ಆಧಾರ ಕಾರ್ಡ್ ಸೇರಿದಂತೆ ಇನ್ನಿತರ ಸರ್ಕಾರಿ ದಾಖಲೆ ತೋರಿಸಿ, ಉಚಿತ ಪ್ರಯಾಣ ಮಾಡಬಹುದೆಂದು ಹೇಳಿತು. ಇದರಿಂದ ಅನುಕೂಲಕ್ಕಿಂತ ದುರುಪಯೋಗವೇ ಹೆಚ್ಚಾಗಿದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧವೇ ಇಲ್ಲದ ರಾಜ್ಯ ಗಡಿ ಜಿಲ್ಲೆಯ ಮಹಿಳೆಯರು ಆಧಾರ ಕಾರ್ಡ್ ತೋರಿಸಿ, ರಾಜರೋಷವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ ಎಂಬ ಸಂಶಯ ಮೂಡುತ್ತಿದೆ. ಆದ್ದರಿಂದ ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಕೆ.ಎಸ್.ಆರ್.ಟಿ.ಸಿಯಿಂದ ಗುರುತಿನ ಚೀಟಿ ಪಡೆಯಲು ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿ, ಅರ್ಜಿ ಸಲ್ಲಿಸಲು ಮೂಲ ದಾಖಲೆಯನ್ನಾಗಿ ರಾಜ್ಯದ ಆಧಾರ ಕಾರ್ಡ್ ಅಪ್‌ಲೋಡ್ ಮಾಡಿದ ತಕ್ಷಣ ವೆಬ್‌ಸೈಟ್‌ನಲ್ಲಿವೇ ಗುರುತಿನ ಚೀಟಿ ಡೌನ್‌ಲೋಡ್ ಮಾಡುವಂತಹ ವ್ಯವಸ್ಥೆಯನ್ನು ಸರ್ಕಾರ ಅಳವಡಿಸಬೇಕು.
ಇದರಿಂದ ಸರ್ಕಾರಕ್ಕೆ ಸಲ್ಲಿಕೆಯಾಗುವ ಭೋಗಸ್ ವರದಿ ತಪ್ಪಿ, ಉಚಿತ ಬಸ್ ಪ್ರಯಾಣ ಬೇಕಿದ್ದ ಮಹಿಳೆಯರಿಗೆ ಕೆ.ಎಸ್.ಆರ್.ಟಿ.ಸಿ ನೀಡುವ ಗುರುತಿನ ಚೀಟಿ ತೋರಿಸಿ ಟಿಕೆಟ್ ಪಡೆದುಕೊಳ್ಳತ್ತಾರೆ. ಬೇಡದವರು ಗುರುತಿನ ಚೀಟಿ ಇಲ್ಲದೇ ಹಣ ನೀಡಿ ಪ್ರಯಾಣ ಬೆಳೆಸಬಹುದು. ಕೆ.ಎಸ್.ಆರ್.ಟಿ.ಸಿ ವಿಷಯದಲ್ಲಿ ಸರ್ಕಾರ ಹೆಚ್ಚು ಗಮನಹರಿಸಿ, ಸಾರಿಗೆ ಇಲಾಖೆಯಿಂದ ಉಚಿತ ಬಸ್ ಪ್ರಯಾಣ ಬೆಳೆಸುವ ಮಹಿಳೆಯರಿಗೆ ಗುರುತಿನ ಚೀಟಿ ನೀಡುವಂತಹ ಕೆಲಸ ಮಾಡಬೇಕಿದೆ.
Free Bus Rides For Women, Safe And Accessible Public Transit, Women Empowerment Through Mobility, Gender Equality In Transportation, Sustainable Commuting For All, Breaking Barriers For Women, Identity Cards For Women Safety, Women On The Move, End Gender Discrimination In Transit, Affordable Public Transit For Women, Empower Women With Identification, Inclusive City Planning, Female Mobility Matters, Security For Her Journey, Economic Freedom Through Mobility,