"ಗುದ್ನೇಶ್ವರಮಠ: ಕಂದಾಯ ಗ್ರಾಮಗೊಳ್ಳಬೇಕಾ? ಅಧಿಕಾರಿಗಳ ಹಿಂದೇಟು ಯಾಕೆ? 🤔"

By

ಕೊಪ್ಪಳ/ಕುಕನೂರ: ಸಮೀಪದ ಗುದ್ನೇಶ್ವರಮಠ ಗ್ರಾಮವನ್ನು ಕಂದಾಯ ಗ್ರಾಮ ಮಾಡುವಂತೆ ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿರುವುದಿಲ್ಲ. ಸರ್ಕಾರದ ನೀತಿ ನಿಯಮದ ಪ್ರಕಾರ ಮಜರೆ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಲು ಕಾನೂನಿನಲ್ಲಿ ಅವಕಾಶವಿದ್ದು, ಗ್ರಾಮ ಠಾಣಾ ವ್ಯಾಪ್ತಿಯಿಂದ 1 ಕಿ.ಮೀ ದೂರವಿರಬೇಕು, ಸುಮಾರು 50 ಕುಟುಂಬಗಳ ಮನೆಗಳಿರಬೇಕು. 100 ಎಕರೆ ಸುತ್ತುವರಿದು ಭೂಮಿ ಇರುವ ಮಜರೆ ಗ್ರಾಮಗಳನ್ನು ಕಂದಾಯ ಗ್ರಾಮ ಮಾಡಲು ಅವಕಾಶವಿದೆ. ಆದರೆ ಕುಕನೂರು ತಾಲೂಕಿನ ಗುದ್ನೇಶ್ವರಮಠ ಗ್ರಾಮ ಮಜರೆ ಗ್ರಾಮವಾಗಿದ್ದು 101 ಕೂರಿಗಿ ಜಮೀನು ಸುತ್ತುವರಿದು ಇದೆ ಗ್ರಾಮ ಠಾಣಾ ವ್ಯಾಪ್ತಿಯಿಂದ 1 ಕಿ.ಮೀ ದೂರ ಇದೆ.


ಸುಮಾರು 350 ಕ್ಕೂ ಅಧಿಕ ಮನೆಗಳಿವೆ ಗುದ್ನೇಶ್ವರಮಠ ಮಜರೆ ಗ್ರಾಮವನ್ನು ಕಂದಾಯ ಗ್ರಾಮ ಮಾಡಲು ಎಲ್ಲ ಅರ್ಹತೆ ಪಡೆದುಕೊಂಡಿದ್ರು ಕೂಡ ಕುಕನೂರ ತಾಲೂಕು ಆಡಳಿತ ಮಾತ್ರ ಅರ್ಹತೆ ಇಲ್ಲ ಎಂಬ ಹಿಂಬರಹ ಪತ್ರ ನೀಡಿ ಸಾರ್ವಜನಿಕರಿಗೆ ತಪ್ಪು, ಸುಳ್ಳು ಮಾಹಿತಿ ನೀಡುವಂತಹ, ದಿಕ್ಕು ತಪ್ಪಿಸುವಂತಹ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ರಾಜ್ಯದ ಕೆಲವು ಪಟ್ಟಣ ಪಂಚಾಯಿತಿ ಸಹಿತ ಕಂದಾಯ ಗ್ರಾಮಗಳು ಸೇರ್ಪಡೆಯಾದ ಸಾಕಷ್ಟು ಉದಾಹರಣೆಗಳಿವೆ. ಗುದ್ನೇಶ್ವರಮಠ ಕುಕನೂರ ಪಟ್ಟಣ ಪಂಚಾಯಿತಿಗೆ ಸೇರಿದೆ. ಕಂದಾಯ ಗ್ರಾಮ ಮಾಡಲು ಅವಕಾಶವಿಲ್ಲ ಎಂದೇ ಅಧಿಕಾರಿಗಳು ಉತ್ತರ ನೀಡಿರುತ್ತಾರೆ. ಕಂದಾಯ ಗ್ರಾಮ ಮಾಡಲು ಕಾನೂನಿನಲ್ಲಿ ಅವಕಾಶವಿದ್ದರೂ,

ಅವಕಾಶವಿಲ್ಲ ಎಂಬ ಅಧಿಕಾರಿಗಳ ಹಿಂಬರಹ ಪತ್ರಕ್ಕೆ ಶೋಭೆ ತರುವಂತದಲ್ಲ. ಗುದ್ನೇಶ್ವರಮಠ ಗ್ರಾಮ ಧಾರ್ಮಿಕ ಕ್ಷೇತ್ರವಾಗಿದ್ದು ಲಾಭದಾಯಕ ಬೆಳವಣಿಗೆಗೋಸ್ಕರ ಗುದ್ನೇಶ್ವರಮಠ ಕಂದಾಯ ಗ್ರಾಮ ಮಾಡುತ್ತಿಲ್ಲವೇ? ಅರ್ಹತೆ ಇದ್ದರು ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಸ್ಪಷ್ಟವಾಗಿ ಕಂಡಬರುತ್ತಿದೆ. ಗುದ್ನೇಶ್ವರಮಠ ಮಜರೆ ಗ್ರಾಮವನ್ನು ಕುಕನೂರ ಪಟ್ಟಣ ಪಂಚಾಯಿತಿ ಸಹಿತ ಕಂದಾಯ ಗ್ರಾಮ ಮಾಡಲು ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಕಂದಾಯ ಗ್ರಾಮದ ಸ್ಥಾನಮಾನ ನೀಡಬೇಕು ಎಂದು ಗುದ್ನೇಶ್ವರಮಠ ಗ್ರಾಮಸ್ಥರ ಒತ್ತಾಯವಾಗಿದೆ.

Related Tags:- Guddneshwar Matha, Revenue Village Demand, Administrative Neglect, Kannada Shorts, Local Governance, ಗುದ್ನೇಶ್ವರಮಠ, ಕಂದಾಯ ಗ್ರಾಮ ಬದಲಾವಣೆ, ಅಧಿಕಾರಿ ಹಿಂದೇಟು, ಧಾರ್ಮಿಕ ಹಕ್ಕುಗಳು, ಜನಪ್ರಶ್ನೆ, Justice For Matha, Temple Rights, Village Status Demand, People Vs System, Karnataka Local Issues,