ಹುಡುಗರಿಗೆ ಕನ್ಯೆ ಸಿಗದಿರಲೂ ಇದೊಂದೇ ಕಾರಣವೇ

By


ಮದುವೆಯಾಗಲು ಕೇಂದ್ರ-ರಾಜ್ಯ ಸರ್ಕಾರಗಳ ಆದೇಶ ಅನ್ವಯ ಹುಡುಗನಿಗೆ 21 ವರ್ಷ ಹುಡುಗಿಗೆ 18 ವರ್ಷ ವಯಸ್ಸು ಪೂರ್ಣಗೊಂಡಿರಬೇಕು. ಆದರೆ 30-35 ವರ್ಷವಾದರೂ ಬಹುತೇಕ ಹುಡುಗರಿಗೆ ಕನ್ಯೆ ಸಿಗುತ್ತಿಲ್ಲ. ಅದರಲ್ಲೂ ರೈತರು, ಕೂಲಿ ಕಾರ್ಮಿಕರು, ಬಡವರು ಇದ್ದಂತಹ ಹುಡುಗರಿಗೆ ಕನ್ಯೆ ಸಿಗುತ್ತಿಲ್ಲ. ಕಾರಣ ಹೆಣ್ಣಿನ ಮನೆಯವರು ಸರ್ಕಾರಿ ನೌಕರಿ ಡಿಮ್ಯಾಂಡ್ ಮಾಡ್ತಾರೆ ಅಂತೆ. ಬಹುತೇಕ ಹುಡುಗರಿಗೆ ಇದೊಂದು ಕಾರಣದಿಂದಾಗಿ ಮದುವೆ ಆಗಲು ಸಮಸ್ಯೆಯಾಗುತ್ತಿದೆ. ಸರ್ಕಾರಿ ಹುದ್ದೆ ಅನ್ನುವುದು ಎಲ್ಲರಿಗೂ ಸಿಗುವುದಿಲ್ಲ. ಅದೊಂದು ಲಾಟರಿ ಆಗಿದ್ದು, ಎಲ್ಲರೂ ಸರ್ಕಾರಿ ನೌಕರಿ ಬೇಕು ಅಂದರೆ ಯಾರು ರೈತರು ಇರಲ್ಲ ಆಗ ಆಹಾರಕ್ಕಾಗಿ ಪರದಾಡುವ ಸನ್ನಿವೇಶ ಸೃಷ್ಟಿಯಾಗುತ್ತದೆ.

ಸರ್ಕಾರಿ ನೌಕರಿ ಪಡೆದವರು ಸಾರ್ವಜನಿಕರ ಸೇವೆ ಮಾಡುವುದೇ ಅಪರೂಪ. ಅದರಲ್ಲೂ ಸಮಸ್ಯೆ ಹೇಳಲು ಬಂದ ಸಾರ್ವಜನಿಕರನ್ನು ಕಚೇರಿಯಿಂದ ಅಲೆದಾಡುವ ಮನಸ್ಥಿತಿ ಇದೆ. ಅದಕ್ಕಾಗಿ ಬಹುತೇಕ ಹುಡುಗರ ಬೇಡಿಕೆ ಏನೆಂದರೆ ಕೇಂದ್ರ ಸೇರಿದಂತೆ ಬೇರೆ ರಾಜ್ಯದ ಊಸ್ ಬರಿ ಬದಲು. ನಮ್ಮ ರಾಜ್ಯದ ಸರ್ಕಾರಿ ಹುದ್ದೆಯನ್ನು ಖಾಸಗೀಕರಣ ಮಾಡುವ ಮೂಲಕ ಖಾಸಗಿ ಹುದ್ದೆ ಎಂದು ಪರಿಗಣಿಸಿದರೇ, ಕರ್ನಾಟಕ ರಾಜ್ಯದ ಎಲ್ಲ ಹುಡುಗರಿಗೂ ಮದುವೆ ಆಗುವ ಯೋಗ್ಯ ಕೂಡಿ ಬರಲಿದೆ ಎಂಬ ಆಶಾಭಾವನೆ. ಸರ್ಕಾರಿ ನೌಕರಿಯಿಂದ ಹುಡುಗರಿಗೂ ಕನ್ಯೆ ಸಿಗುತ್ತಿಲ್ಲ. ಜೊತೆಗೆ ಸಾರ್ವಜನಿಕರ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತಿಲ್ಲ. ಲಂಚ ತಿನ್ನುವ ವ್ಯವಸ್ಥೆಯು ಹೋಗುತ್ತಿಲ್ಲ.

ಭ್ರಷ್ಟಾಚಾರ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಭ್ರಷ್ಟಾಚಾರ ತಡೆಯುವ ತನಿಖಾ ಸಂಸ್ಥೆಗಳ ಅಧಿಕಾರಿಗಳಿಗೆ ದಾಳಿ ಮಾಡದಂತೆ ರಾತ್ರೋರಾತ್ರಿ ಸೂಟ್ ಕೇಸ್ ಆರೋಪವಾಗುತ್ತಿದೆ. ಒಟ್ಟಿನಲ್ಲಿ ಎಲ್ಲ ಸಮಸ್ಯೆಗಳಿಗೂ ಸರ್ಕಾರಿ ನೌಕರಿ ಎಂಬುದೇ ಕಾರಣವಾಗಿದೆ ಎಂಬುದು ಅನೇಕರ ಅಭಿಪ್ರಾಯ. ಅದಕ್ಕಾಗಿ ರಾಜ್ಯ ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ, ಮದುವೆ ವಯಸ್ಸಿಗೆ ಬಂದ ರಾಜ್ಯದ ಎಲ್ಲ ಹುಡುಗರಿಗೂ ಸರ್ಕಾರಿ ನೌಕರಿಯನ್ನು (ಐಪಿಎಸ್, ಐಎಎಸ್, ಕೆಎಎಸ್, ಪೋಲಿಸ್ ಇಲಾಖೆ ಹೊರತುಪಡಿಸಿ) ಖಾಸಗಿ ಹುದ್ದೆ ಎಂದು ಪರಿಗಣಿಸಿದರೇ ಸಾಕು, ಎಲ್ಲರ ಮದುವೆ ಆಗಿ ಸರ್ಕಾರಕ್ಕೆ ಪುಣ್ಯ ಬರಲಿದೆ ಎನ್ನುವುದು ಬಹುತೇಕರ ಆಶಯ.

Virginity Myths, Relationship Dynamics, Societal Pressures, Consent Education, Personal Choice, Communication Matters, Emotional Readiness, Self Esteem, Respect, Compatibility, Individual Preferences, Life Experiences, Misconceptions, Empowerment, Consent Is Key, Romantic Ideals, Relationship Goals, Healthy Boundaries, Sex Positivity, Love Is More Than Sex,