ಸರಕಾರಕ್ಕೆ ಸಮಸ್ಯೆಗಳು ನೂರಾರು ಬೇಕಿದೆ ಕಾಯಕಲ್ಪ!!!

By

ದಿನ ಬೆಳಗಾದರೆ ಒಂದಲ್ಲ ಒಂದು ಸಮಸ್ಯೆ ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಸಮಸ್ಯೆಗಳನ್ನು ಶೀಘ್ರವಾಗಿ ಚರ್ಚಿಸಿ ಬಗೆಹರಿಸುವ ವೇಳೆಗೆ ಮತ್ತೊಂದು ಸಮಸ್ಯೆ ತಂದೊಡ್ಡುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಬಹುದಾದ ಅಥವಾ ಕಾನೂನಿನ ತೊಡಗಿರುವ ಸಮಸ್ಯೆಗಳ ಬಗ್ಗೆ ದೂರದಾರರಿಗೆ ಸರಿಯಾಗಿ ಮಾಹಿತಿ ನೀಡಿದರೇ. ಆ ಸಮಸ್ಯೆ ಸರಿಯಾಗಬಹುದೇನು? ಎಂಬ ಪ್ರಶ್ನೆ ಸಹಜ. ಅದರಲ್ಲೂ ಪಕ್ಷದಲ್ಲಿರುವ ಸಮಸ್ಯೆಗಳು ಸದ್ದು ಮಾಡಿದ್ರು ಸಲೀಸಾಗಿ ಬಗೆಹರಿಸಿಕೊಳ್ಳಬಹುದಾಗಿದೆ.

ಕರೋನಾ ವ್ಯಕ್ತಿಗೆ ತೀವ್ರವಾಗಿದ್ದರೇ ಮಾತ್ರ ಪರಿಗಣಿಸಿ
ಕರೋನಾ ಕಳೆದ ಡಿಸೆಂಬರ್ ನಿಂದ ಸಣ್ಣಪುಟ್ಟ ಏರಿಳಿತದಲ್ಲಿ ಸದ್ದು ಮಾಡುತ್ತಿದ್ದು ಆದರೆ ತೀವ್ರವಾಗಿರುವ ವ್ಯಕ್ತಿ ಮಾತ್ರ ಪರಿಗಣಿಸಬೇಕು. ಏಕೆಂದರೆ ಕೆಲವರಿಗೆ ಯಾವುದೇ ನೆಗಡಿ, ಕೆಮ್ಮು, ಜ್ವರ ಇಲ್ಲದಿದ್ದರು ಸಹ ಆ ವ್ಯಕ್ತಿಯನ್ನು ಕರೋನಾ ಪ್ರಕರಣದಲ್ಲಿ ಪರಿಗಣಿಸಿ ಅಂಕಿ ಸಂಖ್ಯೆಯಲ್ಲಿ ಕೌಂಟ್ ಮಾಡಲಾಗುತ್ತಿದೆ. ಕೆಲವು ಸಂದರ್ಭದಲ್ಲಿ ತಂಡಿ ವಾತಾವರಣಕ್ಕೆ ಅಕಸ್ಮಿಕ ನೆಗಡಿ ಕೆಮ್ಮು, ಜ್ವರ ಬಂದಿರಬಹುದು ಈ ಪ್ರಕ್ರಿಯೆ ಶತ ಶತಮಾನಗಳಿಂದ ನಡೆದ ಬಂದಿರುವ ಒಂದು ಪ್ರಕ್ರಿಯೆ ಹಾಗಾಗಿ ಕರೋನಾ ಹರಡಿರುವ ವ್ಯಕ್ತಿಯಲ್ಲಿ ತೀವ್ರ, ಅತಿ ತೀವ್ರ ಮಾತ್ರ ಪರಿಗಣಿಸಬೇಕು ಸಣ್ಣ ಅತಿ ಸಣ್ಣ ಇರುವ ಕರೋನಾ ಕೇಸ್‌ಗಳ ಬಗ್ಗೆ ಮನೆಯಲ್ಲಿದ್ದು ಆರೈಕೆ ಮಾಡಿಕೊಳ್ಳಲು ತಿಳಿಸಿದ್ರೆ ಸೂಕ್ತ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಸರ್ಕಾರಿ ನೌಕರ ಡಿಮ್ಯಾಂಡ್ ಅಡ್ಡಿ ಕಾರಣವೇ?
ಅತಿಥಿ ಉಪನ್ಯಾಸಕರು ಕಾಯಂಗೊಳಿಸುವುದು ಸೇರಿದಂತೆ ನಾನಾ ಬಗೆಯ ಬೇಡಿಕೆ ಈಡೇರಿಸಲು ಹೋರಾಟ ಮಾಡುತ್ತಿದ್ದು ಈ ಹೋರಾಟಕ್ಕೆ ಪ್ರಸ್ತುತ ಚಾಲ್ತಿಯಲ್ಲಿರುವ ಸರ್ಕಾರಿ ನೌಕರ ಬೇಡಿಕೆಯೋ ಅಡ್ಡಿವೋ ಎಂಬ ಪ್ರಶ್ನೆ? ಸ್ಪಷ್ಟವಾಗಿ ಗೋಚರಿಸುತ್ತಿದೆ. ಸರ್ಕಾರಿ ಉಪನ್ಯಾಸಕರಿಗೆ ಸಂಬಳ ಜಾಸ್ತಿ ಇರುವುದರಿಂದ ಒಬ್ಬ ಸರ್ಕಾರಿ ಉಪನ್ಯಾಸನಿಗೆ ನೀಡುವ ಸಂಬಳದಲ್ಲಿ 3-4 ಜನ ಅತಿಥಿ ಉಪನ್ಯಾಸಕರು ಕೆಲಸ ನಿರ್ವಹಿಸುತ್ತಾರೆ ಎಂಬ ವಿಚಾರಗಳು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಸಹ ತಿಳಿದಿದೆ. ಸರ್ಕಾರಿ ನೌಕರರು ನಾನಾ ಬೇಡಿಕೆ ಇಡೇರಿಸುವಂತೆ ಹೋರಾಟ ನಡೆಸುವುದರಿಂದ, ಸರಕಾರ ಹಣವನ್ನು ಎಲ್ಲಿಂದ ಹೊಂದಿಸುತ್ತದೆ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ.
ಇದರಿಂದ ಸರಕಾರಿ ನೌಕರನ್ನಾಗಿ ಕಾಯಂಗೊಳಿಸುವಂತೆ ಹೋರಾಟ ಮತ್ತು ಹೊಸ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ಸಹ ನಿಂತು ಹೋಗಿದೆ. ಹಾಗಾಗಿ ಸರ್ಕಾರಿ ನೌಕರ ಸಂಘ ಬೇಡಿಕೆ ಪಕ್ಕಕ್ಕಿಟ್ಟು ಮತ್ತೊಬ್ಬರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ.

ಧಾರವಾಡ ಎಂಪಿ ಟಿಕೆಟ್‌ಗೆ ಜಗದೀಶ್ ಶೆಟ್ಟರ್ ಸೂಕ್ತ ಅಭ್ಯರ್ಥಿ
ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಚರ್ಚೆ ಮಾಡುವುದಕ್ಕಿಂತ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಜಗದೀಶ್ ಶೆಟ್ಟರ್ ಆಯ್ಕೆ ಮಾಡುವುದು ಸೂಕ್ತ. ಸರ್ಕಾರ ರಚನೆಯಾದ ದಿನದಿಂದ ಇಲ್ಲಿಯವರೆಗೂ ಸರ್ಕಾರ ಪರ ಜನರ ಜನಪ್ರಿಯತೆ, ಜನರ ಭಾವನೆಗಳು, ಬದಲಾವಣೆಯಾಗಿಲ್ಲ ಈಗ್ಲೇ ಲೋಕಸಭಾ ಚುನಾವಣೆ ನಡೆದರೂ ಸಹ 18-20 ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್ ಸೂಕ್ತ ಆಭ್ಯರ್ಥಿ, ಹೌದು ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ವೋಟ್ ಬಿದ್ದರು ಇನ್ನುಳಿದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಾರಿ ಪ್ರಮಾಣದ ವೋಟ್ ಜಗದೀಶ್ ಶೆಟ್ಟರ್ ಬೀಳುವ ಸಾಧ್ಯತೆ ಹೆಚ್ಚಿದೆ. ಸೋಲು ಗೆಲುವಿನ ಪ್ರಶ್ನೆ ಪಕ್ಕಕ್ಕಿಟ್ಟು ಜಗದೀಶ್ ಶೆಟ್ಟರ್ ಅಭ್ಯರ್ಥಿಯಾಗಿಸುವುದು ಸೂಕ್ತ ನಿರ್ಧಾರವಾಗಬಹುದು.

ಕಾಂಗ್ರೆಸ್ಸಿನ ಭವಿಷ್ಯದ ಯುವ ನಾಯಕ ಪ್ರದೀಪ ಈಶ್ವರ
ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ ಈಶ್ವರ ಕಾಂಗ್ರೆಸ್ಸಿನ ಭವಿಷ್ಯ ಯುವ ನಾಯಕರಾಗುವಲ್ಲಿ ಯಾವುದೇ ಅನುಮಾನವಿಲ್ಲ. ಭಾಷಣ ಮೂಲಕ ಮನೆ ಮಾತಾಗಿರುವ ಪ್ರದೀಪ ಈಶ್ವರ ತಮ್ಮ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಜನರ ಕಷ್ಟ ಅಲಿಸುತ್ತಿರುವುದು ನೋಡಿ ರಾಜ್ಯದಾದ್ಯಂತ ಜನ ಫುಲ್ ಖುಷ್ ಆಗಿರುವುದು ಸುಳ್ಳಲ್ಲ. ಪ್ರದೀಪ ಈಶ್ವರ ಯಾವಾಗ ಬಿಗ್ ಬಾಸ್‌ಗೆ ಎಂಟ್ರಿ ಆಗ್ತಾರೆ ಅಂತ ಸುದ್ದಿ ಬಂತೋ ಆವಾಗ ಕಾರ್ಯಕರ್ತರು ಸೇರಿದಂತೆ ನಾಯಕರು ಫುಲ್ ಖುಷಿಯಾಗಿದರು. ವಿರೋಧ ಪಕ್ಷಗಳು ವಿರೋಧ ಮಾಡಿದ್ರು ಸಹ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು ಪ್ರದೀಪ ಈಶ್ವರ ಪರವಾಗಿ ಬ್ಯಾಟ್ ಬಿಸಿದ್ದು ವಿಶೇಷವಾಗಿತ್ತು. ಕಾಂಗ್ರೆಸ್ಸಿನ ಭವಿಷ್ಯದ ಯುವ ನಾಯಕ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ ಈಶ್ವರ ಎಂಬ ಕೂಗು ಕಾಂಗ್ರೆಸ್ ಕಾರ್ಯಕರ್ತರ ಅಂತರಾಳವಾಗಿದೆ.

Government Revival Now, Fix Our System, Political Overhaul, Address The Issues, End Corruption, Citizens First, Transparency Matters, Reform Agenda, Leadership Crisis, Innovative Policies, Accountability Needed, Break The Status Quo, Democracy At Work, People Power Revival, Rebuild The Nation,