"ಗೌರಿ ಹುಣ್ಣಿಮೆ ಚಂದ – ಭಕ್ತಿ ಮತ್ತು ಪ್ರಕೃತಿಯ ಮಾಯಾಜಾಲ 🌕✨"

By

ಹುಬ್ಬಳ್ಳಿ : ಹುಣ್ಣಿಮೆ ಎಂಬ ಸುಂದರ ಈ ಬೆಳಕಿನ ಹಬ್ಬವನ್ನು ಅದ್ಭುತವಾಗಿ ಸಿಂಗಾರಗೊಳಿಸಿ, ವಿದ್ಯುತ್ ದೀಪಗಳಿಂದ ಫಳ-ಫಳ ಅಂತ ಹೊಡೆಯುವ ಇಂತಹ ಅಪರೂಪದ ಗೌರಿ ಹುಣ್ಣಿಮೆಯನ್ನು ಆಚರಿಸುವುದು ಹುಬ್ಬಳ್ಳಿ ತಾಲೂಕಿನ ಮಲ್ಲಿಗವಾಡ ಗ್ರಾಮದ ಧೂಪದಮಠ ಅವರ ವಸತಿಗೃಹದಲ್ಲಿ ಎಂಬುವುದೇ ವಿಶೇಷ. ಹೌದು ಗೌರಿ ಹುಣ್ಣಿಮೆಯ ಬಂತು ಅಂದರೆ ಸಾಕು ಎರಡು ದಿನ ಮುಂಚಿತವಾಗಿ ಮನೆಗೆ ಸುಣ್ಣ-ಬಣ್ಣ ಬಳೆದು ಮನೆಯನ್ನು ಸ್ವಚ್ಛಗೊಳಿಸಿ, ಹಿರಿಯರು ಹಿಂದಿನ ಕಾಲದಿಂದ ಮಾಡಿಕೊಂಡು ಬಂದಂತಹ ಪದ್ಧತಿಯನ್ನು ಚಾಚು ತಪ್ಪದೇ ಪಾಲನೆ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಮನೆಯ ಒಂದು ಸಣ್ಣ ಹಾಲ್‌ನಲ್ಲಿ ಮಂಟಪ ಕಟ್ಟಿ, ಮನೆಯ ತುಂಬಾ ಲೈಟಿನ ಸರ, ಬಿಂಗ್‌ಗಳಿಂದ ಶೃಂಗಾರಗೊಳಿಸಿ ಗ್ರಾಮದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಸಂಜೆ 7 ಗಂಟೆ ನಂತರ ಗ್ರಾಮದ ಮಹಿಳೆಯರು ಸಿಂಗಾರಗೊಂಡು "ಗೌರಿ ಗೌರಿ ಎಂತಾ ಗಣಪತಿ ಎಂತಾ ಮುತ್ತಿಮೋರ ಎಂತಾ ಚತ್ರು ಗೊಂಬೆ ಅಂತಾ ಹೋಗಿ ಬಾ ಗೌರಿ ಸಾಗಿ ಬಾ ಗೌರಿ" "ಸಾಗ ಸಾಗ ಅಂದ್ರೆ ಎಂದರೆ ನಾಯಂಗ ಸಾಗ್ಲಿ ಸಾಗು ಚಿತ್ರ ಅಲ್ಲ ಉಳಿವಿ ಬಸವಣ್ಣ ಅಲ್ಲ ದಡಮ್ಮ ದಡಕಿ ಪಾವೈರ ಅಡಕಿ" "ಒಂದ ಸೇರು ಎಣ್ಣೆಯ ತಂದು ಒಂದ ದಿನ್ನದ ಹೋಳಿಗೆ ಮಾಡಿ ನಮ್ಮ ರಾಯರಾಡುದು ಹಾದಿಬಿದಿಯ್ಯಾಗಾ ನಾವ್ ಆಡುದು ಗಂಗಿ ಪೋಳ್ಯಾಗಾ ಏಕದಾರುತೆ ಗೌರಿ ಬೆಳಗದಾರುತೆ" ಎಂಬ ಗೌರಿ ಹಾಡುಗಳನ್ನು ಹಾಡುತ್ತಾ ಗ್ರಾಮದ ರುದ್ರಯ್ಯ ಶೇಖರಯ್ಯ ಧೂಪದಮಠ ಅವರ ವಸತಿಗೃಹಕ್ಕೆ ಮಹಿಳೆಯರು ಆಗಮಿಸಿ, ಗೌರಿದೇವಿ ಹಾಡುಗಳನ್ನು ಹಾಡುತ್ತಾ ದರ್ಶನ ಪಡೆದು ತೆರಳುತ್ತಾರೆ.

ಅದ್ಧೂರಿಯಾಗಿ ಹುಣ್ಣಿಮೆಯನ್ನು ಆಚರಿಸುವ ಮೂಲಕ ಹಬ್ಬಕ್ಕೆ ಕಪ್ಪು ಚುಕ್ಕೆ ಬರದ ಹಾಗೇ ಆಚರಿಸುತ್ತಾರೆ. ಗೌರಿ ಮಾತೆ ದರ್ಶನ ಪಡೆಯುತ್ತಾರೆ.