ಅಲ್ಲಲ್ಲಿ ಕೆಸೆಟ್ ಆಭ್ಯರ್ಥಿಗಳು ಸೆಲ್ಪಿ ತೆಗೆದುಕೊಂಡು ವಾಟ್ಸಾಪ್ ಸ್ಟೇಟಸ್‌ನಲ್ಲಿ ನಮ್ಮ ರಾಜಧಾನಿ ಬೆಂಗಳೂರು ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಬಿಬಿಎಂಪಿ ಅಚ್ಚುಕಟ್ಟಾಗಿ ಬೆಂಗಳೂರು ನಗರ ನಿರ್ವಹಣೆ ಮಾಡುತ್ತಿದ್ದಾರೆ. ಸ್ವಚ್ಛತೆ, ಬೀದಿದೀಪಗಳು, ನಗರದ ರಸ್ತೆಗಳು ಸೇರಿದಂತೆ ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಕಾರ್ಯಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದೆ. ಇಲ್ಲಿನ ವಿಶೇಷ ಏನೆಂದರೆ ಸ್ಥಳೀಯ ಶಾಸಕ, ಸಂಸದರಿಗೆ ಬದಲಾಗಿ ಸ್ಥಳೀಯ ಬಿಬಿಎಂಪಿ ವಾರ್ಡ್ ಕಾರ್ಪೋರೇಟರಿಗೆ ಜನ ಬೆಲೆ, ಮರ್ಯಾದೆ ಜಾಸ್ತಿ ಕೊಡ್ತಾರೆ ಅಂತೆ. ಇತ್ತೀಚೆಗೆ ಬಿಬಿಎಂಪಿ ಚುನಾವಣೆ ನಡೆದಿಲ್ಲ. ಕಾರಣವೂ ಗೊತ್ತಿಲ್ಲ ಆದರೂ ಬೆಂಗಳೂರಿನ ಸ್ವಚ್ಛತೆ,
ಅಭಿವೃದ್ಧಿ ಬಗ್ಗೆ ರಾಜ್ಯದ ವಿವಿಧ ಮೂಲೆಗಳಿಂದ ಬಂದಿದ್ದ ನಮ್ಮ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸ್ನೇಹಿತರು ಕೆಸೆಟ್ ಎಕ್ಸಾಮ್ ಬರೆಯಲು ಬಂದಾಗ ಬೆಂಗಳೂರು ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಸೆಟ್ ಎಕ್ಸಾಮ್ ಮುಗಿಸಿಕೊಂಡು ತಮ್ಮ ಊರುಗಳತ್ತ ರೈಲ್ವೆ ಹತ್ತಿ ಅನುಭವ ಹಂಚಿಕೊಂಡು ರಾತ್ರಿ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ್ದವು.
ಮೈಸೂರು, ಕಲಬುರಗಿ, ಹುಬ್ಬಳ್ಳಿಯಲ್ಲಿ ಪರೀಕ್ಷೆ ಕೇಂದ್ರ?
ನವೆಂಬರ 24 ರಂದು ಕೆಸೆಟ್ ಎಕ್ಸಾಮ್ ಎಂಎ, ಎಂಕಾಂ, ಎಂಎಸ್ಸಿ ಸ್ನಾತಕೋತ್ತರ ಪದವೀಧರರು ಮಾತ್ರ ಆಯಾ ಜಿಲ್ಲೆಯ ಪರೀಕ್ಷೆ ಕೇಂದ್ರದಲ್ಲಿ ಕೆಸೆಟ್ ಎಕ್ಸಾಮ್ ಬರೆದಿದ್ದಾರೆ. ಇನ್ನುಳಿದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಸೇರಿದಂತೆ 15ಕ್ಕೂ ಸಣ್ಣಪುಟ್ಟ ವಿಷಯಗಳಿಗೆ ಬೆಂಗಳೂರು ನಗರ ಕೇಂದ್ರವಾಗಿತ್ತು. ರಾಜ್ಯದ ಮೂಲೆಮೊಲೆಯಿಂದ ಕೆಸೆಟ್ ಪರೀಕ್ಷೆ ಬರೆಯಲು ಆಭ್ಯರ್ಥಿಗಳು ಬಂದಿದ್ದರು.
ಪ್ರತಿ 6 ತಿಂಗಳಗೊಮ್ಮೆ ಕೆಸೆಟ್ ಎಕ್ಸಾಮ್ ನಡೆಯುವುದರಿಂದ ಸಾದ್ಯಸಾದ್ಯತೆ ಆಧಾರದ ಮೇಲೆ ಸಾದ್ಯವಾದರೇ. ಈ ಮೇಲಿನ 15-16 ಸಣ್ಣಪುಟ್ಟ ವಿಷಯಗಳ ಆಭ್ಯರ್ಥಿಗಳಿಗೆ ಬೆಂಗಳೂರು ಜೊತೆಗೆ ಮೈಸೂರು, ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿ ಪರೀಕ್ಷೆ ಕೇಂದ್ರ ತೆರೆಯಬೇಕು ಎನ್ನುವುದು ಕೆಸೆಟ್ ಆಭ್ಯರ್ಥಿಗಳ ಬೇಡಿಕೆ ಈ ಬಗ್ಗೆ ಪದವಿ ಕಾಲೇಜು ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಸಚಿವರು ಪರಿಶೀಲಿಸಬೇಕಿದೆ.
Bengaluru Chronicles, Silicon Valley Of India, Technology Hub, Cosmopolitan City, Garden City, Travel Diaries, City Of Lakes, Heritage Walk, Cultural Melting Pot, Foodie Paradise, Incredible India, Development Marvel, Urban Charm, Architectural Wonders, Vibrant Nightlife, Shoppers Delight, Must Visit Destinations, Explore Bengaluru, City Appreciation, Travel Bengaluru,