ವಲಸಿಗ ವೋಟುಗಳಿಂದ ರಾಜಕೀಯ ಪಕ್ಷಗಳಿಗೆ ಹಿನ್ನೆಡೆ...!

By

ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಬಾರಿ ಅಂತರದಿಂದ ಗೆಲುವಿನ ಹಿಂದೆ ವಲಸಿಗ ವೋಟ್‌ಗಳ ಶಕ್ತಿಯಿದೆ?. ಹೌದು ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ವಿವಿಧ ಕಾರಣಗಳಿಂದ ವಲಸೆ ಹೋದ ಅದೆಷ್ಟೋ ಮತದಾರರು ತಮ್ಮ ತಮ್ಮ ಗ್ರಾಮದ ಚುನಾವಣೆ ಬೂತ್‌ಗಳನ್ನು ಬದಲಾಯಿಸಿ, ರಾಜ್ಯದ ವಿವಿಧ ನಗರ ಪ್ರದೇಶಕ್ಕೆ ಮತ ಚಲಾಯಿಸುವ ಬೂತ್ ಹಸ್ತಾಂತರ ಮಾಡಿಕೊಳ್ಳುತ್ತಾರೆ. ಈ ರೀತಿ ಸನಿವೇಶದಿಂದ ಒಂದೇ ಪಕ್ಷದ ಮತಗಳು ಒಂದೇ ಪ್ರದೇಶಕ್ಕೆ ಸ್ಥಳಾಂತರ ಅಥವಾ ಕ್ರೋಡಿಕರಣಗೊಂಡು ಫಲಿತಾಂಶದ ದಿಕ್ಕುನೇ ಬದಲಾಯಿಸಿ ಬಿಡುತ್ತದೆ. ಇದರಿಂದ ಸ್ಥಳೀಯರಲ್ಲದ ವಲಸಿಗರ ಲಕ್ಷ ಲಕ್ಷ ಮತಗಳಿಂದ ಅಭ್ಯರ್ಥಿಗಳು ಆಯ್ಕೆಯಾಗಿ ಪಕ್ಷಗಳಿಗೆ ಹಿನ್ನಡೆಯುಂಟಾಗುತ್ತದೆ ಎಂಬ ಅನುಮಾನ ಮೂಡಿದೆ.

ಮತದಾರರು ಸಮಯಕ್ಕೆ ತಕ್ಕಂತೆ ಅಥವಾ ತಮ್ಮ ಅನುಕೂಲ ತಕ್ಕಂತೆ ಬೂತ್‌ಗಳು ಬದಲಾಯಿಸಿ, ವಿವಿಧ ನಗರ ಪ್ರದೇಶಕ್ಕೆ ವಲಸೆ ಹೋಗಿ ಪಕ್ಷದ ಲೆಕ್ಕಾಚಾರ ಅದಲು-ಬದಲು ಮಾಡಿ, ಗೊಂದಲವನ್ನು ಉಂಟು ಮಾಡುತ್ತದೆ. ಯಾರು ತಮ್ಮ ಹುಟ್ಟೂರು, ಮೂಲ ಸ್ಥಳ ಹೊರತುಪಡಿಸಿ ಬೇರೆ ಯಾವುದೇ ಕಡೆ ಬೂತ್ ವರ್ಗಾಯಿಸುವ ವ್ಯವಸ್ಥೆಯನ್ನು ಆಯೋಗ ಬದಲಾಯಿಸಬೇಕು ಅಥವಾ ಪುನರ್ ಪರಿಶೀಲಿಸಬೇಕು. ಇದರಿಂದ ಯಾವುದೇ ಪಕ್ಷಗಳಿಗೆ ಹಿನ್ನಡೆಯಂಟಾಗುವುದಿಲ್ಲ ಸ್ಪಷ್ಟ ಫಲಿತಾಂಶ ತಿಳಿಯಲಿದೆ.
ಜೆಡಿಎಸ್ ಪ್ರಾಬಲ್ಯ ಹಳೆ ಮೈಸೂರು ಕಾಂಗ್ರೆಸ್ ಕೈ ತಪ್ಪಿದೆ.

ಒಂದು ಕಡೆ ಸ್ಥಳೀಯರಲ್ಲದ ನಗರ ಪ್ರದೇಶದ ವಲಸಿಗ ವೋಟುಗಳಿಂದ ಕಾಂಗ್ರೆಸ್‌ಗೆ ಕ್ಷೇತ್ರ ತಪ್ಪಿರಬಹುದು?, ಮತ್ತೊಂದು ಕಡೆ ಹಳೆ ಮೈಸೂರು ಭಾಗ ಬಿಜೆಪಿ-ಜೆಡಿಎಸ್ ಮೈತ್ರಿ ಕೆಲಸ ಮಾಡಿದೆ. ಕಳೆದ ಸಲ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಬಲ ಇರ್ಲಿಲ್ಲ. ಈಗ ಜೆಡಿಎಸ್ ಇರುವ ಕಡೆ ಬಿಜೆಪಿಗೆ ವರವಾಗಿದೆ. ಬಿಜೆಪಿ ಇದ್ದ ಕಡೆ ಜೆಡಿಎಸ್‌ಗೆ ವರವಾಗಿದೆ. ಆದರೂ ಕಾಂಗ್ರೆಸ್ ಎರಡು ಪಕ್ಷಗಳಿಗೆ ಟಫ್ ಫೈಟ್ ನೀಡಿ, ಮತ ಪ್ರಮಾಣ ಹೆಚ್ಚಿಸಿಕೊಂಡಿದೆ. ಎಲ್ಲ ಪಕ್ಷದ ರಾಜಕಾರಣಿಗಳು ಮತದಾರರ ತೀರ್ಮಾನಕ್ಕೆ ತಲೆಬಾಗಿ, ಗೌರವಿಸಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕಿದೆ.