ಜಗತ್ತಿನಲ್ಲಿ ಕಾಡುತ್ತಿರುವ ಭೂತ ಅಂದ್ರೆ ಅದು ಭ್ರಷ್ಟಾಚಾರ. ಭ್ರಷ್ಟಾಚಾರ ಎಂಬ ಭೂತ ಬೇರು ಸಮೇತ ಕಿತ್ತು ಎಸೆಯಲು ಅಥವಾ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವೇ? ಸಾಧ್ಯವೇ ಇಲ್ಲ ಏಕೆಂದರೆ ಭ್ರಷ್ಟಾಚಾರ ನಡೆಸುವವರ ವಿರುದ್ಧ ಲೋಕಾಯುಕ್ತ, ಎಸಿಬಿ, ಐಟಿ, ಸಿಬಿಐ ಸೇರಿದಂತೆ ಇನ್ನಿತರ ಭ್ರಷ್ಟಾಚಾರ ಇಲಾಖೆಗಳನ್ನು ಸರ್ಕಾರಗಳು ರಚನೆ ಮಾಡಿವೆ. ಆದರೆ ಈ ಎಲ್ಲ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ನಿಷ್ಠಾವಂತರೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯಗಳಲ್ಲಿ ಕಾಡುತ್ತಿದೆ. ಭ್ರಷ್ಟರನ್ನು ಬೇಟೆಯಾಡುವ ಅಧಿಕಾರಿಗಳು ಭ್ರಷ್ಟರಾದಾಗ ಜಗತ್ತು ಯಾವ ರೀತಿ ಕೀಳು ಮಟ್ಟಕ್ಕೆ ಹೋಗಬಹುದು? ಭ್ರಷ್ಟರನ್ನು ಬೇಟೆಯಾಡುವ ಲೋಕಾಯುಕ್ತ, ಎಸಿಬಿ, ಐಟಿ, ಸಿಬಿಐ ಸೇರಿದಂತೆ ಇನ್ನಿತರ ಭ್ರಷ್ಟಾಚಾರ ಇಲಾಖೆಗಳ ಅಧಿಕಾರಿಗಳಿಗೆ ರಾತ್ರೋರಾತ್ರಿ ಸೂಟ್ಕೇಸ್ ಬರುತ್ತಿದೆ? ಎಂಬ ಅರೋಪ ಕೇಳಿ ಬರುತ್ತಿದೆ.
ಅಲ್ಲದೇ ಐಎಎಸ್, ಐಪಿಎಸ್, ಕೆಎಸ್‌ಎ ಅಧಿಕಾರಿಗಳು ಸೇರಿದಂತೆ ದೊಡ್ಡ ದೊಡ್ಡ ಅಧಿಕಾರಿಗಳಾದ ಇಲಾಖೆಯ ಆಯುಕ್ತರು, ಜಿಲ್ಲಾಧಿಕಾರಿಗಳು, ತಹಸೀಲ್ದಾರರು 10% ಲಂಚ ಎಲ್ಲ ಇಲಾಖೆಗಳು ಕೊಡಲೇಬೇಕು. ಲಂಚ ಕೊಡದೇ ಹೊದ್ರೆ ಮುಖ್ಯವಾಗಿ ಸಹಿ ಮಾಡುವುದಿಲ್ಲ? ಎಂಬ ಆರೋಪ ಕೇಳಿಬರುತ್ತಿದೆ. ದಾಖಲೆ ಸಮೇತ ಅಧಿಕಾರಿಗಳ ಜಾಲ ಪತ್ತೆ ಹಚ್ಚಲು ಒಬ್ರ-ಇಬ್ರ. 100 ಜನ ಅಧಿಕಾರಿಗಳಲ್ಲಿ 2-3 ಜನ ನಿಷ್ಠಾವಂತ ಅಧಿಕಾರಿಗಳು ಇರಬಹುದೇನು. ಒಟ್ಟಿನಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಭ್ರಷ್ಟರನ್ನು ಹಿಡಿಯುವ ಅಧಿಕಾರಿಗಳು ಭ್ರಷ್ಟರೇ? ಅದಾಗ ಹೇಗೆ ತಾನೇ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ.
ಅಲ್ಲದೇ ತೆರಿಗೆ ವಿಷಯದಲ್ಲೂ ಸರ್ಕಾರಕ್ಕೆ ವಂಚನೆ ಮಾಡಲಾಗುತ್ತಿದೆ. ಭ್ರಷ್ಟ ಅಧಿಕಾರಿಗಳ ಭ್ರಷ್ಟಾಚಾರ ಮುಚ್ಚಿ ಹಾಕಲು ಕೆಲ ಪತ್ರಕರ್ತರಿಗೂ ಹಣದ ಅಮಿಷವೊಡ್ಡಿದ್ದು ಸುಳ್ಳಲ್ಲ. ರಾಜಕಾರಣಿಗಳು ಮತ್ತು ಅಧಿಕಾರಿಗಳ ಆಸ್ತಿ, ಅಂತಸ್ತು, ಸೇರಿದಂತೆ ಎಲ್ಲ ವೈಯಕ್ತಿಕ ಮತ್ತು ಕುಟುಂಬ ಆದಾಯದ ಬಗ್ಗೆ ಆರ್.ಟಿ.ಐ ಅಡಿ ವ್ಯಾಪ್ತಿಗೆ ತರಬೇಕು ಮತ್ತು ವೆಬ್‌ಸೈಟ್‌ನಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು ಅಂದಾಗ ಭ್ರಷ್ಟರ ಮಾಹಿತಿ ತಿಳಿಯಲಿದೆ. ಒಟ್ಟಿನಲ್ಲಿ ಹಿಂದೆ ನಡೆದಿದ್ದ ಘಟನೆಗಳನ್ನು ಅಧಿಕಾರಿಗಳು ಮರೆತು ಇನ್ನುಮುಂದೆಯಾದರೂ ಬೇಟೆಯಾಡುವ ಅಧಿಕಾರಿಗಳು ಮತ್ತು ಎಲ್ಲ ಇಲಾಖೆಗಳಿಂದ 10% ಲಂಚ ಸ್ವೀಕರಿಸುವ ದೊಡ್ಡ ದೊಡ್ಡ ಅಧಿಕಾರಿಗಳು ಎಚ್ಚೆತ್ತಕೊಂಡು ಒಳ್ಳೆಯ ಅಧಿಕಾರಿಗಳಾಗಿ ದೇಶ, ರಾಜ್ಯದಲ್ಲಿ ಕಾರ್ಯನಿರ್ವಹಿಸುವಂತಾಗಲಿ ಎನ್ನುವುದು ಜನರ ಅಭಿಮತವಾಗಿದೆ.