ದಿಂಗಾಲೇಶ್ವರ ಶ್ರೀ ಸ್ಪರ್ಧೆ: ಧಾರವಾಡ ಹೈ ವೋಲ್ಟೇಜ್ ಕ್ಷೇತ್ರ ನಿಶ್ಚಿತ?

By


ರಾಜ್ಯದಲ್ಲಿ ದಿನದಿಂದ ದಿನಕ್ಕೆ ಧಾರವಾಡ ಲೋಕಸಭಾ ಕ್ಷೇತ್ರ ಕಾವೇರಿತಿದೆ. ಧಾರವಾಡ ಲೋಕಸಭಾ ಕ್ಷೇತ್ರ ಯಾವಾಗಲೂ ಕಾಂಗ್ರೆಸ್, ಬಿಜೆಪಿ ನಡುವೆ ನೇರ ಹಣಾಹಣಿ ಪೈಪೋಟಿ ನೀಡುವ ಕ್ಷೇತ್ರವಾಗಿದ್ದು, ಯಾವಾಗ ಕಾಂಗ್ರೆಸ್ ಹೈಕಮಾಂಡ್ ಸದ್ದಿಲ್ಲದೆ ಕಾಂಗ್ರೆಸ್ ಆಭ್ಯರ್ಥಿಯಾಗಿ ವಿನೋದ ಅಸೂಟಿ ಆಯ್ಕೆ ಮಾಡುತ್ತಿದ್ದಂತೆ, ವೀರಶೈವ - ಲಿಂಗಾಯತ ಸಮುದಾಯದ ಮತಗಳಿಗೆ ಹೆಚ್ಚಿರುವ ಕ್ಷೇತ್ರದಲ್ಲಿ ಬಿಜೆಪಿ ಲಿಂಗಾಯತರಿಗೆ ಟಿಕೆಟ್ ನೀಡಬೇಕು ಇಲ್ಲವೇ ತಾವೇ ಪಕ್ಷಾಂತರ ಆಭ್ಯರ್ಥಿಯಾಗಿ ಸ್ಪರ್ಧಿಸುದಾಗಿ ಶಿರಹಟ್ಟಿ ಫಕೀರೇಶ್ವರಮಠದ ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಘೋಷಿಸುವ ನಿರ್ಧಾರ ಕೈಗೊಂಡರು. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ವೀರಶೈವ ಲಿಂಗಾಯತ ಒಳ ಪಂಗಡದ ಮತಗಳಿವೆ.

ಬಹುತೇಕ ಕ್ಷೇತ್ರದ ಜನರ ಅಭಿಪ್ರಾಯ ರಜತ್ ಉಳ್ಳಾಗಡ್ಡಿಮಠ, ಶಿವಲೀಲಾ ವಿನಯ ಕುಲಕರ್ಣಿ ಅವರು ಕಾಂಗ್ರೆಸ್ ಆಭ್ಯರ್ಥಿಯಾಗಬಹುದೆಂದು ನಿರೀಕ್ಷೆಯಲ್ಲಿ ಮತದಾರರು, ಕಾರ್ಯಕರ್ತರು ಇದ್ದರು. ಕೊನೆಯದಾಗಿ ಕುರುಬ ಸಮಾಜದ ವಿನೋದ ಅಸೂಟಿ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ದಿಂಗಾಲೇಶ್ವರ ಶ್ರೀಗಳಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಬಗ್ಗೆ ಅಥವಾ ಬಹಿರಂಗವಾಗಿ ಬೆಂಬಲಿಸುವ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆಗಳು ನಡೆಯುತ್ತಿದೆ ಒಂದುವೇಳೆ ಕಾಂಗ್ರೆಸ್ ಹೈಕಮಾಂಡ್ ದಿಂಗಾಲೇಶ್ವರ ಶ್ರೀಗಳಿಗೆ ಕಾಂಗ್ರೆಸ್ ಟಿಕೆಟ್ ಅಥವಾ ಬೆಂಬಲಿಸಿದ್ರೇ ಕಳೆದ ಬಾರಿ ಮಂಡ್ಯ ಲೋಕಸಭಾ ಹೈ ವೋಲ್ಟೇಜ್ ಕ್ಷೇತ್ರವಾದಂತೆ ಈ ಬಾರಿಯು ಧಾರವಾಡ ಹೈ ವೋಲ್ಟೇಜ್ ಕ್ಷೇತ್ರವಾಗುತ್ತದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ.

ಕಾಂಗ್ರೆಸ್ ಗ್ಯಾರಂಟಿ Vs ಮೋದಿ ಅಲೆ
ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಮುಂದೆ ಪ್ರಧಾನಿ ಮೋದಿ ಅಲೆ ಕೊಚ್ಚಿ ಹೊಯ್ತು ಈಗ್ಲೂ ಸಾರ್ವಜನಿಕ ಬಸ್ ನಲ್ಲಿ ಮಹಿಳೆಯರು ಮಾತಾಡಿಕೊಳ್ಳುತ್ತಿರುವುದು ಕಾಂಗ್ರೆಸ್ ಬಿಟ್ರ ಎದಕ್ಕೂ ವೊಟ್ ಹಾಕಂಗಿಲ್ಲ ಬಸ್ ಪ್ರೀ ಮಾಡ್ಯಾರ, ಕರೆಂಟ್ ಪ್ರೀ ಮಾಡ್ಯಾರ, 2000 ರೂ. ಕೊಡುತ್ತಾರ ಒಟ್ಟಿನಲ್ಲಿ ಬಡವರ ಹೊಟ್ಟೆಗೆ ಹಿಟ್ಟು ಹಾಕ್ಯಾರ ಅಂತ ಮಹಿಳೆಯರು ಮುಳಗುಂದ-ಗದಗ ನಡುವೆ ಸಂಪರ್ಕಿಸುವ ಬಸ್ ನಲ್ಲಿ ಮಹಿಳೆಯರು ಗುಸು-ಗುಸು ಚರ್ಚೆ ಮಾಡುತ್ತಿರುವುದು ನೋಡಿದ್ರೆ ಕಾಂಗ್ರೆಸ್ ಅಲೆ ಕಂಡು ಬರುತ್ತಿದೆ. ಮತ್ತೇ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿದೇ ಒಂದುವೇಳೆ ಗ್ಯಾರಂಟಿ ಕಾರ್ಡ್ ಮನೆ-ಮನೆಗೆ ಹಂಚಿಕೆ ಮಾಡಿದೆ ಅದಲ್ಲಿ ಕಳೆದ ವಿಧಾನಸಭೆಯಲ್ಲಿ ಬಂದ ಫಲಿತಾಂಶ ಲೋಕಸಭಾ ಚುನಾವಣೆಯಲ್ಲಿ ಬರುವುದು ಖಚಿತವೇನಿಸಿದೆ.