ಯಾವುದೇ ಚುನಾವಣೆಯಾಗಲಿ ಆಭ್ಯರ್ಥಿ ಗೆಲುವಿನ ಹಿಂದೆ ಬೂತಮಟ್ಟದ ಕಾರ್ಯಕರ್ತರ ಪರಿಶ್ರಮವಿದೆ. ಹನಿ ಹನಿ ಸೇರಿದರೆ ಹಳ್ಳ ಎನ್ನುವಂತೆ ಮತ ಮತ ಸೇರಿದರೆ ಆಭ್ಯರ್ಥಿ ಗೆಲುವಿನ ಹಾದಿಯ ಖಚಿತ ಮಾಹಿತಿ ಲಭ್ಯವಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರ ಮನಸ್ಥಿತಿಗಳು ಬೇರೆ ಬೇರೆ ಇರುವುದರಿಂದ ಚುನಾವಣೆ ಫಲಿತಾಂಶ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುವುದ್ರಲಿ ಯಾವುದೇ ಅನುಮಾನವಿಲ್ಲ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದಕ್ಕೆ ಸೋಲಿಗೆ ಕಾರಣ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು, ಕಳೆದ ಬಾರಿ 8-10 ಲೋಕಸಭಾ ಕ್ಷೇತ್ರಗಳು ಅಲ್ಪಮತಗಳ ಅಂತರದಿಂದ ಸೋಲು ಬೇಕಾಯಿತು.
ಈ ಬಾರಿ ಕಾಂಗ್ರೆಸ್ ಸ್ವಾತಂತ್ರ್ಯವಾಗಿ ಸ್ಪರ್ಧೆ ಮಾಡುತ್ತಿರುವುದರಿಂದ ಮತ್ತು ಅತಿ ಹೆಚ್ಚು ಯುವಕರ ಸ್ಪರ್ಧೆಯಿಂದಾಗಿ ಅಲ್ಪಮತಗಳಿಂದ ಸೋತ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ. ಇನ್ನು ಬಿಜೆಪಿ ನಾಯಕರಿಗೆ ಕಳೆದ ವಿಧಾನಸಭೆಯಲ್ಲಿ ಟಿಕೆಟ್ ಹಂಚಿಕೆ, ಬಂಡಾಯ ಬಿಸಿ ಲೋಕಸಭೆಯಲ್ಲೂ ಸೃಷ್ಟಿಸಿದೆ. ಬಂಡಾಯ ಶಮನ ಮಾಡುವುದು ಬಿಜೆಪಿ ನಾಯಕರಿಗೆ ಸವಾಲಿನ ಕೆಲಸವಾದರೂ ಲೋಕಸಭಾ ಚುನಾವಣೆ ಅಷ್ಟೇನು ಪರಿಣಾಮ ಬೀರುವುದಿಲ್ಲ ಜೊತೆಗೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷದ ಬೂತಮಟ್ಟದ ಕಾರ್ಯಕರ್ತರು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತಿಲ್ಲ. ಹಳೆ ಮೈಸೂರು ಭಾಗ ಯಾವಾಗಲು ಕಾಂಗ್ರೆಸ್ ಜೆಡಿಎಸ್ ನಡುವೆ ನೇರ ಪೈಪೋಟಿ ಇರುತ್ತದೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬಿಜೆಪಿ,
ಕಾಂಗ್ರೆಸ್ ಬೂತಮಟ್ಟದ ಕಾರ್ಯಕರ್ತರು ಇರುವುದರಿಂದ ಬಿಜೆಪಿ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ. ಕರ್ನಾಟಕದ ಕೆಲವು ಲೋಕಸಭಾ ಕ್ಷೇತ್ರಗಳು ಹಾವು ಏಣಿ ಆಟ ಆಡುವುದರಲ್ಲಿ ಮುಂಚೂಣಿಯಲ್ಲಿದೆ.
ಚುನಾವಣೆ ಸಮೀಕ್ಷೆಗಳು ನಿಜವಾಗಲ್ಲ
ಸಮೀಕ್ಷೆ ನಡೆಸುವಾಗ ಆಯಾ ಲೋಕಸಭಾ ಕ್ಷೇತ್ರದ ಮತದಾರ ಹೌದೋ, ಅಲ್ಲವೋ ಮತದಾರ ಚೀಟಿ ಇದೆಯೋ, ಇಲ್ವೋ ಎಂಬ ಪ್ರಶ್ನೆ ಕೇಳಿ ಸಮೀಕ್ಷೆ ನಡೆಸಬೇಕು ಯಾವುದೋ ಮೂಲೆಯಲ್ಲಿ ಕುಳಿತು ಫೋನ್ ಮುಖಾಂತರ ಸಮೀಕ್ಷೆ ನಡೆಸುವುದು, ಇದರ ಬದಲಾಗಿ ಯಾರು ಗೆಲ್ತಾರೆ ಯಾರು ಬಿಡ್ತಾರೆ ಇತರ ಪ್ರಶ್ನೆಗಳನ್ನು ಕೇಳುವುದುಂಟು ಅದರಲ್ಲೂ ಮಹಿಳಾ ಮತದಾರ ಅಭಿಪ್ರಾಯ ಬಹಳ ಮುಖ್ಯ, ನಗರ-ಗ್ರಾಮೀಣ ಪ್ರದೇಶದ ಜನರ ಭಾವನೆಗಳು ಬೇರೆ-ಬೇರೆ ಇರುತ್ತದೆ. ಒಂದೇ ಪಕ್ಷದ ಹೆಸರು ಹೇಳಿಕೆ ಮಾತ್ರ ವಿಡಿಯೋ ಎಡಿಟ್ ಮಾಡಿ ಉಳಿದಿದ್ದು ಪಕ್ಷದ ಹೇಳಿಕೆ ಕಟ್ ಡಿಲಿಟ್ ಮಾಡಿ ತೋರಿಸಿದ್ರೆ ಇತರ ಸಮೀಕ್ಷೆಗಳು ಪಕ್ಷಗಳಿಗೆ ಹುಮ್ಮಸ್ ನೀಡಬಹುದು ಹೊರತು ಮತದಾರ ಮನಸ್ಸನು ಬದಲಾಯಿಸಲು ಸಾಧ್ಯವಿಲ್ಲ
ಇದರಿಂದ ಸಮೀಕ್ಷೆಗಳು ಪಕ್ಷದ ಅಂದಾಜು, ಪಕ್ಷಗಳಿಗೆ ತೃಪ್ತಿ ನೀಡಬಹುದು ಅಷ್ಟೇ ಯಾವುದೇ ಪ್ರಯೋಜನವಿಲ್ಲ. ಒಂದೊಂದೂ ಲೋಕಸಭಾ ಕ್ಷೇತ್ರದಲ್ಲಿ 17-18 ಲಕ್ಷ ಮತದಾರರನ್ನು ಹೊಂದಿದೆ ಒಂದೇರಡು ಜನರ ಅಭಿಪ್ರಾಯ ಪಕ್ಷದ ಗೆಲ್ಲುವಿಗೆ ಕಾರಣವಾಗುದಿಲ್ಲ. ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಮೀಕ್ಷೆಗಳು ಬಿಜೆಪಿಯೇ ಅಧಿಕಾರಕ್ಕೆ ಬರುತ್ತೆ ಅಂತ ಹೇಳಿ ಸಮೀಕ್ಷೆಗಳು ಬಕ್ರಾ ಆಗಿ ಹೋಗಿದ್ದವು ಆಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು ಸಮೀಕ್ಷೆಗಳು ಕೇವಲ ಅಂದಾಜು ಮಾತ್ರ ನೀಡಬಲ್ಲದು ಇದು ನಿಜವಾಗುದಿಲ್ಲ. ಸ್ಪಷ್ಟ ಫಲಿತಾಂಶ ಜೂನ್ 4ಕ್ಕೆ ಬರಲಿದೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯುವುದು ಒಳ್ಳೆಯದು.
ಅಂತರ್ಜಲ ಹೆಚ್ಚಿಸಲು ಪ್ರತಿ ಅರ್ಧ ಕಿ.ಮೀಗೊಂದು ಚೆಕ್ ಡ್ಯಾಂ ಅವಶ್ಯಕ
ರಾಜ್ಯದ ಹಳ್ಳಗಳಿಗೆ ಪ್ರತಿ ಅರ್ಧ ಕಿ.ಮೀಗೆ ಒಂದು ಚೆಕ್ ಡ್ಯಾಂ ನಿರ್ಮಿಸುವ ಅಂತರ್ಜಲ ಯೋಜನೆ ಸರ್ಕಾರದ ಮಟ್ಟದಲ್ಲಿ ಇದ್ದರು ಅದು ಸರಿಯಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಬೇಸಿಗೆ ಕಾಲವಾಗಿರುವುದರಿಂದ ಬಹುತೇಕ ನಗರ-ಗ್ರಾಮೀಣ ಪ್ರದೇಶಗಳು ಕುಡಿಯುವ ನೀರಿನ ಅಭಾವ ಎದುರಿಸುತ್ತಿವೆ. 2-3 ತಿಂಗಳಲ್ಲಿ ಮಳೆಗಾಲ ಆರಂಭವಾಗುವುದರಿಂದ ನೀರಿನ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಆದರೂ ಮಳೆಗಾಲದಲ್ಲಿ ಡ್ಯಾಂಗಳು ನೀರು ತುಂಬಿ ಹರಿದ್ರು ಅರ್ಧದಷ್ಟು ನೀರು ಸಮುದ್ರ ಪಾಲು ಸೇರುತ್ತಿದೆ. ಆದ್ದರಿಂದ ಸಮುದ್ರ ಸೇರುವ ನೀರನ್ನು ಉಳಿಸಲು ಮತ್ತು ಅಂತರ್ಜಲ ಹೆಚ್ಚಿಸಲು ಹಾಗೂ ಕುಡಿಯುವ ನೀರಿನ ಅಭಾವ ತಗ್ಗಿಸಲು ರಾಜ್ಯದ ಪ್ರತಿ ಹಳ್ಳಗಳಿಗೆ ಪ್ರತಿ ಅರ್ಧ ಕಿ.ಮೀಗೆ ಒಂದರಂತೆ
ಚೆಕ್ ಡ್ಯಾಂ ನಿರ್ಮಾಣ ಮಾಡುವ ಕಾರ್ಯ ಯೋಜನೆಯನ್ನು ಸರ್ಕಾರ ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ತಂದು ಸಾರ್ವಜನಿಕರಿಗೆ ಕುಡಿಯುವ ನೀರು ಸಮಸ್ಯೆಯಾಗದಿರುವ ರೀತಿಯಲ್ಲಿ ಕ್ರಮವಹಿಸಬೇಕಿದೆ.
Grassroots Efforts, Election Polls Misleading, Groundwater Conservation, Check Dams, Water Security, Rural Development, Community Action, Sustainable Solutions, Environment alImpact, Water Crisis, Climate Change, Agriculture, Drought Mitigation, Infrastructure Investment, Local Governance, Data Transparency, Policy Reform, SDG6, Eco Conscious Voting,