ಸಾರ್ವಜನಿಕರ ಅರ್ಜಿ ಕಸದ ಬುಟ್ಟಿಗೆ? ಆರ್.ಟಿ.ಐಯಿಂದ ಹೊರತೆಗೆಯಲು ಸಹಕಾರಿ!

By











ಮಾಹಿತಿ ಹಕ್ಕು ಕಾಯ್ದೆ ದುರುಪಯೋಗ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಸಾರ್ವಜನಿಕ ಅರ್ಜಿಗಳ ವಿಲೇವಾರಿ ಮಾಡದಿರುವ ಅಥವಾ ಹಿಂಬರಹ ನೀಡದಿರುವ ಅಧಿಕಾರಿಗಳಿಗೆ ಅರ್ಜಿ ವಿಲೇವಾರಿ ಅಥವಾ ಹಿಂಬರಹ ನೀಡುವಂತೆ ಮೊದಲು ಸೂಚಿಸಬೇಕು. ಕೆಳ ಅಧಿಕಾರಿಗಳು ಜನಪ್ರತಿನಿಧಿಗಳು ಮೇಲೆ ಭಾರ ಹಾಕಬಹುದು ಬಿಟ್ಟರೆ ಬಹುತೇಕ ಸಾರ್ವಜನಿಕ ಅರ್ಜಿಗಳು ವಿಲೇವಾರಿಯಾಗದೆ ಕಸದ ಬುಟ್ಟಿಗೆ ಎಸೆಯಲಾಗಿದೆ.

ಮಾಹಿತಿ ಹಕ್ಕು ಕಾಯ್ದೆ ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ದುರುಪಯೋಗದ ವಿರುದ್ಧ ಕೇಂದ್ರ ಸರ್ಕಾರವೇ ಕ್ರಮ ಕೈಗೊಳ್ಳಬೇಕು. 2005 ರಿಂದ 2025 ಇಲ್ಲಿಯವರೆಗೆ ಎಲ್ಲಾ ಇಲಾಖೆಗಳ ಮಾಹಿತಿಗಳನ್ನು ವಾರ್ಡ್ ವಾರು, ಗ್ರಾಮ ವಾರು, ನಗರ ವಾರು ಎಂದು ನಿಗದಿಪಡಿಸಿ ಯಾವ ವರ್ಷದ ಮಾಹಿತಿ ಬೇಕು.

ಆ ವರ್ಷದ ಮಾಹಿತಿಯನ್ನು ಆಯಾ ಇಲಾಖೆಯ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿಬಿಡಿ ಯಾರು ಮಾಹಿತಿ ಕೇಳುವ ಗೋಜಿಗೆ ಹೋಗುವುದಿಲ್ಲ. ಕದ್ದು ಮುಚ್ಚಿಟ್ಟಿರು ಮಾಹಿತಿ ಕೇಳಿದ್ದರೆ, ದುರುಪಯೋಗವಾಗುತ್ತಿದೆ ಎನ್ನುವುದಾದರೆ ಎಲ್ಲಾ ಇಲಾಖೆಗಳ ಮಾಹಿತಿಗಳನ್ನು ವೆಬ್ ಸೈಟ್ ಅನ್ ಲೈನ್ ನಲ್ಲಿ ಅಪ್ಲೋಡ್ ಮಾಡಿಬಿಡಿ. ಅದು ಹೇಗೆ ದುರುಪಯೋಗ ಆಗುತ್ತದೆ ನೋಡೋಣಾ.

ದೇವಸ್ಥಾನದ ಹುಂಡಿ ಹಣ ಒಳ್ಳೆ ಕಾರ್ಯಕ್ಕೆ

ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ಭಕ್ತರು ಹುಂಡಿಗೆ ಹಾಕಿದ ಹಣ ವೃದ್ಧರಿಗೆ, ಅಂಗವಿಕಲರಿಗೆ ಮಾಸಿಕ ಪಿಂಚಣಿ ರೂಪದಲ್ಲಿ ಬರುತ್ತದೆ ಎಂಬ ನಂಬಿಕೆ. ಇನ್ನು ಸಾರ್ವಜನಿಕರು ಕಟ್ಟುವ ತೆರಿಗೆ ಹಣ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಅಭಿವೃದ್ಧಿ ಬಳಕೆಯಾಗುತ್ತದೆ.

ಕೆಲವರು ಪ್ರತ್ಯೇಕ ಧರ್ಮ ಮಾಡುವಂತೆ ಏಕೆ ಒತ್ತಾಯಿಸುತ್ತಾರೆ ಎಂದರೆ ಎಲ್ಲಿ ದೇವಸ್ಥಾನಗಳು ಮುಜರಾಯಿ ಇಲಾಖೆಗೆ ಸೇರಿಸುತ್ತಾರೆ ಎಂಬ ಭಯ ಹೆದರಿಕೆ. ದೇವಸ್ಥಾನಕ್ಕೆ ಜನ ಹೋಗುವುದಿಲ್ಲ ಎಂಬ ವಾದ, ದೇವಸ್ಥಾನಕ್ಕೆ ಭಕ್ತರು ಬರುವುದು ಬಿಡುತ್ತಾರೆ ಎಂಬುದು ಒಂದು ಹುಚ್ಚು ಕಲ್ಪನೆ. ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಬಹುದು ವಿನಃ ಕಡಿಮೆಯಾಗುವುದಿಲ್ಲ.