರ್ಕಾರ 6 ಕೆ.ಜಿ ಅಕ್ಕಿ ನೀಡುತ್ತಿತ್ತು ಅದರಲ್ಲಿ 5 ಕೆ.ಜಿ ಕೇಂದ್ರ ಸರ್ಕಾರದ್ದು 1 ಕೆ.ಜಿ ರಾಜ್ಯ ಸರ್ಕಾರ ನೀಡುತ್ತಿತ್ತು, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುಂಚಿತವಾಗಿ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿ ನೀಡುವುದಾಗಿ ಗ್ಯಾರಂಟಿ ಕಾರ್ಡ್ ಮನೆಮನೆಗೆ ಹಂಚಿದರು. ಪಕ್ಷದ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ 6 ಕೆ.ಜಿಗೆ 4 ಕೆ.ಜಿ ಸೇರಿಸಿ 10 ಕೆ.ಜಿ ಕೊಡುತ್ತೇವೆ ಎಂದು ಹೇಳಿಕೆ ನೀಡಿದರು. ಆದರೆ ವಿರೋಧ ಪಕ್ಷಗಳು 10+5= 15 ಕೆ.ಜಿ ಅಕ್ಕಿ ನೀಡಬೇಕು ಎಂದು ಪಟ್ಟು ಹಿಡಿದಿದೆ. ಕೇಂದ್ರ ಸರ್ಕಾರ ಅಕ್ಕಿ ದಾಸ್ತಾನು ಇಲ್ಲ ಹೆಚ್ಚುವರಿ ಅಕ್ಕಿ ಕೊಡಲ್ಲ ಎಂಬ ಪತ್ರದ ಮೂಲಕ ತಿಳಿಸಿದೆ. ಬಡವರ ಅಕ್ಕಿ ವಿಚಾರದಲ್ಲಿ ಗೊಂದಲ ಸೃಷ್ಟಿಸಿ, ಅನ್ನಭಾಗ್ಯಕ್ಕೆ ಕನ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಅಕ್ಕಿ ವಿಚಾರ ಪಕ್ಕಕ್ಕೆ ಇಟ್ಟು ಬಡವರಿಗೆ ಶೀಘ್ರವಾಗಿ 10 ಕೆ.ಜಿ ಅಕ್ಕಿ ನೀಡುವಂತಾಗಲಿ ಎಂದು ಜನ ಆಗ್ರಹಿಸಿದ್ದಾರೆ.