ವೀರ್ಯ ಮತ್ತು ಬ್ರಹ್ಮಚರ್ಯದ ಮಹಿಮೆ

By
ವೀರ್ಯವು ನಮ್ಮ ರಕ್ತದ ಸಾರವಾಗಿದೆ. ವೀರ್ಯವು ಮನುಷ್ಯ ಜೀವನದ ರತ್ನವಾಗಿದೆ. ೭೦-೮೦ ಹನಿರಕ್ತ ಕೂಡಿ ೧ ಹನಿ ವೀರ್ಯವಾಗುತ್ತದೆ. ಇಂಥ ಪವಿತ್ರ ವೀರ್ಯವನ್ನು ೧೬-೧೮ ವರ್ಷದ ಬಾಲಕರು ವೀರ್ಯದ ಚಾಪಲ್ಯಕ್ಕೆ ಒಳಗಾಗದೆ, ಮನಸ್ಸನ್ನು ಸ್ವಾಧೀನ ಇಟ್ಟುಕೊಂಡು ಪರಿಶುದ್ಧಾತ್ಮಕವರಾಗಿದ್ದಾರೆ ಅವರ ವೀರ್ಯವು ಪುನಃ ತಮ್ಮ ರಕ್ತದಲ್ಲಿ ಕೂಡಿ ನರಗಳಿಗೆ ಶಕ್ತಿಯನ್ನೂ, ಮುಖ್ಯ ಕಾಂತಿಯನ್ನೂ ಅವಯವಗಳಿಗೆ ಸೌಂದರ್ಯತೆಯನ್ನೂ ದೇಹಕ್ಕೆ ದೃಢತ್ವ ಹಾಗೂ ಸೌಕ್ಯವನ್ನೂ ಕೊಡುವದು. ಇದೇ ಬ್ರಹ್ಮಚರ್ಯವನ್ನು ಪಾಲಿಸುವದರಿಂದುಂಟಾದ ಫಲವು ಇದಲ್ಲ ಇದರಿಂದ ಮೇಧಾ ಶಕ್ತಿಯು ಧೈರ್ಯವು ಚಟುವಟಿಕೆಯು ಬೆಳೆಯುತ್ತದೆ. ಇಂದ್ರಿಯವನ್ನು ಯಾವ ವಿಧದಿಂದಲೂ ಸ್ಕಲವಾಗದಂತೆ ನೋಡಿಕೊಳ್ಳಬೇಕು.

ಮನಸ್ಸನ್ನು ಸ್ವಾಧೀನ ಮಾಡಿಕೊಳ್ಳಲು ಶಕ್ತಿಯಿಲ್ಲದೆ ಚಿಕ್ಕ ವಯಸ್ಸಿನಲ್ಲಿ ಅಲ್ಪ ಸುಖವಾದ ಸ್ತ್ರೀ ಸಂಭೋಗ ವಿಷಯಕ್ಕಿಳಿಸಿದರೆ ವೀರ್ಯವು ರಕ್ತದಲ್ಲಿ ಸೇರಿ ಶಕ್ತಿಯನ್ನುಂಟು ಮಾಡುವದಕ್ಕೆ ಬದಲು ರಾತ್ರಿಯೊಳು ಸ್ವಪ್ನಾವಸ್ಥೆಯುಂಟಾಗಿ ವೀರ್ಯ ಪತನವಾಗಿ ಶಕ್ತಿಯನ್ನೂ ಅಸಂತೋಷವನ್ನೂ ಹುಟ್ಟಿಸುವದು. ಪ್ರತಿಯೊಬ್ಬ ಮನುಷ್ಯನು ಚಿಕ್ಕ ವಯಸ್ಸಿನಲ್ಲಿ ವೀರ್ಯನಿಗ್ರಹ ಮಾಡಿ ಮನಸ್ಸನ್ನು ಸ್ವಾಧೀನಪಡಿಸಿಕೊಂಡಿದ್ದರೆ ಗ್ರಹಸ್ಥಾಶ್ರಮವನ್ನು ಹೊಂದಲು ಅರ್ಹನಾಗುವನು. ಈ ಹಿಂದೆ ಹೇಳಿದಂತೆ ಬ್ರಹ್ಮಚರ್ಯ ವ್ರತದಿಂದಿರುವಷ್ಟು ಕಾಲ ಅಂದರೆ ೨೫ ವರ್ಷ ಪರ್ಯಂತರವಿದ್ದು, ಆ ಮೇಲೆ ಗ್ರಹಸ್ಥಾಶ್ರಮವನ್ನು ಕೈಕೊಳ್ಳಿರಿ ಗ್ರಹಸ್ಥಾ ಶ್ರಮ, ಹೊಂದಿದ (ಲಗ್ನವಾದ) ನಂತರವೂ, ಆತ್ಮ ಸಂಯಮನೆಯ (ಮನಸ್ಸನ್ನು ) ಸ್ವಾದೀನದಲ್ಲಿಟ್ಟುಕೊಳ್ಳುವದು ಇರಬೇಕು.

ಗ್ರಹಸ್ಥಾಶ್ರಮ ಜೀವನದಲ್ಲಿ ಕೂಡಾ ಬ್ರಹ್ಮಚರ್ಯ ವ್ರತವನ್ನು ಸಾಧಿಸಬಹುದು ಕೇವಲ ಸಂತಾನೋತ್ಪಾದನೆಗಾಗಿ ಹೊರತು ವ್ರಥಾ ವೀರ್ಯವನ್ನು ನಷ್ಟಮಾಡಿಕೊಳ್ಳದಿದ್ದರೆ ಗೃಹಸ್ಥಾಶ್ರಮ ಜೀವನದಲ್ಲಿ ಬ್ರಹ್ಮಚರ್ಯವನ್ನು ಸಾಧಿಸಿದಂತಾಗುತ್ತದೆ. ಇದರ ವಿಷಯವಾಗಿ ಸಂಸಾರಿಗಳಿಗೆ ಒಂದು ಕಾಲವನ್ನು ಕೂಡಾ ಪೂರ್ವಜರು ನಿಯಮಿಸಿರುವರು ಅದನ್ನು ಮುಂದೆ ಬರೆದಿದೆ. ಪ್ರತಿಯೊಬ್ಬ ಸಂಸಾರಿಯು ಕಾಲ ನಿಯಮವನ್ನು ಲಕ್ಷಿಸಿಸದೆ ವೀರ್ಯವನ್ನು ನಾಶ ಮಾಡಿಕೊಂಡರೆ, ತನ್ನ ನಾಶವನ್ನು ತಾನೇ ಮಾಡಿಕೊಂಡಂತಾಗುವದು. ಯಾವ ಮನುಷ್ಯನು ತನ್ನ ಉತ್ಪನ್ನಕ್ಕಿಂತ ಹೆಚ್ಚು ಖರ್ಚನ್ನು ಮಾಡುವನೋ ಅವನು ಸ್ವಲ್ಪ ದಿನದಲ್ಲೇ ದಿವಾಳಿ ತೆಗೆಯುವನು. ವೀರ್ಯದಂಥ ಅಮೂಲ್ಯ ಪದಾರ್ಥವು

ಈ ನಾಲ್ಕು ಜಾತಿ ಸ್ತ್ರೀಯರ ಭಾವಚಿತ್ರಗಳು















ಇಲ್ಲಿ ತೋರಿಸಿದ ಪದ್ದಿನಿ, ಚಿತ್ತಿನಿ, ಶಂಖಿನಿ, ಹಸ್ತಿನಿ, ಎಂಬ ನಾಲ್ಕು ಜಾತಿ ಸ್ತ್ರೀಯರ ಆಕಾರ-ಪ್ರಮಾಣದಂತೆಯೇ ಕ್ರಮವಾಗಿ ಶಶಕ, ಮೃಗ, ವೃಷಭ, ಅತ್ವ ಈ ನಾಲ್ಕು ಜಾತಿಯ ಪುರುಷರ ಆಕಾರ ಪ್ರಮಾಣವಿರುವದರಿಂದ ಪ್ರತ್ಯೇಕವಾಗಿ ಇವರ ಚಿತ್ರಗಳನ್ನು ಬರೆದಿರುವದಿಲ್ಲ. ಈ ನಾಲ್ಕು ಜಾತಿಯ ಪುರುಷರ ಮತ್ತು ಸ್ತ್ರೀಯ ಗುಣ-ಸ್ವಭಾವಾದಿಗಳನ್ನು ಹಿಂದೆ ವಿಸ್ತಾರವಾಗಿ ತಿಳಿಸಿದೆ, ನೋಡಿಕೊಳ್ಳಿರಿ. ಸಂಸಾರದಲ್ಲಿ ಬೇರೊಂದಿಲ್ಲ, ಇದರಂಥ ಸುಖಕರದಾಯಕವಾದ ಬೇರೊಂದು ವಡುವೆಯಿಲ್ಲ. ಬ್ರಹ್ಮಚರ್ಯವನ್ನು ಸರಿಯಾಗಿ ಪಾಲಿಸುವ ದಂಪತಿಗಳಿಗೆ ಸರ್ವಾಂಗ ಸುಂದರ-ಸಶಕ್ತ ದೀರ್ಘಾಯುಷಿ ಪ್ರತಿಭಾಶಾಲಿ ಮತ್ತು ಸತತೋದ್ಯೋ ರಿಯು ಸಂತಾನವು ಹುಟ್ಟುವದು.