ಕಿತ್ತೂರು ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆಯುವಂತೆ ನೂತನ ಕೇಂದ್ರ ಸಚಿವರು ಶ್ರಮಿಸಲಿ

By

ರಾಜ್ಯದಿಂದ ನೂತನ ಕೇಂದ್ರ ಸಚಿವರಾಗಿ ಎಚ್.ಡಿ ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ನಿರ್ಮಲಾ ಸೀತಾರಾಮನ್, ರಾಜ್ಯ ಖಾತೆ ಸಚಿವರಾಗಿ ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಅಭಿನಂದನಾರ್ಹರು ಆದರೆ "ಕಲ್ಯಾಣ ಕರ್ನಾಟಕ" ಮಾದರಿ ಅಡಿಯಲ್ಲಿ ಆರು ಹಿಂದುಳಿದ ಜಿಲ್ಲೆಗಳಿಗೆ ಅನ್ವಯಿಸುವಂತೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ, ಶಿಕ್ಷಣ ಮತ್ತು ಸರಕಾರಿ ಉದ್ಯೋಗದಲ್ಲಿ ಸ್ಥಳೀಯ ಮೀಸಲಾತಿಯನ್ನು ವಿಶೇಷ ಸ್ಥಾನಮಾನ ಕಲ್ಪಿಸುತ್ತದೆ. ಕಲ್ಯಾಣ ಕರ್ನಾಟಕ ಮಾದರಿ ವಿಶೇಷ ಸ್ಥಾನಮಾನವು ಕಿತ್ತೂರು ಕರ್ನಾಟಕದ ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ಬೆಳಗಾವಿ, ವಿಜಯಪುರ ಮತ್ತು ಉತ್ತರ ಕನ್ನಡ ಏಳು ಹಿಂದುಳಿದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವುದು ಅಗತ್ಯವಿದೆ.

"ಕಿತ್ತೂರು ಕರ್ನಾಟಕ" ಭಾಗ ಈ ಹಿಂದೆ ಮುಂಬೈ ಕರ್ನಾಟಕ ಎಂದು ಗುರುತಿಸಿಕೊಂಡಿತು. ಕಿತ್ತೂರು ಕರ್ನಾಟಕದ ಏಳು ಜಿಲ್ಲೆಯ ಎಷ್ಟೋ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಕೊರತೆಯಿಂದ ನರಳಿತಿವೆ, ಗ್ರಾಮ ಸಂಪರ್ಕಿಸಲು ಸರಿಯಾದ ರಸ್ತೆಗಳಿಲ್ಲ. ಅಲ್ಲದೇ ಸ್ಥಳೀಯರು ಶಿಕ್ಷಣ ಮತ್ತು ಸರಕಾರಿ ಉದ್ಯೋಗ ಪಡೆಯಲು ಉದ್ಯೋಗಾವಕಾಶಿಗಳು ಹರಸಾಹಸ ಪಡಬೇಕಿದೆ. ಆದ್ದರಿಂದ ಕರ್ನಾಟಕ ರಾಜ್ಯದಿಂದ ಕೇಂದ್ರ, ರಾಜ್ಯ ಖಾತೆ ಸಚಿವರಾದ ಎಚ್.ಡಿ ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ನಿರ್ಮಲಾ ಸೀತಾರಾಮನ್, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ಕಿತ್ತೂರು ಕರ್ನಾಟಕ ಭಾಗದ ಸಂಸದರು, ಶಾಸಕರು, ಅಧಿಕಾರಿಗಳು ಮುತುವರ್ಜಿವಹಿಸಿ ಕಿತ್ತೂರು ಕರ್ನಾಟಕಕ್ಕೆ

ಕಲ್ಯಾಣ ಕರ್ನಾಟಕ ಮಾದರಿ "ವಿಶೇಷ ಸ್ಥಾನಮಾನ" ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ. ಕಿತ್ತೂರು ಕರ್ನಾಟಕಕ್ಕೂ ವಿಶೇಷ ಸ್ಥಾನಮಾನ ಕಲ್ಪಿಸುವತ್ತ ಕೇಂದ್ರ ಸಚಿವರು ಚಿತ್ತ ಹರಿಸಬೇಕಿದೆ.