20 Feb 2025

ಕೃಷಿ ಮತ್ತು ಸಹಕಾರ ವರ್ಗದ ಮೇಲೆ ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರದ ಪ್ರಭಾವದ ಒಂದು ಅಧ್ಯಯನ (Part-05)

By
Click to Learn More 1.4 ಆಕಾಶವಾಣಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಪ್ರಕಾರಗಳು, ಸಾಧನೆಗಳು

2005 ರಿಂದ ಈಚೆಗೆ ಎಫ್.ಎಮ್. ವಾಹಿನಿಗಳು ಹೆಚ್ಚಿದ ನಂತರ ಬಾನುಲಿ ಕಾರ್ಯಕ್ರಮಗಳೆಂದರೆ ನೇರ ಪ್ರಸಾರಗಳು, ಚಾಟ್ ಶೋಗಳು, ಟಾಕ್ ಶೋಗಳು, ಫೋನ್-ಇನ್, ಫೋನ್-ಔಟ್‌ಗಳು ಎಂಬ ಅಭಿಪ್ರಾಯ ಜನಸಾಮಾನ್ಯರೂ ಸೇರಿದಂತೆ ಮಾಧ್ಯಮ ವಿದ್ಯಾರ್ಥಿಗಳದೂ ಸಹ ಆಗಿದೆ. ಆಕಾಶವಾಣಿ ಕಳೆದ ಎಂಟು ದಶಕಗಳಿಂದ ಪ್ರಸಾರ ಮಾಡುತ್ತಿರುವ ವಿವಿಧ ಬಗೆಯ, ವಿವಿಧ ಕೇಳುಗ ವರ್ಗವನ್ನು ಹೊಂದಿರುವ ಕಾರ್ಯಕ್ರಮಗಳ ಬಗ್ಗೆ ಇಂದಿನ ಪೀಳಿಗೆಯವರಿಗೆ ಮಾಹಿತಿಯಿರುವುದು ಕಡಿಮೆ, ರೇಡಿಯೋ ಎಂದರೆ ಎಫ್.ಎಮ್, ಎಂಬ ಕಾಲುಭಾಗ ಸತ್ಯವನ್ನೇ ಈ ತಲೆಮಾರಿನ ಮಾಧ್ಯಮ ವಿದ್ಯಾರ್ಥಿಗಳು ನಂಬಿದ್ದಾರೆ ಎಂಬುದು ಅನೇಕ ಮಾಧ್ಯಮ ಅಧ್ಯಾಪಕರ ಅಳಲು.

ಆಕಾಶವಾಣಿಯ ದಿನವಹಿ ಕಾರ್ಯಕ್ರಮಗಳಲ್ಲಿ ಅನೇಕ ಬಗೆಯ ಕಾರ್ಯಕ್ರಮಗಳಿವೆ. ಅವುಗಳನ್ನು ಸ್ಕೂಲವಾಗಿ ಸಂಗೀತ (ಮ್ಯೂಸಿಕ್) ಹಾಗೂ ಮಾತು (ಸ್ಪೋಕನ್ ವರ್ಡ್ಸ್) ಎಂದು ವಿಂಗಡಿಸಲಾಗಿದೆ.

ಸಂಗೀತ ವಿಭಾಗ

ಸಂಗೀತ ಬಹಳ ವಿಶಾಲವಾದ ವಿಭಾಗವಾಗಿದ್ದು ಆಕಾಶವಾಣಿಯಲ್ಲಿ ಪ್ರಸಾರಗೊಳ್ಳುವ ನಲವತ್ತು ಪ್ರತಿಶತ ಭಾಗ ಸಂಗೀತ ಕಾರ್ಯಕ್ರಮಗಳಿಂದ ಕೂಡಿದೆ. ಇದರಲ್ಲಿ ಶಾಸ್ತ್ರೀಯ (ಕರ್ನಾಟಕ ಹಾಗೂ ಹಿಂದೂಸ್ತಾನಿ), ಲಘು ಸಂಗೀತದ (ಭಾವಗೀತೆ, ದೇವರನಾಮ, ವಚನಗಳು, ಜನಪದ ಸಂಗೀತ, ಯಕ್ಷಗಾನ) ಎಲ್ಲ ಪ್ರಕಾರಗಳನ್ನೂ ಪ್ರಸಾರ ಮಾಡಲಾಗುವುದು. ಈ ಎಲ್ಲ ವಿಭಾಗಗಳ ಹುಗಾರಿಕೆ ಹಾಗೂ ವಾದ್ಯ ವಾದನಗಳೂ ಇದರಲ್ಲಿ ಸೇರಿವೆ. ಕಾರ್ಯಕ್ರಮಗಳನ್ನು ನೀಡುವ ಮೊದಲು ಆಕಾಶವಾಣಿ ಈ ಕಟ್ಟೆಯ ಮೂಲಕ ಸಂಗೀತಗಾರರ ಆಯ್ಕೆ ಮಾಡುತ್ತದೆ. ಇದಕ್ಕಾಗಿ ಕೇಂದ್ರಗಳಲ್ಲಿ ಅರ್ಜಿಗ ಸಂಖ್ಯೆಯ ಮೇರೆಗೆ ಕಾಲಕಾಲಕ್ಕೆ ಧ್ವನಿಪರೀಕ್ಷೆಯನ್ನು ಆಯೋಜಿಸಲಾಗುತ್ತದೆ ಅಕಾಶವಾಗಿಯಲ್ಲಿ ಮೊದಲು ಸಂಗೀತಕ್ಕೆ ಧ್ವನಿಪರೀಕ್ಷೆ ಇರಲಿಲ್ಲ,

ನಮ್ಮ ದ್ವಾಪರೀ ಪದ್ಧತಿ ಜಾರಿಗೆ ಬರುವ ಮೊದಲು ನಿಲಯದ ಸಂಗೀತದಲ್ಲಿ ಅಧಿಕಾರಗಳಿ ತಮಗೆ ಸೂಕ್ತವೆನಿಸಿದ ಕಲಾವಿದರಿಗೆ ಪ್ರಸಾರದ ಅವಕಾಶ ಕಲ್ಪಿಸಿಕೊಡುತ್ತಿದ್ದರು, ಆಗ ಕೆಲ ಕೇಂದ್ರಗಳಿAದ ವ್ಯವಸ್ಥಿತವಾದ ಪರೀಕ್ಷಾ ಪ್ರಕ್ರಿಯೆಗಾಗಿ ಒತ್ತಡ ಬಂದಿತು. ಅದರ ಫಲವಾಗಿ 1950ರ ಆರಂಭದಲ್ಲಿ ಎಲ್ಲ ನಿಲಯಗಳಿಗೂ ಅನ್ವಯವಾಗುವ 'ದನಿಪರೀಕ್ಷಾ ಪದ್ಧತಿ' ಆರಂಭವಾಯಿತು. ಇದಕ್ಕಾಗಿ ಕೇಂದ್ರ ನಿಪರೀಕ್ಷಾ ಬೋರ ಒಂದನ್ನು ರಚಿಸಲಾಗಿದೆ. ಅದರಲ್ಲಿ ಸಂಗೀತದ ಎಲ್ಲ ಪ್ರಕಾರಗಳನ್ನು ಪ್ರತಿನಿಧಿಸುವ ತಜ್ಞರು ಇರುತ್ತಾರೆ. ಇದರಲ್ಲಿ ಮುಖ್ಯವಾಗಿ ಹಿಂದೂಸ್ತಾನಿ ಹಾಗೂ ಕರ್ನಾಟಕ ವಿಭಾಗಗಳಿವೆ. ಧ್ವನಿಪರೀಕ್ಷೆಗೆ ಅರ್ಜಿ ಹಾಕಿಕೊಂಡವರು ಮೊದಲು ಸ್ಥಳೀಯ ಪ್ಯಾನೆಲ್ಲಿನ ಮುಂದೆ ಪ್ರದರ್ಶನ ನೀಡಬೇಕು.

ಇಲ್ಲಿ ತೇರ್ಗಡೆಯಾದವರ ಧ್ವನಿಮುದ್ರಿಕೆಗಳನ್ನು ಅಡಿಷನ್ ಬೋರ್ಡಿನ ಪರೀಕ್ಷೆಗಾಗಿ ಕಳುಹಿಸಲಾಗುತ್ತದೆ. ಎಲ್ಲ ಹಂತದಲ್ಲೂ ಅಭ್ಯರ್ಥಿಗಳ ಹೆಸರುಗಳನ್ನು ಗೌಪ್ಯವಾಗಿರಿಸಿ ಕೇವಲ ಕ್ರಮಸಂಖ್ಯೆಗಳಿAದ ಮಾತ್ರ ಧ್ವನಿಮುದ್ರಣಗಳನ್ನು ಕೇಳಿಸುವ ಪದ್ಧತಿ ಜಾರಿಯಲ್ಲಿದೆ. ಧ್ವನಿಪರೀಕ್ಷೆಗಳಲ್ಲಿ ತೇರ್ಗಡೆಯಾದವರು ಆಕಾಶವಾಣಿ 'ಬಿ' ಶ್ರೇಣಿಯ ಕಲಾವಿದರಾಗುತ್ತಾರೆ. (ಅಪರೂಪವಾಗಿ ಉತ್ತಮ ಪ್ರತಿಭೆಗೆ ಆರಂಭದಲ್ಲೇ ಬಿ ಜೈ ಶ್ರೇಣಿಯೂ ಸಿಗುತ್ತದೆ.) ಅವರಿಗೆ ಆಕಾಶವಾಣಿಯಲ್ಲಿ ಹಾಡುವ ನುಡಿಸುವ ಅವಕಾಶ ದೊರೆಯುತ್ತದೆ. ಅನಂತರದ ಐದು ವರ್ಷಗಳ ಅವಧಿಯಲ್ಲಿ ಅವರು ತಮ್ಮ ಉತ್ತಮ ಸಾಧನೆಯಿಂದ ಶ್ರೇಣಿಯಲ್ಲಿ ' ' ಗೆ ತೇರ್ಗಡ ಹೊಂದಬೇಕಾಗುತ್ತದೆ.

ಇದಕ್ಕಾಗಿ ಮತ್ತೊಮ್ಮೆ ಅವರು ಧ್ವನಿಪರೀಕ್ಷೆಗೆ ಒಳಪಡಬೇಕು. ಇದರ ಫಲಿತಾಂಶ ಧ್ವನಿಪರೀಕ್ಷಾ ಮಂಡಲಿಯು ನೀಡಿದ ತೀರ್ಪಿನನ್ವಯ ದೊರೆಯುತ್ತದೆ. ಅದರಂತೆ 'ಎ' ಶ್ರೇಣಿಗೂ ಪರೀಕ್ಷೆ ನಡೆಯುತ್ತದೆ. 'ಎ ಟಾಪ್' ಶ್ರೇಣಿ ಕಲಾವಿದರ ಪ್ರತಿಭೆಗೆ ಅನುಗುಣವಾಗಿ ನೀಡಲ್ಪಡುತ್ತದೆ. ಇದೇ ಅತ್ಯುಚ್ಛ ಶ್ರೇಣಿ, ಆಕಾಶವಾಣಿ ನೀಡುವ ಈ ಶ್ರೇಣಿ ಸಂಗೀತ ಕ್ಷೇತ್ರದಲ್ಲಿ ಬಹಳ ಮಹತ್ವದ್ದು ಹಾಗೂ ಸಂಗೀತಗಾರರ ವೈಯುಕ್ತಿಕ ಸಾಧನೆಯ ಆಳತೆಗೋಲು ಎಂದು 1952 ರಲ್ಲಿ ಪ್ರಾರಂಭವಾದ ಆಕಾಶವಾಣಿ ವಾದ್ಯವೃಂದ, ಸಂಸ್ಥೆಯ ವಿಶಿಷ್ಟ ಪ್ರಯೋಗ, ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ಪದ್ಧತಿಗಳೆರಡರ ವಾದ್ಯ ಪ್ರವೀಣರನ್ನು ಜೊತೆಗೂಡಿಸಿ ಹೊಸ ಹೊಸ ರಚನೆಗಳನ್ನು ರಚಿಸಿ ನಿರ್ದೇಶಿಸಿದವರಲ್ಲಿ ಪಂಡಿತ ರವಿಶಂಕರ್, ಟಿ.ಕೆ.ಜಯರಾಂ ಐಯರ್, ಘೋಷ್, ಈಮನಿಶಂಕರ ಶಾಸ್ತ್ರಿ ಇವರುಗಳು ಉಲ್ಲೇಖಾರ್ಹರು.

ಈ ಮನಿಂದ ಇನ್ನೊಂದು ಘಟಕವನ್ನು ಕರ್ನಾಟಕ ಶಾಸ್ತ್ರೀಯ ಂಏಏA) ನಲ್ಲಿ 1975 ರಲ್ಲಿ ತೆರೆಯಲಾಯಿತು. (ಬಿ, ಕುಪ್ಪುಸ್ವಾಮಿ, ಕೇರ್ ಅಂಡ್ ಸೋಶಿಯಲ್ ಡೆವಲಪ್‌ಮೆಂಟ್ ಇನ್ ಇಂಡಿಯಾ, 1984, ವಾಳ ಆನೇಕ ಕೇಂದ್ರಗಳಿAದ ಪ್ರಸಾರವಾಗುವ ಸಂಗೀತ ಶಿಕ್ಷಣ ಆನೇಕ ವಿದ್ಯಾರ್ಥಿಗಳಿಗೆ ಶ್ರೇಷ್ಠ ಮಟ್ಟದ ಸಂಗೀತ ಕಲಿಕೆಗೆ ಸಹಾಯವಾಗಿದೆ. ಕ್ಷೇತ್ರಕ್ಕೆ ಆಕಾಶವಾಣಿ ಮಹತ್ವದ ಕೊಡುಗೆ ನೀಡಿದೆ. ಹಿಂದಿನ ಗೂ ಇಂದಿನ ಎಲ್ಲ ಹಿರಿಕಿರಿಯ ಸಂಗೀತಗಾರರೂ ಆಕಾಶವಾಣಿಯ ಮೂಲಕವೇ ಪ್ರಸಿದ್ಧಿಗೆ ಬಂದವರು, ಆಕಾಶವಾಣಿಯ ಮೂಲಕ ಅವರು ನಾಡಿನಲ್ಲಿ ಮನೆಮಾತಾದವರು. ಇಂದು ಸಂಗೀತ ಈ ರಾಷ್ಟ್ರದಲ್ಲಿ ಸಂಸ್ಕೃತಿ-ಪರAಪರೆಯ ಹೆಮ್ಮೆಯ ಪ್ರತೀಕವಾಗಿ ಉಳಿದಿದ್ದರೆ ಅದರಲ್ಲಿ ಆಕಾಶವಾಣಿಯ ಕೊಡುಗೆ ಅಪಾರ ಎಂಬುದು ಸತ್ಯ.

ಜೊತೆಗೆ ನೇಪಥ್ಯಕ್ಕೆ ಸರಿದ ಅಥವಾ ಅಸ್ತಂಗತರಾದ ಅನೇಕ ಹಿರಿಯ ಸಂಗೀತಗಾರರ ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಿ ಅವುಗಳನ್ನು ಹೊಸಪೀಳಿಗೆಯ ಶೋತೃಗಳಿಗೆ, ಸಂಗೀತ ರಸಿಕರಿಗೆ ಪರಿಚಯಿಸುವ ಸ್ತುತ್ಯರ್ಹ ಕಾರ್ಯ ಆಕಾಶವಾಣಿಯದು. ನಮ್ಮ ನಾಡಿನ ಹಳ್ಳಿಗಳಲ್ಲಿ ಹಾಸುಹೊಕ್ಕಾಗಿರುವ ವಿವಿಧ ಜನಪದ ಸಂಗೀತ ಪ್ರಕಾರಗಳು ಆಕಾಶವಾಣಿಯಲ್ಲಿ ಪ್ರಸಾರಗೊಳ್ಳಲು ಮೊದಲ್ಗೊಂಡು ನಾಡಿನ ಮೂಲೆ ಮೂಲೆಗಳ ಹಳ್ಳಿಗಳಲ್ಲಿರುವ ಪ್ರತಿಭೆಗಳಿಗೂ ಅವಕಾಶ ದೊರೆಯುವಂತಾಯಿತು. ಜಾಗತೀಕರಣ ಹಾಗೂ ನಗರೀಕರಣದ ದಾಳಿಯಿಂದ ಅತಂತ್ರ ಸ್ಥಿತಿಯನ್ನು ತಲುಪಿರುವ ಜನಪದ ಸಂಗೀತವನ್ನು ಈಗಲೂ ಪೋಷಿಸುತ್ತಿರುವ ಏಕೈಕ ಸಂಸ್ಥೆ ಆಕಾಶವಾಣಿ,

ಯಾವುದೇ ಆರ್ಥಿಕ ಲಾಭವನ್ನು ತರದ ಇಂತಹ ಕಾರ್ಯಕ್ರಮಗಳು ಇಂದಿನ ಇತರ ಮಾಧ್ಯಮಗಳಿಗೆ ಬೇಡವಾಗಿದ್ದರೂ ಆಕಾಶವಾಣಿ ಸ್ವಯಂಪ್ರೇರಿತವಾಗಿ ಈ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಪ್ರತಿ ಶನಿವಾರ ಹಾಗೂ ಭಾನುವಾರಗಳಂದು ರಾಷ್ಟ್ರವ್ಯಾಪಿ ಪ್ರಸಾರದಲ್ಲಿ ಅಖಿಲ ಭಾರತೀಯ ಸಂಗೀತ ಸಭಾ ನಡೆಯುತ್ತದೆ. 1952 ಜುಲೈನಲ್ಲಿ ಪ್ರಾರಂಭವಾದ ಈ ಪ್ರಸಾರ ಇಂದಿಗೂ ಪ್ರತಿ ಶನಿವಾರ ರಾತ್ರಿ 9.30 ರಿಂದ ರಾತ್ರಿ 11 ರವರೆಗೆ ಹಾಗೂ ಭಾನುವಾರ ರಾತ್ರಿ 10 ರಿಂದ 11 ರವರೆಗೆ ನಡೆಯುತ್ತಿದೆ. ಇದರಲ್ಲೂ ಸಂಗೀತಗಾರರಿಗೆ ವಿಫುಲವಾದ ಅವಕಾಶವಿದೆ. ಇಲ್ಲಿ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ದೊರೆತವರು ನಾಡಿನ ಶ್ರೇಷ್ಠ ಮಟ್ಟದ ಸಂಗೀತಗಾರರೇ ಆಗಿರುತ್ತಾರೆ ಎನ್ನುವಷ್ಟರ ಮಟ್ಟಿಗೆ ಈ ಕಾರ್ಯಕ್ರಮದ ಖ್ಯಾತಿ ಇದೆ.

ಅಂದಿನಿಂದ ಇಂದಿನವರೆಗೂ ಸಂಗೀತ ವಿಭಾಗದಲ್ಲಿ ತನ್ನ ಹಿರಿಮೆ ಗರಿಮೆಗಳನ್ನು, ಪಾರದರ್ಶಕತೆಯನ್ನು ಆಕಾಶವಾಣಿ ಏಕರೂಪವಾಗಿ ಉಳಿ ಮಾತ್ರವಲ್ಲದೇ ದೇಶದ ಬೇರೆ ಬೇರೆ ಭಾಗಗಳಲ್ಲಿ ಪ್ರತಿವರ್ಷ ಅಂಓ ಓ ಸಮ್ಮೇಳನಗಳನ್ನು ಆಯೋಜಿಸಿ ಸಂಗೀತ: ರಕರಿಗೆ ರಸದ ನೀಡುತ್ತಿರುವುದರೊಂದಿಗೆ ಹಿರಿಯ ಸಂಗೀತ ದಿಗ್ಗಜರನ್ನು ದೇಶದ ಮೂಲೆಗೆ ಪರಿಚಯಿಸುವ ಕೆಲಸವನ್ನೂ ಮಾಡುತ್ತಿದೆ. ಇಂತಹ ಅವಕಾಶಗಳನ್ನು ಕಂಡು ಹೆಚ್ಚು ಹೆಚ್ಚು ಯುವಜನತೆ ಈ ಕ್ಷೇತ್ರ ಆಧುನಿಕತೆಯ ದಾಳಿಗೆಲ್ಲಿ ನಮ್ಮ ಯುವಮನಸ್ಸುಗಳು ಕೊಚ್ಚಿ ಹೋಗು 'ಎಂಬ ಭಯಕ್ಕೂ ಪರೋಕ್ಷವಾಗಿ ಆಕಾಶವಾಣಿ ಇತಿಶ್ರೀ ಹಾರುತ್ತಿದೆ. 1974 ರಲ್ಲಿ ಲಘು ಶಾಸ್ತ್ರೀಯ ಸಂಗೀತದ ರಾಷ್ಟ್ರೀಯ ಪ್ರ ಪಾರಂಭವಾಯಿತು.

ಮಂಗಳವಾರಗಳಂದು ದೆಹಲಿ ಕೇಂದ್ರದಿಂದ ಪ್ರಕರಣಗಳ ಈ ಕಾರ್ಯಕ್ರಮವನ್ನು ಉತ್ತರ ಭಾರತದ ಎಲ್ಲ ಕೇಂದ್ರಗಳ ಪ್ರಕಾರ ಮುಂ ಶುಕ್ರವಾರಗಳಂದು ಮದ್ರಾಸಿನಿಂದ ಪ್ರಸಾರವಾಗುವ ಕಾರ್ಯಕ್ರಮವನ್ನು ದ ಭಾರತದ ಎಲ್ಲ ಕೇಂದ್ರಗಳೂ ಸಹಪ್ರಸಾರ ಮಾಡುತ್ತವೆ, ಈ ಕಾರ್ಯಕ್ರಗಳ ಸಹ ಯುವಪ್ರತಿಭೆಗಳ ಶೋಧ ಹಾಗೂ ಪ್ರೋತ್ಸಾಹದ ಕಾರಣದಿಂದಲೇ ಶುರುವಾದದ್ದು. ರಾಷ್ಟ್ರೀಯ ಪ್ರಾದೇಶಿಕ ಸಂಗೀತದ ಪ್ರಸಾರ 1973 ಜನವರಿಯಲ್ಲಿ ಆರಂಭವಾಯಿತು, ಇದರಲ್ಲಿ ದೇಶದ ಬೇರೆ ಬೇರೆ ಭಾಗಗಳ ಜನಪದ ಹಾಗೂ ಲಘು ಸಂಗೀತ ಪ್ರಸಾರವಾಗುವುದು, ಇದು ತಿಂಗಳ ಮೊದಲ ಗುರುವಾರ ರಾತ್ರಿ 9.30ರಿಂದ 10.30ರವರೆಗೆ ಪ್ರಸಾರವಾಗುವುದು.

ಇದಲ್ಲದೇ ಸಮೂಹ ಗಾಯನವನ್ನು ನಿರ್ಮಾಣ ಮಾಡಲು 13 ಕೇಂದ್ರಗಳಲ್ಲಿ ಸಮೂಹಗಳನ್ನು ನೇಮಿಸಿಕೊಳ್ಳಲಾಯಿತು. ಈ ಗೀತೆಗಳು ರಾಷ್ಟ್ರೀಯ ಭಾವೈಕ್ಯತೆ, ದೇಶಭಕ್ತಿಯನ್ನು ಬೆಳೆಸುವಂತಿದ್ದವು. 1952 ರಲ್ಲಿ ಶ್ರೀ ಬಿ.ವಿ.ಕೇಸ್ಕರ್ ಅವರು ಮಾಹಿತಿ ಹಾಗೂ ಪ್ರಸಾರದ ಮಂತ್ರಿಗಳಾದಾಗ ಶಾಸ್ತ್ರೀಯ ಸಂಗೀತವನ್ನು ಜನಪ್ರಿಯಗೊಳಿಸಲು ಒಲವು ತೋರಿದರು. ಆಗ ಅಸ್ತಿತ್ವದಲ್ಲಿದ್ದ ಎಲ್ಲ ಆಕಾಶವಾಣಿ ಕೇಂದ್ರಗಳ ನಿರ್ದೇಶಕರಿಂದ ಸಂಗೀತ ಕಾರ್ಯಕ್ರಮಗಳ ಪ್ರಸಾರದ ವಿವರವನ್ನು ತರಿಸಿಕೊಂಡು ಅದನ್ನು ಪರಾಮರ್ಶಿಸಿ ಸಂಗೀತದ ಪ್ರಸಾರ ಅವಧಿಯನ್ನು ವಿಸ್ತರಿಸಿದರು. ಇದರಿಂದ ಉತ್ತಮ: ಸಂಗೀತಗಾರರು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿರದ ಕೇಂದ್ರಗಳಲ್ಲಿ ಗ್ರಾಮಾಫೋನ್ ರಿಕಾರ್ಡ (ಧ್ವನಿಮುದ್ರಿತ ತಟ್ಟೆಗಳು)ಗಳನ್ನು ಉಪಯೋಗಿಸಿ ಸಂಗೀತ ಪ್ರಸಾರವನ್ನು

ಮಾಡಲಾಗುತ್ತಿತ್ತು, ಉತ್ತರ ಭಾರತದಲ್ಲಿ ಹಿಂದೂಸ್ತಾನಿ ಹಾಗೂ ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ ಮಾತ್ರ ಪ್ರಸಾರವಾಗುತ್ತಿದ್ದುದನ್ನು ಬದಲಿಸಿ ಉತ್ತರದಲ್ಲಿ ಕರ್ನಾಟಕಿ ಹಾಗೂ ದಕ್ಷಿಣದಲ್ಲಿ ಹಿಂದೂಸ್ತಾನಿ ಸಂಗೀತವನ್ನು ನಗರ ಮಾಡಲು ಸೂಚಿಸಲಾಯ್ತು. ಆ ಆಲೋಚನೆಯ ಪರಿಣಾಮದಿಂದಲೇ ಬಳದ ರಾಷ್ಟ್ರೀಯ ಕಾರ್ಯಕ್ರಮಗಳು ಅಸ್ತಿತ್ವಕ್ಕೆ ಬಂದದ್ದು. ಈಗ ಚಿತ್ರ ಸಂಗೀತ ಅಶ್ಲೀಲ ಹಾಗೂ ಕನಿಷ್ಟ ಎಂದು ಪರಿಗಣಿತವಾಗಿತ್ತು. ಜರಿಂದ ಚಿತ್ರ ಸಂಗೀತದ ಪ್ರಸಾರ ಅವಧಿ ಬಹಳ ಕಡಿಮೆಯಿತ್ತು. ಇದರಿಂದ ಕಾರು ರೇಡಿಯೊ ಸಿಲೋನ್ ಹಾಗೂ ರೇಡಿಯೋ ಪಾಕಿಸ್ತಾನ ಮುಂತಾದ ಚಿತ್ರಗೀತೆ ಪ್ರಸಾರ ಮಾಡುವ ಕೇಂದ್ರಗಳನ್ನು ಕೇಳಲು ಪ್ರಾರಂಭಿಸಿದರು.

ಇವರಿಂದ ಕೇಳುಗರನ್ನು ಮನಃ ಪಡೆಯಲು ಶಾಸ್ತ್ರೀಯ ಸಂಗೀತಗಾರರಿಗೆ ಲಘು ಸಂಗೀತವನ್ನು ಆಳವಡಿಸಲು ಕೇಳಲಾಯ್ತು, ಲಘು ಸಂಗೀತವನ್ನು ಹೊಂದುವ ಏತೆಗಳನ್ನು ಬರೆಯಲು ಬರಹಗಾರರನ್ನು ಕೇಳಲಾಯ್ತು. ಇದಕ್ಕಾಗಿ ಕಲಾವಿದರನ್ನು ನಿಯೋಜಿಸಿಕೊಳ್ಳಲಾಯಿತು. ಪ್ರತಿ ಘಟಕವೂ ಎರಡು ಹೊಸ ಹಾಡುಗಳನ್ನು ಒಂದು ವಾರದಲ್ಲಿ ಸಂಯೋಜಿಸಬೇಕಿತ್ತು. ಇದು ಪ್ರಾಯೋಗಿಕವಾಗಿ ಕಷ್ಟವಾಗಿತ್ತು. ಇಂತಹ ಅನೇಕ ತೊಡರುಗಳಿಂದ ಚಿತ್ರಸಂಗೀತ ಮತ್ತೆ ಅನಿವಾರ್ಯವಾಯಿತು. (ಬಿ. ಕುಪ್ಪಸ್ವಾಮಿ, ಕಮ್ಯುನಿಕೇಶನ್ ಆಂಡ್ ಸೋಶಿಯಲ್ ಡೆವಲಪ್ ಮೆಂಟ್, ಇನ್ 20, 1984, 3-215-216) ಚಿತ್ರಸಂಗೀತದಿAದ ರೇಡಿಯೋ ಸಿಲೋನ್‌ಗೆ ಹೆಚ್ಚು ಶೋತೃಗಳು ಆಕರ್ಷಿತವಾಗಿದ್ದರಿಂದ 1957ರ ಅಕ್ಟೋಬರಿನಲ್ಲಿ ವಿವಿಧ ಭಾರತಿ ಮುಂಬೈ

ಹಾಗೂ ಮದಾಸಿನಲ್ಲಿ ಎರಡು ಹೆಚ್ಚು ಸಾಮರ್ಥ್ಯದ ಟ್ರಾನ್ಸ್ ಮೀಟರ್‌ಗಳನ್ನು ಹೊಂದಿ ಪ್ರಾರಂಭಿಸಲಾಯಿತು. ಈ ಕೇಂದ್ರಗಳಲ್ಲಿ ಚಿತ್ರಗೀತೆಯೊಂದಿಗೆ ದೇಶಭಕ್ತಿ ಗೀತೆ, ಭಕ್ತಿ ಗೀತೆ, ಜನಪದ ಸಂಗೀತವೂ ಪ್ರಸಾರಗುತ್ತಿದ್ದುದರಿಂದ ಕೇಳುಗರ ಸಂಖ್ಯೆ ಪುನಃ ಹೆಚ್ಚಿತು. ಈ ಕೇಂದ್ರಗಳು ಭಾರತದಾಚೆಯೂ ಕೂಡ ಅಂದರೆ ಮಧ್ಯ ಪ್ರಾಚ್ಯ, ಆಸ್ಟ್ರೇಯ ಏಷ್ಯಾ ಹಾಗೂ ಆಫ್ರಿಕಾದಲ್ಲಿ ಜನಪ್ರಿಯವಾದವು. ಆರಂಭದ ದಿನಗಳಲ್ಲಿ ಆಕಾಶವಾಣಿಯ ಸೀಮಿತ ಕಾಲಾವಕಾಶಕ್ಕೆ ಸಂಗೀತಗಾರರು ತಕರಾರು ಮಾಡುತ್ತಿದ್ದು ಅವರ ಮನವೊಲಿಸಿ, ಕೇಂದ್ರದ ಸ್ಟುಡಿಯೋಗಳಲ್ಲಿ ಹಾಡಲು ಆಹ್ವಾನಿಸುತ್ತಿದ್ದಾಗ ನಿಲಯ ಅನೇಕ ಗೊಂದಲದ ಪರಿಸ್ಥಿತಿಗಳಿಗೆ ಒಳಗಾಗಬೇಕಿತ್ತು.

ದೆಹಲಿ ಕೇಂದ್ರ ಅದಕ್ಕಾಗಿ 'ಸರ್ಕಾರಿ ಚಾವಡಿ ಬಜಾರ್' (ನೃತ್ಯ ಹಾಗೂ ಗಾಯನವನ್ನು ವೃತ್ತಿಯಾಗಿ ಮಾಡಿಕೊಂಡು ಮಹಿಳೆಯರು ಪ್ರದರ್ಶಿಸುತ್ತಿದ್ದ ಸ್ಥಳ) ಎಂಬ ಕೆಟ್ಟ ಅಭಿದಾನಕ್ಕೂ ಪಾತ್ರವಾಗಿತ್ತು. (ಟ್ಯಾಂಗಲ್ಸ್ ಟೇಜ್, ಕೆ. ಎಸ್. ಮಲಿಕ್, 1974, ಪುಟ 33) ಆ ಕಾಲದಲ್ಲಿ ಫೀಲ್ಡನ್ ಹಾಗೂ ಅವರ ತಂಡ ಇದನ್ನು 'ಉದ್ಯೋಗಕ್ಕೆ ಸಂಬAಧಿಸಿದ ತೊಂದರೆಗಳು' ಎಂದು ಹಗುರವಾಗಿ ಪರಿಗಣಿಸಿತು. ಆದರೆ ಹೆಸರಾಂತ ಗಾಯಕರು ಹಾಗಿರಲಿ ಉನ್ನತ ಮನೆತನದ ಯುವ ಗಾಯಕ-ಗಾಯಕಿಯರು, ಸಂಗೀತವನ್ನು ಸಂಸ್ಕೃತಿಯ ಭಾಗವಾಗಿ ಆರಾಧಿಸುವರು ಆಕಾಶವಾಣಿ ನೀಡುವ ಅಲ್ಪ ಹಣಕ್ಕಾಗಿ ತಮ್ಮ ಕಲಾಸೇನೆಯನ್ನು ಮಾರಿಕೊಳ್ಳುವುದು ಹೀನಕಾರ್ಯ ಎಂದು ಭಾವಿಸಿ ಧ್ವನಿಮುದ್ರಣದಲ್ಲಿ ಭಾಗವಹಿಸುತ್ತಿರಲಿಲ್ಲ.

ನಂತರ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ಪ್ರಸಾರ ಮಂತ್ರಿಗಳಾದಾಗ 'ಖಾಸಗಿ ಬದುಕು ಶುಚಿಯಾಗಿರದ ಸಂಗೀತಗಾರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು'ಎಂಬ ಸುತ್ತೋಲೆಯನ್ನು ಹೊರಡಿಸಿದಾಗ ಕೇಂದ್ರಗಳ ನಿರ್ದೇಶಕರು ಗೊಂದಲಕ್ಕೀಡಾದರು. ಕೇಂದ್ರ ನಿರ್ದೇಶಕರು ವ್ಯಕ್ತಿಗಳ ಖಾಸಗಿ ಬದುಕಿನ ಬಗ್ಗೆ ತಿಳಿದುಕೊಳ್ಳುವುದು, ನಿರ್ಧರಿಸುವುದು ಎಷ್ಟು ಸರಿ? ಅವರ ಮಾಹಿತಿ ನೀಡಲು ಪೋಲಿಸ್ ಠಾಣೆಗಳನ್ನು ಕೇಳಬೇಕೆ? ಮುಂತಾದ ಪ್ರಶ್ನೆಗಳನ್ನು ಮಂತ್ರಾಲಯದಿAದ ಸೂಚನೆ ಬಂದಾಗ ಕೇಂದ್ರ ನಿರ್ದೇಶಕರು ಕಂಟ್ರೋಲರ್ ಅವರಿಗೆ ಕೇಳಿದರು. ಕಂಟ್ರೋಲರ್, ಪಟೇಲರಿಂದ ಮತ್ತೆ ಸಲಹೆಗಳನ್ನು ಕೇಳಿದಾಗ ಅವರು ಆದಷ್ಟು ಬೇಗ ಆ ಕೆಲಸ ಆಗಬೇಕು ಎಂದು ದೃಢವಾಗಿ ಹೇಳಿದರು.

ಆನಂತರದಲ್ಲಿ ಕಾರ್ಯಪ್ರವೃತ್ತರಾದ ನಿರ್ದೇಶಕರಿಂದ ಮಾಹಿತಿಯ ಮಹಾಪೂರ ಕಂಟ್ರೋಲರ್ ಅವರ ಕಛೇರಿಯನ್ನು ತಲುಪಿತು. ಅದನ್ನು ಆಧರಿಸಿ ಕಂಟ್ರೋಲರ್ ಎಲ್ಲ ಕೇಂದ್ರಗಳಿಗೆ ಆಜ್ಞಾಪತ್ರವನ್ನು ಹೊರಡಿಸಿದರು. ಕೆಲವರ್ಷಗಳ ನಂತರ ಆಕಾಶವಾಣಿ ನೀಡುತ್ತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಎಲ್ಲ ವರ್ಗದ, ಸಂಸ್ಕೃತಿಯ ಜನ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಸರ್ದಾರ್ ಪಟೇಲರ ದೂರದರ್ಶಿತ್ವ ಉತ್ತರ ಭಾರತದ ಮಟ್ಟಿಗಂತೂ ಆಗ ಫಲಪ್ರದವಾಯಿತು. ದಕ್ಷಿಣ ಭಾರತದಲ್ಲಿ ಜನ ಸೇರುವ ಸಭೆಗಳಲ್ಲಿ ಸಂಗೀತ ಕಛೇರಿ ನಡೆಸುವುದು ಸಂಪ್ರದಾಯ, ಹೆಚ್ಚಾಗಿ ಹಬ್ಬ-ಹರಿದಿನಗಳಲ್ಲಿ ದೇವಸ್ಥಾನಗಳಲ್ಲಿ ಕಛೇರಿಗಳನ್ನು ಆಯೋಜಿಸಲಾಗುತ್ತಿತ್ತು.

ದಕ್ಷಿಣದಲ್ಲಿ ಸಂಗೀತಕ್ಕೆ ರಾಜಾಶ್ರಯವೂ ಹೆಚ್ಚಿದ್ದರಿಂದ ಅಲ್ಲಿ ಜನ ಆಕಾಶವಾಣಿಯನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಕಛೇರಿಗಳನ್ನು ಆಕಾಶವಾಣಿ ಧ್ವನಿಮುದ್ರಿಸಿಕೊಳ್ಳುತ್ತಿದ್ದುದರಿಂದ ಅಲ್ಲಿಯ ವ್ಯವಸ್ಥೆಯನ್ನೂ ಅದಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಲಾಗುತ್ತಿತ್ತು, ಕಛೇರಿಗಳು 4-5 ತಾಸು ನಡೆಯುತ್ತಿದ್ದು ಅವುಗಳನ್ನು ಆಕಾಶವಾಣಿಯಲ್ಲಿ ಪ್ರಸಾರ ಮಾಡುವುದು ಕಷ್ಟವಾಗುತ್ತಿತ್ತು. ಅದಕ್ಕಾಗಿ ಕಛೇರಿಗಳನ್ನು ಒಂದೂವರೆ ತಾಸಿಗೆ ನಿಗದಿಪಡಿಸಲಾಯಿತು. ಮುಂದೆ ಅದೇ ಸಂಪ್ರದಾಯವಾಯಿತು.